ಗಾಲ್ಫರ್ ಅನಿರ್ಬನ್ ಲಾಹಿರ್‌ಗೆ ಟೋಕಿಯೋ ಒಲಿಂಪಿಕ್ಸ್ ಅರ್ಹತೆ

ನವದೆಹಲಿ: ಭಾರತದ ಗಾಲ್ಫರ್ ಅನಿರ್ಬನ್ ಲಾಹಿರ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದು ಲಾಹಿರ್ ಪಾಲಿಗೆ ಸತತ ಎರಡನೇ ಒಲಿಂಪಿಕ್ಸ್ ಅವಕಾಶ. ಮಂಗಳವಾರ (ಜೂನ್ 21) ಪುರುಷರ ವಿಭಾಗದ ಫೈನಲ್ ಟೋಕಿಯೋ ರ್‍ಯಾಂಕಿಂಗ್‌ನಲ್ಲಿ ಲಾಹಿರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಒಲಿಂಪಿಕ್ಸ್‌ಗಾಗಿ ಗಾಲ್ಫ್ ವಿಭಾಗದಲ್ಲಿ ಭಾರತಕ್ಕೆ ಒಂದು ಸ್ಥಾನಷ್ಟೇ ಬಾಕಿಯಿತ್ತು. ಭಾರತದ ಮುಂಚೂಣಿ ಗಾಲ್ಫರ್‌ಗಳಲ್ಲಿ ಅನಿರ್ಬನ್ ಲಾಹಿರ್ ಒಬ್ಬರಾಗಿರುವುದರಿಂದ 340ನೇ ಸ್ಥಾನದೊಂದಿಗೆ ಒಲಿಂಪಿಕ್ಸ್‌ಗೆ ಸ್ಥಾನ ಪಡೆದುಕೊಂಡಿದ್ದಾರೆ.
'ಅದೃಷ್ಟ ನನಗೊಲಿದಿರುವುದಕ್ಕೆ ಎಲ್ಲರ ಆಶೀರ್ವಾದ ನನ್ನೊಂದಿಗಿತ್ತು. ಸಹಜವಾಗೇ ನಾನಿದನ್ನು ನಿರೀಕ್ಷಿಸಿರಲಿಲ್ಲ ಕೂಡ. ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದರ ಮಧ್ಯೆ ಏನು ನಡೆಯುತ್ತಿದೆ ಅನ್ನೋದ ಸುಳಿವೂ ನನಗಿರಲಿಲ್ಲ. ಮುಂದಿನ ತಿಂಗಳು ನಾನು ಏನು ಮಾಡಬಹುದು ಅನ್ನೋ ಯೋಚನೆಯನ್ನು ನಾನು ಈಗಷ್ಟೇ ಶುರು ಮಾಡಿದ್ದೇನೆ,' ಎಂದು ಲಾಹಿರ್ ಹೇಳಿದ್ದಾರೆ.
33ರ ಹರೆಯದ ಲಾಹಿರ್‌ಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಮತ್ತು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications