ಟೋಕಿಯೋ ಒಲಿಂಪಿಕ್ಸ್: ಆಗಸ್ಟ್ 2ಕ್ಕೆ ಭಾರತೀಯರ ವೇಳಾಪಟ್ಟಿ

ಟೋಕಿಯೋ, ಆಗಸ್ಟ್ 1: ಟೋಕಿಯೋ ಒಲಿಂಪಿಕ್ಸ್‌ನ ಹತ್ತಿ ದಿನಗಳ ಕ್ರೀಡಾಕೂಟ ಅಂತ್ಯವಾಗಿದೆ. ಈ ಹಂತದಲ್ಲಿ ಭಾರತದ ಎರಡು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 10ನೇ ದಿನ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಈ ಮಧ್ಯೆ ಭಾರತ 11ನೇ ದಿನದಾಟಕ್ಕೆ ಸಜ್ಜಾಗಿದೆ. 11ನೇ ದಿನವೂ ಭಾರತದ ಸಾಕಷ್ಟು ಕ್ರೀಡಾಪಟುಗಳು ಅಗ್ನಿಪರೀಕ್ಷೆಯನ್ನು ಎದುರಿಸಲಿದ್ದಾರೆ. ಸೋಮವಾರ ಭಾರತೀಯ ಕ್ರೀಡಾಪಟುಗಳು ಕೆಲ ಪ್ರಮುಖ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಡಿಸ್ಕಸ್‌ಥ್ರೋನಲ್ಲಿ ಮಹಿಳಾ ಆಟಗಾರ್ತಿ ಕಮಲ್‌ಪ್ರೀತ್ ಫಯನಲ್ ಹಂತಕ್ಕೇರಿದ್ದು ಪದಕದ ಭರವಸೆಯಲ್ಲಿದ್ದಾರೆ. ಹೀಗಾಗಿ ಇವರ ಪ್ರದರ್ಶನದ ಮೇಲೆ ಸಾಕಷ್ಟು ಕುತೂಹಲವಿದೆ.
ಇನ್ನು ಬೆಂಗಳೂರಿನ ಫವಾದ್ ಮಿರ್ಜಾ ಕೂಡ ಸೋಮವಾರ ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಮಂಗಳವಾರ ಭಾಗಿಯಾಗಲಿದ್ದಾರೆ. ಮತ್ತೊಂದೆಡೆ ಭಾರತೀಯ ಮಹಿಳಾ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಂಗಳವಾರ ಎದುರಿಸಲಿದೆ. ಇದರಲ್ಲಿ ಗೆದ್ದರೆ ಭಾರತೀಯ ಮಹಿಳಾ ತಂಡ ಕೂಡ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ. ಭಾರತ ಪುರುಷರ ತಂಡ ಭಾನುವಾರ ನಡೆದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಸೆಣೆಸಾಟ ನಡೆಸಿ ಸೆಮಿಫೈನಲ್‌ಗೆ ಯಶಸ್ವಿಯಾಗಿ ಪ್ರವೇಶ ಪಡೆದುಕೊಂಡಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ 11ನೇ ದಿನವಾಗಿರುವ ಸೋಮವಾರ ಭಾರತೀಯ ಕ್ರೀಡಾಪಟುಗಳ ವೇಳಾಪಟ್ಟಿ ಹೇಗಿದೆ. ಮುಂದೆ ಓದಿ..
ಅಥ್ಲೆಟಿಕ್ಸ್:
ಆಥ್ಲೆಟಿಕ್ಸ್ ಮಹಿಳೆಯರ 200 ಮೀಟರ್‌ನ ಹೀಟ್ 4 ಸ್ಪರ್ಧೆಯಲ್ಲಿ ಭಾರತದ ದ್ಯುತಿ ಚಾಂದ್ ಸೋಮವಾರ ಸ್ಪರ್ಧಿಸಲಿದ್ದಾರೆ ದ್ಯುತಿ ಚಾದ್.
ಸಮಯ: ಈ ಸ್ಪರ್ಧೆ ಬೆಳಿಗ್ಗೆ 7:24ಕ್ಕೆ ಆರಂಭವಾಗಲಿದೆ
ಮಹಿಳಾ ಡಿಸ್ಕಸ್ ಥ್ರೋನ ಫೈನಲ್ ಹಂತಕ್ಕೆ ಆಯ್ಕೆಯಾಗಿರುವ ಕಮಲ್‌ಪ್ರೀತ್ ಅವರ ಫೈನಲ್ ಹಂತದ ಸ್ಪರ್ಧೆ ಸೋಮವಾರ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾರತದ ಕೋಟ್ಯಂತರ ಕ್ರೀಡಾಪ್ರೇಮಿಗಳ ನಿರೀಕ್ಷೆಯಿದೆ. ಸಂಜೆ 4:30ಕ್ಕೆ ಈ ಫೈನಲ್ ಸೆಣೆಸಾಟ ನಡೆಯಲಿದೆ.
ಈಕ್ವೆಸ್ಟ್ರಿಯನ್:
ಎರಡು ದಶಕದ ಬಳಿಕ ಈಕ್ವೆಸ್ಟ್ರಿಯನ್ ಸ್ಪರ್ಧೆಗೆ ಅರ್ಹತೆಯನ್ನು ಪಡೆದಿರುವ ಭಾರತ ಸ್ಪರ್ಧಿ ಬೆಂಗಳೂರು ಮೂಲದ ಫವಾದ್ ಮಿರ್ಜಾ ಅವರ ಇವೆಂಟಿಂಗ್ ಎರಡನೇ ಕುದುರೆ ತಪಾಸಣೆ ಬೆಳಿಗ್ಗೆ 6 ಗಂಟೆಗೆ ನಡೆಯಲಿದೆ.
ಫವಾದ್ ಮಿರ್ಜಾ ಅವರ ಈವೆಂಟಿಂಗ್ ಜಂಪಿಂಗ್ ವೈಯಕ್ತಿಕ ಅರ್ಹತೆ ನಾಳೆಯೇ ನಡೆಯಲಿದ್ದು ಮಧ್ಯಾಹ್ನ 1:30 ಈ ಸ್ಪರ್ಧೆ ಆರಂಭವಾಗಲಿದೆ.
ಅರ್ಹತಾ ಸುತ್ತಿನ ಬಳಿಕ ಈವೆಂಟಿಂಗ್ ವೈಯಕ್ತಿಕ ಜಂಪಿಂಗ್‌ನ ಫೈನಲ್ ಸುತ್ತಿನ ಪ್ರದರ್ಶನ ಕೂಡ ಸೋಮವಾರ ನಡೆಯಲಿದೆ. ಸಂಜೆ 5:15ಕ್ಕೆ ಈ ಸ್ಪರ್ಧೆ ಆರಂಭಗೊಳ್ಳಲಿದೆ.
ಮಹಿಳೆಯರ ಹಾಕಿ:
ಇನ್ನು ಮಹಿಳೆಯರ ಹಾಕಿಯಲ್ಲಿ ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದ ಬಳಿಕ ತಿರುಗಿಬಿದ್ದಿರುವ ಭಾರತೀಯ ಮಹಿಳೆಯರ ತಂಡ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ತಂಡ ಎದುರಾಗಿದ್ದು ಮಂಗಳವಾರ ಬೆಳಿಗ್ಗೆ 8:30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಇದೇ ಸಾಧನೆ ಮಹಿಳಾ ತಂಡದಿಂದಲೂ ಬರುವ ನಿರೀಕ್ಷೆಯಿದೆ.
ಶೂಟಿಂಗ್:
ಶೂಟಿಂಗ್‌ನಲ್ಲಿ ಪುರುಷರ 50 ಮೀಟರ್ ರೈಫಲ್ 3 ಸ್ಥಾನಗಳ ಅರ್ಹತಾ ಸುತ್ತು ಮಂಗಳವಾರ ಬೆಳಿಗ್ಗೆ 8:30ಕ್ಕೆ ನಡೆಯಲಿದೆ. ಭಾರತದ ಸ್ಪರ್ಧಿಗಳಾದ ಸಂಜೀವ್ ರಜಪೂತ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಈ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಪುರುಷರ 50 ಮೀ ರೈಫಲ್ 3 ಸ್ಥಾನಗಳ ಫೈನಲ್ ಪಂದ್ಯವೂ ನಾಳೆಯೇ ನಡೆಯಲಿದ್ದು ಮಧ್ಯಾಹ್ನ 1:20ಕ್ಕೆ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications