ಮೋಟೋ ಜಿಪಿ: 19 ವರ್ಷದ ರೈಡರ್ ದಾರುಣ ಸಾವು

19 ವರ್ಷ ಹರೆಯದ ಸ್ವಿಸ್ ಮೋಟೊ 3 ರೈಡರ್ ಜೇಸನ್ ಡುಪಾಸ್ಕ್ವಿಯರ್ ರೇಸಿಂಗ್ ವೇಳೆ ನಡೆದ ಅಪಘಾತದಿಂದ ಮೃತಪಟ್ಟಿದ್ದಾರೆ. ಶನಿವಾರ ನಡೆದ ಇಟಾಲಿಯನ್ ಗ್ರ್ಯಾಂಡ್ ಪ್ರಿಕ್ಸ್‌ನ ಅರ್ಹತಾ ರೇಸ್‌ನಲ್ಲಿ ಈ ಘಟನೆ ನಡೆದಿದ್ದು ಭಾನುವಾರ ಮೋಟೋ ಜಿಪಿ ಸಂಘಟನೆ ಅಧಿಕೃತವಾಗಿ ಘೋಷಣೆ ಮಾಡಿದೆ.
ಮುಂಬೈ ತಂಡದಲ್ಲಿದ್ದಾಗ ಅವಕಾಶ ಸಿಗದೇ ಕಡೆಗಣಿಸಲ್ಪಟ್ಟ ಈ ಆಟಗಾರರು ಇಂದು ಸ್ಟಾರ್ ಪ್ಲೇಯರ್ಸ್!
ಶನಿವಾರ ನಡೆಯುತ್ತಿದ್ದ ಅರ್ಹತಾ ಸುತ್ತಿನಲ್ಲಿ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಬಳಿಕ ಟ್ರ್ಯಾಕ್‌ನಲ್ಲಿಯೇ ಜೇಸನ್ ಡುಪಾಸ್ಕ್ವಿಯರ್ ಜಾರಿದ ಕಾರಣದಿಂದಾಗಿ ಎದೆ ಮತ್ತು ತಲೆಯ ಭಾಗಕ್ಕೆ ವಿಪರೀತವಾದ ಪೆಟ್ಟು ಬಿದ್ದಿತ್ತು. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ವೈದ್ಯರು ಅಗತ್ಯವಿದ್ದ ಚಿಕಿತ್ಸೆಯನ್ನು ನೀಡಿದ ನಂತರ ಆತನನ್ನು ಫ್ಲಾರೆನ್ಸ್‌ನ ಕೇರ್ಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಯಾರಾಗ್ತಾರೆ ಧೋನಿ ಬಳಿಕ ಚೆನ್ನೈ ತಂಡದ ನಾಯಕ? ಈ 5 ಆಟಗಾರರ ಮೇಲೆ ಸಿಎಸ್‌ಕೆ ಕಣ್ಣು!
ತೀವ್ರ ಅಪಘಾತಕ್ಕೊಳಗಾಗಿದ್ದ ಜೇಸನ್ ಡುಪಾಸ್ಕ್ವಿಯರ್‌ನ್ನು ತಡರಾತ್ರಿ ಎದೆ ಸಂಬಂಧಿತ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು ಹಾಗೂ ಮಿದುಳಿನಲ್ಲಿ ತೀವ್ರ ರಕ್ತಸ್ರಾವವಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಜೇಸನ್ ಮೃತಪಟ್ಟಿದ್ದಾನೆ. ವಿಷಯವನ್ನು ಭಾನುವಾರ ಬೆಳಿಗ್ಗೆ ಮೋಟೋ ಜಿಪಿ ಅಧಿಕೃತವಾಗಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications