2021 ಜುಲೈ 23ರಿಂದ ಆಗಸ್ಟ್ 8ಕ್ಕೆ ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ

ಟೋಕಿಯೋ, ಮಾರ್ಚ್ 31: ಜಪಾನ್‌ನ ಟೋಕಿಯೋದಲ್ಲಿ ನಡೆಯಬೇಕಿದ್ದ 2020ರ ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್, ಮುಂದಿನ ವರ್ಷ ಅಂದರೆ 2021ರ ಜುಲೈ 23ರಿಂದ ಆಗಸ್ಟ್ 8ರವರೆಗೆ ಮುಂದೂಡಲ್ಪಟ್ಟಿದೆ. ಮಾರಕ ಕೊರೊನಾವೈರಸ್‌ನಿಂದಾಗಿ ವಿಶ್ವಖ್ಯಾತ ಕ್ರೀಡಾಕೂಟದ ದಿನಾಂಕ ಬದಲಾಗಿದೆ.
ವಿಶ್ವವನ್ನೇ ಆತಂಕಕ್ಕೀಡು ಮಾಡಿರುವ ಕೋವಿಡ್-19 ಅಥವಾ ಕೊರೊನಾವೈರಸ್‌ನಿಂದಾಗಿ ವಿಶ್ವದಗಲ ಎಲ್ಲಾ ಕ್ರೀಡಾಕೂಟಗಳೂ ಮುಂದೂಡಲ್ಪಟ್ಟಿವೆ ಅಥವಾ ರದ್ದಾಗಿವೆ. ಅದರಂತೆ ಟೋಕಿಯೋ ಒಲಿಂಪಿಕ್ಸ್ ಕೂಡ ಒಂದು ವರ್ಷದ ಕಾಲ ಮುಂದಕ್ಕೆ ಹೋಗಿದೆ.
ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ (ಐಒಸಿ) ಸೋಮವಾರ (ಮಾರ್ಚ್ 30) ಈ ವಿಚಾರವನ್ನು ತಿಳಿಸಿದೆ. ಈ ವರ್ಷವೇ ಕ್ರೀಡಾಕೂಟ ನಡೆಸಲು ಜಪಾನ್ ಸಿದ್ಧವಾಗಿತ್ತು. ಆದರೆ ಡೆಡ್ಲಿ ಸೋಂಕು ಕೊರೊನಾದಿಂದಾಗಿ ಕ್ರೀಡಾಕೂಟ ರದ್ದುಗೊಳಿಸಬೇಕಾಗಿ ಬಂದಿದೆ.
ಅಂದ್ಹಾಗೆ 124 ವರ್ಷಗಳ ಆಧುನಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ಒಲಿಂಪಿಕ್ಸ್ ಕ್ರೀಡೆ ಮುಂದೂಡಲ್ಪಟ್ಟಿದ್ದು ಇದೇ ಮೊದಲಬಾರಿ. ಕ್ರೀಡಾಕೂಟ ಮುಂದೂಡಿದ್ದರಿಂದ ಜಪಾನ್‌ಗೆ ಭಾರೀ ಹಿನ್ನಡೆಯಾಗಿದೆ. ತಯಾರಿಗಾಗಿ ವ್ಯಯಿಸಿದ್ದ ಹಣವೂ ವ್ಯರ್ಥಗೊಂಡಿದೆ. ಸೋಮವಾರ (ಮಾರ್ಚ್ 30) ಭಾರತದಲ್ಲಿ ಸುಮಾರು 1071 ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 100 ಮಂದಿ ಈಗಾಗಲೇ ಗುಣಮುಖರಾಗಿದ್ದರೆ, 29 ಮಂದಿ ಸಾವನ್ನಪ್ಪಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications