Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೋಕಿಯೋ ಒಲಿಂಪಿಕ್ಸ್: ಆಗಸ್ಟ್ 5ರ ಭಾರತೀಯ ಕ್ರೀಡಾಪಟುಗಳ ವೇಳಾಪಟ್ಟಿ

Tokyo Olympics 2020: Indian athletes schedule on august 5th

ಟೋಕಿಯೋ, ಆಗಸ್ಟ್ 4: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಿ 13 ದಿನಗಳು ಕಳೆದಿದೆ. ಇಂದು ಭಾರತ ತನ್ನ ಪದಕ ಪಟ್ಟಿಗೆ ಮತ್ತೊಂದು ಪದಕವನ್ನು ಸೇರ್ಪಡೆಗೊಳಿಸಿದೆ. ಭಾರತದ ರೆಸ್ಲರ್ ಲೋವ್ಲಿನಾ ಬೋರ್ಗೋಹೈನ್ ಭಾರತಕ್ಕೆ ಕಂಚಿನ ಪದಕವನ್ನು ತೊಡಿಸಿದ್ದಾರೆ. ಈ ಮೂಲಕ ಭಾರತ ಈವರೆಗೆ ಮೂರು ಪದಕಗಳನ್ನು ಗೆದ್ದುಕೊಂಡಿದೆ. ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಗೆದ್ದಿದ್ದರೆ ಬಳಿಕ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು ಕಂಚಿನ ಪದಕ ಗೆದ್ದುಕೊಂಡಿದ್ದರು.

ಈ ಮಧ್ಯೆ ಭಾರತಕ್ಕೆ ರೆಸ್ಲಿಂಗ್‌ನಲ್ಲಿ ಮತ್ತೊಂದು ಪದಕ ಖಚಿತವಾಗಿದೆ. 57 ಕೆಜಿ ವಿಭಾಗದಲ್ಲಿ ಭಾರತದ ರೆಸ್ಲರ್ ರವಿ ದಾಹಿಯಾ ರೆಸ್ಇಂಗ್ ವಿಭಾಗದಲ್ಲಿ ಫೈನಲ್ ಹಂತಕ್ಕೇರಿದ ಕೇವಲ ಎರಡನೇ ಭಾರತೀಯ ಆಟಗಾರ ಎನಿಸಿದ್ದಾರೆ. ಕಜಕಿಸ್ತಾನದ ನುರಿಸ್ಲಮ್ ಸನಯವ್ ವಿರುದ್ಧ ಗೆದ್ದು ಫೈನಲ್ ಹಂತಕ್ಕೆ ಕಾಲಿಟ್ಟಿದ್ದಾರೆ. ಮಂಗಳವಾರ ಫೈನಲ್ ಪಂದ್ಯ ನಡೆಯಲಿದ್ದು ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆಲ್ಲುವ ಅವಕಾಶವಿದೆ. ಇನ್ನು ಮತ್ತೋರ್ವ ರೆಸ್ಲರ್ ದೀಪಕ್ ಪುನಿಯಾ ಕಂಚಿನ ಪದಕಕ್ಕಾಗಿ ಗುರುವಾರ ಕಾದಾಡಲಿದ್ದಾರೆ.

ಇನ್ನು ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮಹಿಳಾ ಹಾಕಿ ತಂಡ ಇಂದು ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ತಂಡವನ್ನು ಎದುರಿಸಿತು. ಸೆಮಿಫೈನಲ್‌ ಅದ್ಭುತ ಪ್ರದರ್ಶನ ನೀಡಿದರೂ ಗೆಲುವು ಸಾಧಿಸಿ ಫೈನಲ್‌ಗೆ ಏರಲು ಸಾಧ್ಯವಾಗಲಿಲ್ಲ. ಹೀಗಾಗಿ ಭಾರತದ ಚಿನ್ನ ಮತ್ತು ಬೆಳ್ಳಿ ಪದಕದ ಕನಸು ಭಗ್ನವಾಗಿದೆ. ಆದರೆ ಕಂಚಿನ ಪದಕ ಗೆಲ್ಲುವ ಅವಕಾಶ ಭಾರತ ತಂಡಕ್ಕೆ ಇದೆ. ಇನ್ನು ಮತ್ತೊಂದೆಡೆ ಭಾರತ ಪುರುಷರ ತಂಡ ಕೂಡ ಮಂಗಳವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಸೋಲು ಕಂಡ ಕಾರಣ ಕಂಚಿನ ಪದಕದ ಸ್ಪರ್ಧೆಗೆ ಇಳಿಯಲಿದೆ. ಗುರುವಾರ ಈ ಕಂಚಿನ ಪದಕ್ಕಾಗಿ ಪಂದ್ಯ ನಡೆಯಲಿದೆ. ಜರ್ಮನಿ ಈ ಪಂದ್ಯದಲ್ಲಿ ಭಾರತಕ್ಕೆ ಸವಾಲೊಡ್ಡಲಿದ್ದು ಬೆಳಿಗ್ಗೆ ಏಳು ಗಂಟೆಗೆ ಈ ಪಂದ್ಯ ನಡೆಯಲಿದೆ.

ಗುರುವಾರ ಭಾರತದ ಪಾಲಿಗೆ ಮಹತ್ವದ ದಿನವಾಗಿರುವುದರಲ್ಲಿ ಅನುಮಾನವಿಲ್ಲ. ಹೆಚ್ಚಿನ ಪದಕ ಗೆಲ್ಲುವ ಅವಕಾಶವಿದ್ದು ಈ ಸಂದರ್ಭದಲ್ಲಿ ಭಾರತೀಯ ಆಟಗಾರರಿಂದ ಅತ್ಯುತ್ತಮ ಪ್ರದರ್ಶನ ಹೊರಬರುವ ನಿರೀಕ್ಷೆಯನ್ನು ಭಾರತೀಯ ಕ್ರೀಡಾಪ್ರೇಮುಗಳು ವ್ಯಕ್ತಪಡಿಸುತ್ತಿದ್ದಾರೆ.

ಆಗಸ್ಟ್ 5ರಂದು ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

ಅಥ್ಲೆಟಿಕ್ಸ್
ಪುರುಷರ 20 ಕಿಮೀ ರೇಸ್ ವಾಕ್ ಫೈನಲ್:
ಕೆಟಿ ಇರ್ಫಾನ್, ರಾಹುಲ್ ರೋಹಿಲ್ಲಾ, ಸಂದೀಪ್ ಕುಮಾರ್
ಮಧ್ಯಾಹ್ನ 1:00 ಗಂಟೆಗೆ

ಗಾಲ್ಫ್
ಮಹಿಳೆಯರ 2ನೇ ಸುತ್ತು
ಅದಿತಿ ಅಶೋಕ್
ಬೆಳಿಗ್ಗೆ 5:55ಕ್ಕೆ ಆರಂಭ
ಮಹಿಳೆಯರ 2ನೇ ಸುತ್ತು
ದೀಕ್ಷಾ ಡಾಗರ್
ಬೆಳಿಗ್ಗೆ 7:39ಕ್ಕೆ ಆರಂಭ

ಹಾಕಿ
ಪುರುಷರ ಕಂಚಿನ ಪದಕ ಪಂದ್ಯ
ಜರ್ಮನಿ vs ಭಾರತ - 7:00

ಕುಸ್ತಿ
ಮಹಿಳೆಯರ ಫ್ರೀಸ್ಟೈಲ್ 53 ಕೆಜಿ, 16ರ ಘಟ್ಟದ ಪಂದ್ಯ
ವಿನೇಶ್ ಫೋಗಟ್ vs ಸೋಫಿಯಾ ಮ್ಯಾಟ್ಸನ್
ಬೆಳಿಗ್ಗೆ 8:00 ಗಂಟೆಗೆ ಆರಂಭ

ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ಕ್ವಾರ್ಟರ್ ಫೈನಲ್(ವಿನೇಶ್ ಫೋಗಟ್ ಗೆದ್ದರೆ)
ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ಸೆಮಿಫೈನಲ್(ವಿನೇಶ್ ಫೋಗಟ್ ಗೆದ್ದರೆ)

ಮಹಿಳೆಯರ ಫ್ರೀಸ್ಟೈಲ್ 57 ಕೆಜಿ ರಿಪೇಜ್
ಅಂಶು ಮಲಿಕ್ vs ವಲೇರಿಯಾ ಕೊಬ್ಲೋವಾ

ಪುರುಷರ ಫ್ರೀಸ್ಟೈಲ್ 57 ಕೆಜಿ ಫೈನಲ್ ಪಂದ್ಯ
ರವಿ ಕುಮಾರ್ ದಹಿಯಾ vs ಜೌರ್ ಉಗುವ್

ಪುರುಷರ ಫ್ರೀಸ್ಟೈಲ್ 86 ಕೆಜಿ ಕಂಚಿನ ಪದಕ ಪಂದ್ಯ
ದೀಪಕ್ ಪುನಿಯಾ vs ರಿಪೀಚೇಜ್ ವಿಜೇತ

Story first published: Friday, August 6, 2021, 19:52 [IST]
Other articles published on Aug 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+