For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಕೀನ್ಯಾದ ಎಲಿಯುಡ್ ಕಿಪ್ಚೋಗೆ ಮ್ಯಾರಥಾನ್ ಚಾಂಪಿಯನ್

Tokyo Olympics 2021: Eliud Kipchoge wins mens marathon title

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ ಮ್ಯಾರಥಾನ್ ಸ್ಪರ್ಧೆಯಲ್ಲಿ ಕೀನ್ಯಾದ ಎಲಿಯುಡ್ ಕಿಪ್ಚೋಗೆ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. ಇದು ಕಿಪ್ಚೋಗೆ ಒಲಿಂಪಿಕ್ಸ್ ಮ್ಯಾರಥಾನ್‌ನಲ್ಲಿ ಸಿಗುತ್ತಿರುವ ಸತತ ಎರಡನೇ ಬಂಗಾರದ ಪದಕ 2:08:38 ಸೆಕೆಂಡ್ ಕಾಲಾವಧಿಯೊಂದಿಗೆ ಕಿಪ್ಚೋಗೆ ಬಂಗಾರದ ಪದಕ ಜಯಿಸಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲೂ ಎಲಿಯುಡ್ ಕಿಪ್ಚೋಗೆ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದರು. ಕಿಪ್ಟೋಗೆ, ಈ ಬಾರಿ ಬೆಳ್ಳಿ ಪದಕ ಗೆದ್ದ ದರ್‌ಲ್ಯಾಂಡ್ಸ್‌ನ ಅಬ್ದಿ ನಗೆಯೆ ಅವರಿಗಿಂತ 80 ಸೆಕೆಂಡ್ ಮುಂಚಿತವಾಗಿ ಓಟ ಮುಗಿಸಿದ್ದಾರೆ. ನಗೆಯೆ 2:09:58 ಸೆ. ಕಾಲಾವಧಿಯೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡರು.

ಈ ವಿಭಾಗದಲ್ಲಿ ತೃತೀಯ ಸ್ಥಾನ ಬೆಲ್ಜಿಯಂನ ಬಶೀರ್ ಅಬ್ದಿ (2:10:00 ಸೆ.) ಪಾಲಾಗಿದೆ. ಜಪಾನ್‌ನ ಸಪ್ಪೋರೋ ಭಾಗದಲ್ಲಿ ಮ್ಯಾರಥಾನ್ ಓಟ ನಡೆಯಿತು. ಆರಂಭಿಕ 17.5 ಮೈಲ್ ದೂರದವರೆಗೆ 2016ರ ರಿಯೋ ಡಿ ಜನೈರೋದಲ್ಲಿ ಕಂಚಿನ ಪದಕ ಗೆದ್ದಿದ್ದ ಗ್ಯಾಲೆನ್ ರುಪ್ ಮುನ್ನಡೆಯಲ್ಲಿದ್ದು. ಆದರೆ ಓಟ ಮುಂದುವರೆದಂತೆ ಕಿಪ್ಚೋಗೆ ಮುನ್ನಡೆ ಪಡೆದುಕೊಂಡರು.

ಈ ಬಾರಿಯ ರೇಸ್‌ನಲ್ಲಿ ರುಪ್ 8ನೇ ಸ್ಥಾನದಲ್ಲಿ ಓಟ ಮುಗಿಸಿದ್ದಾರೆ. ಅವರ ಕಾಲಾವಧಿ 2:11:41 ಸೆಕೆಂಡ್ ಆಗಿತ್ತು. ಕಿಪ್ಟೋಗೆ ತನ್ನ ಹೆಸರಿನಲ್ಲಿರುವ ವಿಶ್ವದಾಖಲೆ ಕಾಲಾವಧಿ 2:01:39 ಸೆಕೆಂಡ್‌ನ ಸಮೀಪಕ್ಕೂ ಬರಲಿಲ್ಲ. ಯಾಕೆಂದರೆ ಓಟ ನಡೆದ ಜಾಗದಲ್ಲಿ ಅಷ್ಟರಮಟ್ಟಿಗೆ ತಾಪಮಾನ ಜಾಸ್ತಿಯಿತ್ತು. ಆದರೆ ಒಲಿಂಪಿಕ್ಸ್ ಮ್ಯಾರಥಾನ್‌ನಲ್ಲಿ ಎರಡು ಬಾರಿ ಬಂಗಾರ ಗೆದ್ದ ವಿಶ್ವದ ಮೂರನೇ ಓಟಗಾರನಾಗಿ ಕಿಪ್ಟೋಗೆ ಗುರುತಿಸಿಕೊಂಡಿದ್ದಾರೆ.

Story first published: Sunday, August 8, 2021, 7:26 [IST]
Other articles published on Aug 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+