ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಾಷ್ಟ್ರೀಯ ಕೋಚ್ ಸಹಾಯ ನಿರಾಕರಿಸಿದ ಮಣಿಕಾ ಬಾತ್ರಾ

ಟೋಕಿಯೋ: ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಶನಿವಾರ (ಜುಲೈ 24) ಮೊದಲ ಸುತ್ತಿನ ಪಂದ್ಯದ ವೇಳೆ ರಾಷ್ಟ್ರೀಯ ಕೋಚ್‌ನ ಸಲಹೆ ನೀರಾಕರಿಸಿದ್ದಾಗಿ ವರದಿಯಾಗಿದೆ. ಬಾತ್ರಾರ ವೈಯಕ್ತಿಕ ಕೋಚ್‌ಗೆ ಆನ್ ಕೋರ್ಟ್ ಪ್ರವೇಶ ನೀಡದಿದ್ದಾಗ ಬಾತ್ರಾ ಈ ನಡೆ ತೋರಿರುವುದಾಗಿ ಹೇಳಲಾಗಿದೆ.
ಶನಿವಾರ ನಡೆದ ಮೊದಲ ಸುತ್ತಿನ ಟೇಬಲ್ ಟೆನಿಸ್ ಪಂದ್ಯದಲ್ಲಿ 62ನೇ ವಿಶ್ವಶ್ರೇಯಾಂಕದ ಮಣಿಕಾ ಬಾತ್ರಾ ಅವರು 94ನೇ ಶ್ರೇಯಾಂಕಿತೆ ಬ್ರಿಟನ್‌ನ ಟಿನ್ ಟಿನ್ ಹೋ ಅವರನ್ನು 4-0 ಅಂತರದಿಂದ ಸೋಲಿಸಿದರು. ಆದರೆ ಆ ವೇಳೆ ಮಣಿಕಾಳ ಕೋಚ್‌ಗಳು ಕುಳಿತುಕೊಳ್ಳುವ ಜಾಗ ಖಾಲಿ ಖಾಲಿಯಾಗಿತ್ತು.
ಪಂದ್ಯದ ವೇಳೆ ಕೋಚ್ ಜಾಗದಲ್ಲಿ ಖಾಲಿ ಇದ್ದ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿತ್ತು. ಮಣಿಕಾಳ ವೈಯಕ್ತಿಕ ಕೋಚ್ ಸನ್ಮೆ ಪರಂಜಪೆ ವಿವಾದಾತ್ಮಕವಾಗಿ ಮಣಿಕಾ ಜೊತೆಗೆ ಟೋಕಿಯೋಗೆ ಪ್ರಯಾಣಿಸಿದ್ದರು. ಯಾಕೆಂದರೆ ಟೋಕಿಯೋಗೆ ಹೋಗಿದ್ದ ಭಾರತ ತಂಡದ ಜೊತೆಗೆ ವೈಯಕ್ತಿಕ ಕೋಚ್‌ಗಳು ತೆರಳಲು ಅವಕಾಶವಿರಲಿಲ್ಲ.
ಆದರೂ ಮಣಿಕಾ ಕೋಚ್ ಪರಂಜಪೆ ಮಣಿಕಾ ಜೊತೆ ಟೋಕಿಯೋಗೆ ತೆರಳಿದ್ದರು. ಆದರೆ ಅವರಿಗೆ ಕ್ರೀಡಾಗ್ರಾಮಕ್ಕೆ ಪ್ರವೇಶಿಸುವಂತಿರಲಿಲ್ಲ. ಪಂದ್ಯ ನಡೆಯುವಾಗ ವೈಯಕ್ತಿಕ ಕೋಚ್ ಜೊತೆಗಿರಲಿ ಎಂದು ಮಣಿಕಾ ಕೋರಿಕೊಂಡರೂ ಅದಕ್ಕೆ ಆಯೋಜಕರು ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ಬೇಸರಗೊಂಡ ಮಣಿಕಾ ರಾಷ್ಟ್ರೀಯ ಕೋಚ್ ಸಲಹೆಯನ್ನೂ ನಿರಾಕರಿಸಿ ಪಂದ್ಯ ಆಡಿದ್ದರು ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications