ಒಲಿಂಪಿಕ್ಸ್: 10 ಮೀ. ಪಿಸ್ತೂಲ್‌ನಲ್ಲಿ 7ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ ಸೌರಭ್

ಟೋಕಿಯೋ: ಭಾರತೀಯ ಸ್ಪರ್ಧಿಗಳು ಟೋಕಿಯೋ ಒಲಿಂಪಿಕ್ಸ್‌ನ ಆರಂಭಿಕ ದಿನ ನೀರಸ ಪ್ರದರ್ಶನ ನೀಡಿದ್ದಾರೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯ್ ಚಾನು ಬೆಳ್ಳಿ ಗೆದ್ದಿದ್ದು ಬಿಟ್ಟರೆ ಉಳಿದ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾರತೀಯ ಅಥ್ಲೀಟ್‌ಗಳು ನಿರಾಸೆ ಮೂಡಿಸಿದ್ದಾರೆ. ಭರವಸೆಯ ಶೂಟರ್ ಸೌರಭ್ ಚೌಧರಿ ಕೂಡ ಬರಿಗೈಲಿ ವೈಯಕ್ತಿಕ ಸ್ಪರ್ಧೆ ಮುಗಿಸಿದ್ದಾರೆ.
ಶನಿವಾರ ನಡೆದ 10 ಮೀಟರ್ ಪಿಸ್ತೂಲ್ ಪುರುಷರ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಭಾರತೀಯ ಯುವ ಶೂಟರ್ ಸೌರಭ್ ಚೌಧರಿ 7ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ. ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾಗಿದ್ದ ಸೌರಭ್ ಶನಿವಾರ ಮಾತ್ರ ಸಪ್ಪೆ ಪ್ರದರ್ಶನ ನೀಡಿದ್ದಾರೆ.
ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ತೋರಿದ್ದ ಫಾರ್ಮ್ ಅನ್ನು ಸೌರಬ್ ತೋರಲಿಲ್ಲ. ಸೌರಬ್ ಸಹ ಆಟಗಾರ ಅಭಿಷೇಕ್ ವರ್ಮಾ ಕೂಡ 575 ಪಾಯಿಂಟ್ಸ್‌ಗಳೊಂದಿಗೆ 17ನೇ ಸ್ಥಾನದಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಶೂಟಿಂಗ್‌ನಲ್ಲಿ ಹೆಚ್ಚಿನ ಪದಕಗಳ ನಿರೀಕ್ಷೆ ಇತ್ತಾದರೂ ಇದರಲ್ಲಿ ಒಂದು ಪದಕ ಭಾರತದ ಕೈ ತಪ್ಪಿದಂತಾಗಿದೆ.
ಜುಲೈ 23ರಂದು ಆರಂಭಗೊಂಡಿರುವ ಟೋಕಿಯೋ ಒಲಿಂಪಿಕ್ಸ್ ಆಗಸ್ಟ್ 8ರಂದು ಕೊನೆಗೊಳ್ಳಲಿದೆ. ಸದ್ಯ ಪದಕ ಪಟ್ಟಿಯಲ್ಲಿ ಭಾರತ 12ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications