Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೋಕಿಯೋ ಒಲಿಂಪಿಕ್ಸ್ 2021: ಜುಲೈ 24ರ ಭಾರತದ ವೇಳಾಪಟ್ಟಿ

Tokyo Olympics 2021: Here is Indias schedule on July 24

ಟೋಕಿಯೋ: ಜುಲೈ 23ರಂದು ಉದ್ಘಾಟನಾ ಸಮಾರಂಭದೊಂದಿಗೆ 32ನೇ ಬೇಸಗೆ ಒಲಿಂಪಿಕ್ಸ್ ಶುರುವಾಗಿದೆ. ಜಪಾನ್‌ನ ಟೋಕಿಯೋದಲ್ಲಿ ಈ ಜಾಗತಿಕ ಕ್ರೀಡಾಕೂಟ ಈ ಬಾರಿ ನಡೆಯುತ್ತಿದೆ. ಕೋವಿಡ್-19 ಕಾರಣದಿಂದಾಗಿ 2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಈ ಬಾರಿ ನಡೆಯುತ್ತಿದೆ.

ಸುಮಾರು 205ಕ್ಕೂ ಹೆಚ್ಚು ರಾಷ್ಟ್ರಗಳಿಂದ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತದಿಂದಲೂ 127 ಅಥ್ಲೀಟ್‌ಗಳು ಪದಕದ ಬೇಟೆಗಾಗಿ ಟೋಕಿಯೋದಲ್ಲಿದ್ದಾರೆ. ಈ ಬಾರಿಯೇ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಜುಲೈ 23ರಿಂದ ಆರಂಭಗೊಂಡಿರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆಗಸ್ಟ್ 8ರ ವರೆಗೆ ಮುಂದುವರೆಯಲಿದೆ. ಒಲಿಂಪಿಕ್ಸ್‌ನಲ್ಲಿ ಭಾರತೀಯರ ಜುಲೈ 24ರಂದಿನ ವೇಳಾಪಟ್ಟಿ ಇಲ್ಲಿದೆ. ಜುಲೈ 24ರಂದು ಹೆಚ್ಚಿನ ವಿಭಾಗಗಳಲ್ಲಿ ಭಾರತ ಸ್ಪರ್ಧಿಸುತ್ತಿದೆ.

ಜುಲೈ 24ರಂದು ಭಾರತೀಯರ ವೇಳಾಪಟ್ಟಿ
* ಶೂಟಿಂಗ್: ಮಹಿಳೆಯರ 10ಮೀ ಏರ್‌ರೈಫಲ್, ಅರ್ಹತಾ ಸುತ್ತು, 5 AM
* ಹಾಕಿ: ಭಾರತ vs ನ್ಯೂಜಿಲೆಂಡ್, 6:30 AM
* ಟೆನಿಸ್: ಸುಮಿತ್ ನಗಾಲ್ vs ಡೆನಿಸ್ ಇಸ್ಟೋಮಿನ್, ಮೊದಲ ಸುತ್ತು, 7:30 AM
* ರೋಯಿಂಗ್: ಪುರುಷರ ಲೈಟ್‌ವೈಟ್ ಡಬಲ್‌ ಸ್ಕಲ್ಸ್, 8:00 AM
* ಜುಡೋ: ಮಹಿಳೆಯರ 48 ಕೆಜಿ, ಸುಶೀಲಾ ಲಿಕ್ಮಾಬಂ vs ಇವಾ ಚೆರ್ನಿವ್ಟ್ಸಿ, 8:28 AM
* ಟೇಬಲ್ ಟೆನ್ನಿಸ್: ಶರತ್ ಕುಮಾರ್ ಅಚಂತಾ ಹಾಗೂ ಮನಿಕಾ ಬಾತ್ರಾ vs ಲಿನ್-ಯುನ್ ಜು ಹಾಗೂ ಲೆಂಗ್ ಐ ಚಿಂಗ್
* ಮಿಶ್ರ ಡಬಲ್ಸ್: 16ರ ಸುತ್ತಿನ ಪಂದ್ಯ, 8:30 AM
* ಬ್ಯಾಡ್ಮಿಂಟನ್-ಪುರುಷರ ಡಬಲ್ಸ್: ಚಿರಾಗ್ ಶೆಟ್ಟಿ & ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ vs ವಾಂಗ್ ಚಿ-ಲಿನ್ & ಲಿ ಯಾಂಗ್, 8:50 AM
* ಶೂಟಿಂಗ್: ಪುರುಷರ 10ಮೀ ಏರ್‌ರೈಫಲ್, ರ್ಹತಾ ಸುತ್ತು, 9:30 AM
* ಟೇಬಲ್ ಟೆನಿಸ್: ಮನಿಕಾ ಬಾತ್ರಾ vs ಟಿನ್-ಟಿನ್ ಹೊ, ಪ್ರಥಮ ಸುತ್ತು, 12:15 PM
* ಹಾಕಿ: ನೆದರ್‌ಲ್ಯಾಂಡ್ಸ್ vs ಭಾರತ, ಮಹಿಳೆಯರ ಪೂಲ್ 'ಎ' , 5:15 PM

Story first published: Friday, July 23, 2021, 19:37 [IST]
Other articles published on Jul 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+