Independence Day: ಸ್ವಾತಂತ್ರ್ಯ ದಿನದ ಅಚ್ಚುಮೆಚ್ಚಿನ ನೆನಪುಗಳನ್ನು ಹಂಚಿಕೊಂಡ ವಿರಾಟ್ ಕೊಹ್ಲಿ
ಭಾರತ ದೇಶವು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಈ ಶುಭ ಸಂದರ್ಭದಲ್ಲಿ ಸಹ ದೇಶವಾಸಿಗಳಿಗೆ ಶುಭ ಕೋರಲು ಭಾರತೀಯರು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡರು.
ಇದೇ ವೇಳೆ ಭಾರತೀಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿ, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.
ಇದೇ ವೇಳೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷಗಳನ್ನು ಪೂರೈಸಲಿದ್ದಾರೆ. ಕೊಹ್ಲಿ ಅವರು ಅತಿ ಉತ್ಸಾಹದಿಂದ ಭಾರತ ತಂಡವನ್ನು ಪ್ರತಿನಿಧಿಸುವ ಆಟಗಾರನಾಗಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಯೋಧನ ತರಹದ ಮನಸ್ಥಿತಿಯು ಅವನ ಸಹ ಆಟಗಾರರ ಮೇಲೆಯೂ ಪ್ರಭಾವ ಬೀರುತ್ತದೆ ಮತ್ತು ಆಟಗಾರರ ಉತ್ಸಾಹವನ್ನು ಇನ್ನಷ್ಟು ಹೆಚ್ಚುಗೊಳಿಸುತ್ತದೆ.
ಭಾರತದ ಸ್ವಾತಂತ್ರ್ಯ ದಿನವಾದ ಆಗಸ್ಟ್ 15 ತನಗೆ ಎಷ್ಟು ವಿಶೇಷವಾಗಿದೆ ಎಂಬುದರ ಕುರಿತು ವಿರಾಟ್ ಕೊಹ್ಲಿ ಸ್ಪಷ್ಟವಾದ ಅಭಿಪ್ರಾಯವನ್ನು ನೀಡಿದ್ದಾರೆ. 34 ವರ್ಷದ ಕೊಹ್ಲಿ ತಮ್ಮ ದಿವಂಗತ ತಂದೆ ಕೂಡ ಆಗಸ್ಟ್ 15ರಂದು ಜನಿಸಿದರು. ಇದು ತಮಗೆ ಈ ದಿನವು ಇನ್ನಷ್ಟು ವಿಶೇಷವಾಗಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ.
"ಸ್ವಾತಂತ್ರ್ಯ ದಿನವು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ವಿಶೇಷವಾಗಿ, ಭಾರತದಲ್ಲಿ ಅದನ್ನು ಆಚರಿಸುವ ರೀತಿ ಮತ್ತು ಅದರ ಸುತ್ತಲೂ ನಡೆದ ಅನೇಕ ಘಟನೆಗಳ ಕಾರಣದಿಂದ. ನನಗೆ ಇದು ನನ್ನ ತಂದೆಯ ಜನ್ಮದಿನವಾದ್ದರಿಂದ ಇದು ಹೆಚ್ಚು ವಿಶೇಷವಾಗಿದೆ," ಎಂದು ವಿರಾಟ್ ಕೊಹ್ಲಿ ತಿಳಿಸಿದರು.
"ಎರಡೂ ಸಂದರ್ಭಗಳನ್ನು ಆಚರಿಸಿದ್ದರಿಂದ ಈ ಸ್ವಾತಂತ್ರ್ಯ ದಿನ ಹೆಚ್ಚು ವಿಶೇಷವಾಗಿತ್ತು. ನನಗೆ ಸ್ವಾತಂತ್ರ್ಯ ದಿನಾಚರಣೆಯ ಹಲವು ಅಚ್ಚುಮೆಚ್ಚಿನ ನೆನಪುಗಳಿವೆ," ಎಂದು ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಹೇಳಿದ್ದಾರೆ.
"ಸ್ವಾತಂತ್ರ್ಯದ ನಂತರ ನಾವು ರಾಷ್ಟ್ರವಾಗಿ ಏನು ಸಾಧಿಸಿದ್ದೇವೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ. ಸ್ವಾತಂತ್ರ್ಯದ ದಿನಗಳಲ್ಲಿ ಹೆಚ್ಚಿನದಾಗಿ ನಾನು ಪಂದ್ಯಗಳನ್ನು ಆಡುತ್ತೇನೆ ಅಥವಾ ಧ್ವಜಾರೋಹಣ ಮಾಡುತ್ತೇನೆ. ರಾಷ್ಟ್ರಗೀತೆ ನುಡಿಸಿದಾಗ ಅದು ಹೆಮ್ಮೆಯ ಕ್ಷಣವಾಗಿರುತ್ತದೆ," ಎಂದು ವಿರಾಟ್ ಕೊಹ್ಲಿ ತಿಳಿಸಿದರು.
ದೆಹಲಿಯಲ್ಲಿ ಗಾಳಿಪಟ ಹಾರಾಟದ ದಿನಗಳನ್ನು ನೆನಪಿಸಿಕೊಂಡ ವಿರಾಟ್ ಕೊಹ್ಲಿ
ಸ್ವಾತಂತ್ರ್ಯ ದಿನದಂದು ದೆಹಲಿಯಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ವಿರಾಟ್ ಕೊಹ್ಲಿ ಅವರು ತಾವು ಗಾಳಿಪಟಗಳನ್ನು ಹಾರಿಸುವುದನ್ನು ಆನಂದಿಸುತ್ತಿದ್ದೆ ಎಂದು ಬಹಿರಂಗಪಡಿಸಿದರು. ತಮ್ಮ ಕುಟುಂಬದೊಂದಿಗೆ ಒಂದು ದಿನ ಮುಂಚಿತವಾಗಿ ಸಿದ್ಧತೆಗಳನ್ನು ಹೇಗೆ ಮಾಡುತ್ತಿದ್ದರು ಎಂದು ಹೇಳಿದರು.
"ದೆಹಲಿಯಲ್ಲಿ ಸ್ವಾತಂತ್ರ್ಯ ದಿನದಂದು ಗಾಳಿಪಟ ಹಾರಿಸುವ ಸಂಸ್ಕೃತಿ ಇದೆ. ಆದ್ದರಿಂದ ಬಾಲ್ಯದ ದಿನಗಳಲ್ಲಿ ಅದು ತುಂಬಾ ವಿಶೇಷವಾಗಿತ್ತು. ನಾವು ಹಿಂದಿನ ರಾತ್ರಿ ಸಾಕಷ್ಟು ತಯಾರಿ ನಡೆಸುತ್ತಿದ್ದೆವು. ಸಾಮಾನ್ಯವಾಗಿ ದೆಹಲಿಯಲ್ಲಿ ಸ್ವಾತಂತ್ರ್ಯ ದಿನದಂದು ಗಾಳಿ ಬೀಸುತ್ತದೆ," ಎಂದು ವಿರಾಟ್ ಕೊಹ್ಲಿ ವಿಡಿಯೋದಲ್ಲಿ ಬಹಿರಂಗಪಡಿಸಿದರು.
ಆಗಸ್ಟ್ 30ರಂದು ಪಾಕಿಸ್ತಾನ ತಂಡವು ನೇಪಾಳ ತಂಡವನ್ನು ಮುಲ್ತಾನ್‌ನಲ್ಲಿ ಎದುರಿಸುವುದರೊಂದಿಗೆ ಆರಂಭವಾಗುವ 2023ರ ಏಷ್ಯಾ ಕಪ್‌ನಲ್ಲಿ ಭಾರತದ ಬ್ಯಾಟರ್ ಮೈದಾನಕ್ಕೆ ಹಿಂದಿರುಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications