ಟೋಕಿಯೋ ಒಲಿಂಪಿಕ್ಸ್: ಆಗಸ್ಟ್ 7ರಂದು ಭಾರತದ ಕ್ರೀಡಾಪಟುಗಳ ವೇಳಾಪಟ್ಟಿ

ಬೆಂಗಳೂರು, ಆಗಸ್ಟ್ 6: ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಮತ್ತೊಂದು ನಿರಾಶಾದಾಯಕ ದಿನವನ್ನು ಕಂಡಿದ್ದಾರೆ. ಭಾರತ ಶುಕ್ರವಾರ ಯಾವುದೇ ಪದಕವನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ ಕೆಲ ಕ್ರೀಡಾಪಟುಗಳು ನೀಡಿದ ಪ್ರದರ್ಶನ ಭಾರತದ ಪಾಲಿಗೆ ಆಶಾದಾಯಕವಾಗಿದೆ. ಶನಿವಾರದ ಸ್ಪರ್ಧೆಯಲ್ಲಿ ಭಾರತ ಪ್ರಮುಖವಾಗಿ ಮೂರು ಸ್ಪರ್ಧೆಗಳಲ್ಲಿ ಪದಕವನ್ನು ನಿರೀಕ್ಷಿಸುತ್ತಿದೆ. ಶನಿವಾರ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಛೋಪ್ರ ಗಾಲ್ಫರ್ ಅದಿತಿ ಅಶೋಕ್ ಮತ್ತು ಭಜರಂಗ್ ಪುನಿಯಾ ಪದಕದ ಕನಸನ್ನು ಜೀವಂತವಾಗಿರಿಸಿದ್ದಾರೆ.
ಶುಕ್ರವಾರ ಭಾರತ ನಿರಾಸೆಯೊಂದಿಗೆ ಆರಂಭ ಮಾಡಿತು. ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪದಕ ಗೆಲ್ಲುವ ಕನಸು ಕಾಣಿತ್ತಿದ್ದ ಭಾರತದ ಮಹಿಳಾ ಹಾಕಿ ತಂಡ ಪ್ಲೇಆಫ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಲು ವಿಫಲವಾಯಿತು. ಪುರುಷರ ಹಾಕಿ ತಂಡ ಗುರುವಾರ ಕಂಚಿನ ಪದಕ ಗೆದ್ದು ಬೀಗಿದ್ದ ಬಳಿಕ ಭಾರತೀಯ ವನಿತೆಯರ ತಂಡವೂ ಅದೇ ಫಲಿತಾಂಶವನ್ನು ಪುನರಾವರ್ತಿಸುವ ನಿರೀಕ್ಷೆಯಿತ್ತು. ಆದರೆ ಶಿಕ್ರವಾರ ಬೆಳಿಗ್ಗೆ ಏಳುಗಂಟೆಗೆ ಆರಂಭವಾದ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡ ನಿರಾಸೆ ಅನುಭವಿಸಿತು. 3-4 ಗೋಲುಗಳ ಅಂತರದಿಂದ ಭಾರತ ಗ್ರೇಟ್ ಬ್ರಿಟನ್‌ಗೆ ಶರಣಾಯಿತು.
ಆದರೆ ಕೆಲ ಫಲಿತಾಂಶಗಳು ಭಾರತೀಯ ಕ್ರೀಡಾಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರು ಮೂಲದ ಗಾಲ್ಫರ್ ಅದಿತಿ ಅಶೋಕ್ ಎರಡನೇ ಸ್ಥಾನಿಯಾಗಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ರೆಸ್ಲರ್ ಭಜರಂಗ್ ಪೂನಿಯಾ ಚಿನ್ನದ ಪದಕ ಗೆಲ್ಲುವ ಸ್ಪರ್ಧೆಯಿಂದ ಹೊರಬಿದ್ದರೂ ಕಂಚಿನ ಪದಕ್ಕಾಗಿ ನಡೆಯುವ ಸ್ಪರ್ಧೆಗೆ ಅರ್ಹತೆ ಸಂಪಾದಿಸಿದ್ದಾರೆ. ಅಂತಿಮ ದಿನದ ಸ್ಪರ್ಧೆಯಲ್ಲಿ ಕಂಚಿನ ಪದಕ್ಕೆ ಕೊರಳೊಡ್ಡುವ ನಿರೀಕ್ಷೆಯಲ್ಲಿದ್ದಾರೆ. ಇದರ ಜೊತೆಗೆ ಜಾವೆಲಿನ್ ಎಸೆತಗಾರ ನೀರಜ್ ಛೋಪ್ರ ಅವರ ಸ್ಪರ್ಧೆ ಕೂಡ ಶನಿವಾರ ನಡೆಯಲಿದೆ. ಕ್ವಾಲಿಫಿಕೇಶನ್ ಹಂತದಲ್ಲಿ ಅತಿ ದೂರಕ್ಕೆ ಎಸೆದು ಫೈನಲ್‌ಗೆ ಅರ್ಹತೆಯನ್ನು ಪಡೆದಿದ್ದರು.
ಭಾರತದ ಪದಕ ಖಾತೆಯಲ್ಲಿ 6 ಆಗಸ್ಟ್ ಶುಕ್ರವಾರದ ಅಂತ್ಯಕ್ಕೆ 2 ಬೆಳ್ಳಿ, 3 ಕಂಚಿನ ಪದಕಗಳಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ ಪದಕದ ಮೂಲಕ ಭಾರತದ ಖಾತೆ ಆರಂಭಿಸಿದರು. ನಂತರ ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚಿನ ಪದಕ ಗೆದ್ದರೆ ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್ ಕೂಡ ಕಂಚು ಮುಡಿಗೇರಿಸಿಕೊಂಡರು. ಪುರುಷರ ಹಾಕಿಯಲ್ಲಿ ಭಾರತೀಯ ತಂಡ ಗೆದ್ದ ಕಂಚಿನ ಪದಕ ಮತ್ತು ರಸ್ಲಿಂಗ್‌ನಲ್ಲಿ ರವಿಕುಮಾರ್ ಗೆದ್ದ ಬೆಳ್ಳಿ ಪದಕಗಳು ಗೆದ್ದುಕೊಂಡಿದ್ದಾರೆ.

ಅಥ್ಲೆಟಿಕ್ಸ್: ಪುರುಷರ ಜಾವೆಲಿನ್ ಎಸೆತ: ಫೈನಲ್, ನೀರಜ್ ಛೋಪ್ರ, ಸಂಜೆ 4:30
ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಛೋಪ್ರ ಕ್ವಾಲಿಫಿಕೇಶನ್ ಹಂತದಲ್ಲಿ ನೀಡಿದ ಪ್ರದರ್ಶನ ಭಾರತ ಭರವಸೆ ಹೆಚ್ಚಿಸಿದೆ. 86.65 ಮೀಟರ್ ದೂರಕ್ಕೆ ಎಸೆಯುವ ಮೂಲಕ ಛೋಪ್ರ ಫೈನಲ್‌ಗೆ ನೇರ ಅರ್ಹತೆಯನ್ನು ಸಂಪಾದಿಸಿದರು. ಅಲ್ಲದೆ ಚಿನ್ನದ ಪದಕ ಗೆಲ್ಲುವ ಫೆವರೀಟ್ ಎನಿಸಿದ್ದ ಜರ್ಮನಿಯ ಜೋಹಾನ್ಸ್ ವಿಟ್ಟೆರ್ ಅವರಿಗಿಂತಲೂ ದೂರಕ್ಕೆ ಎಸೆದು ಬೆರಗುಗೊಳಿಸಿದ್ದರು. ಹೀಗಾಗಿ ಟ್ರ್ಯಾಕ್ &ಫೀಲ್ಡ್ ವಿಭಾಗದಲ್ಲಿ ಭಾರತದ ಪದಕದ ಕನಸು ಇನ್ನೂ ಜೀವಂತವಾಗಿದೆ. ಇದೇ ಪ್ರದರ್ಶನ ಅಥವಾ ಇದಕ್ಕೂ ಉತ್ತಮ ಪ್ರದರ್ಶನ ಫೈನಲ್ ಹಂತದಲ್ಲಿ ಬಂದರೆ ಚೋಪ್ರ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಳ್ಳಲಿದ್ದಾರೆ. ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಯಾವುದೇ ಚಿನ್ನದ ಪದಕ ಗೆಲ್ಲು ವಿಫಲವಾಗಿದ್ದು ಈ ಮೂಲಕ ಅತ್ಯುತ್ತಮ ಅವಕಾಶವನ್ನು ಹೊಂದಿದೆ.

ಗಾಲ್ಫ್ ಮಹಿಳೆಯ R4 ವೈಯಕ್ತಿಕ
ಎರಡನೇ ಸ್ಥಾನದೊಂದಿಗೆ ಫೈನಲ್ ಹಂತಕ್ಕೇರಿರುವ ಅದಿತಿ ಅಶೋಕ್ ಮೊದಲ ಬಾರಿಗೆ ಪದಕವನ್ನು ಗೆಲ್ಲುಲು ಪೂರಕವಾದ ಪ್ರದರ್ಶನ ನಿಡುತ್ತಿದ್ದಾರೆ. ಮಹಿಳೆಯ ವೈಯಕ್ತಿಕ ವಿಭಾಗದಲ್ಲಿ ಅವರ ಹೋರಾಟ ಶನಿವಾರ ನಾಲ್ಕನೇ ಸುತ್ತಿನೊಂದಿಗೆ ಮುಂದುವರಿಯಲಿದೆ. ಮುಂಜಾನೆ 4:48ರಿಂದ ಆರಂಭವಾಗಲಿದೆ.
ಇನ್ನೋರ್ವ ಗಾಲ್ಫ್ ಆಟಗಾರ್ತಿ ದೀಕ್ಷಾ ಡಾಗರ್ ಶನಿವಾರ ಕಣಕ್ಕಿಳಿಯಲಿದ್ದಾರೆ. ಮುಂಜಾನೆ 4:15ರಿಂದ ಅವರ ಸ್ಪರ್ಧೆ ಆರಂಭವಾಗಲಿದೆ.

ರೆಸ್ಲಿಂಗ್: ಪುರುಷರ ಫ್ರೀಸ್ಲೈಟ್ 65 ಕೆಜಿ, ಭಜರಂಗ್ ಪೂನಿಯಾ
ಪುರುಷರ 65 ಕೆಜಿ ಫ್ರೀ-ಸ್ಟೈಲ್ ರಸ್ಲಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಜರಂಗ್ ಪೂನಿಯಾ ಸೆಮಿಫೈನಲ್‌ಗೆ ಪ್ರವೇಶ ಪಡೆಯುವ ಮೂಲಕ ಪದಕ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅದು ಮತ್ತೊಮ್ಮೆ ವಿಫಲವಾಗಿದೆ. ಆದರೆ ಭಜರಂಗ್ ಪೂನಿಯಾ ಕಂಚಿನ ಪದಕ ಗೆಲ್ಲುವ ಅವಕಾಶ ಇನ್ನೂ ಇದೆ. ಭಜರಂಗ್ ರಿಪಿಚೇಜ್ ವಿನ್ನರ್ ವಿರುದ್ಧ ಕಂಚಿನ ಪದಕಕ್ಕಾಗಿ ಸೆಣೆಸಾಡಲಿದ್ದಾರೆ. ಈ ಪಂದ್ಯ ಶನಿವಾರ ಸಂಜೆ 3:55ಕ್ಕೆ ಈ ಪಂದ್ಯ ಆರಂಭವಾಗಲಿದೆ.

ಭಾರತದ ಕ್ರೀಡಾಪಟುಗಳ ವೇಳಾಪಟ್ಟಿ
*ಫೈನಲ್ ಹಾಗೂ ಪ್ರಶಸ್ತಿ ಸುತ್ತಿನ ಇತರ ಪ್ರಮುಖ ಸ್ಪರ್ಧೆಗಳು
*ಮಹಿಳೆಯರ ಹೈ ಜಂಪ್ ಫೈನಲ್ - ಸಂಜೆ 4:05 ಗಂಟೆಗೆ
*ಪುರುಷರ 1500 ಮೀ ಫೈನಲ್ - ಸಂಜೆ 5:10 ಗಂಟೆಗೆ
*ಮಹಿಳೆಯರ 4x400 ಮೀ ರಿಲೇ ಫೈನಲ್ - ಸಂಜೆ 6 ಗಂಟೆಗೆ
*ಪುರುಷರ 4x400 ಮೀ ರಿಲೇ ಫೈನಲ್ - ಸಂಜೆ 6:20 ಗಂಟೆಗೆ
*ಬಾಸ್ಕೆಟ್ ಬಾಲ್: ಪುರುಷರ ಚಿನ್ನದ ಪದಕ ಪಂದ್ಯ - ಯುಎಸ್‌ಎ vs ಫ್ರಾನ್ಸ್ -ಬೆಳಿಗ್ಗೆ 8 ಗಂಟೆಗೆ
*ಬಾಸ್ಕೆಟ್ ಬಾಲ್: ಪುರುಷರ ಕಂಚಿನ ಪದಕ ಪಂದ್ಯ - ಆಸ್ಟ್ರೇಲಿಯಾ ವಿರುದ್ಧ ಸ್ಲೊವೇನಿಯಾ - ಸಂಜೆ 4.30 ಗಂಟೆಗೆ
*ಫುಟ್ಬಾಲ್ ಪುರುಷರ ಚಿನ್ನದ ಪದಕ ಪಂದ್ಯ: ಬ್ರೆಜಿಲ್ vs ಸ್ಪೇನ್ - ಸಂಜೆ 5 ಗಂಟೆಗೆ
*ವಾಲಿಬಾಲ್ ಪುರುಷರ ಚಿನ್ನದ ಪದಕ ಪಂದ್ಯ - ಫ್ರಾನ್ಸ್ vs ಆರ್‌ಒಸಿ - ಸಂಜೆ 5:45 ಗಂಟೆಗೆ
*ವಾಲಿಬಾಲ್ ಪುರುಷರ ಕಂಚಿನ ಪದಕ ಪಂದ್ಯ - ಬ್ರೆಜಿಲ್ vs ಅರ್ಜೆಂಟೀನಾ - ಬೆಳಿಗ್ಗೆ 10 ಗಂಟೆಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications