For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: 5ನೇ ದಿನದ ಭಾರತದ ಸಂಪೂರ್ಣ ವೇಳಾಪಟ್ಟಿ ಮತ್ತು ಸಮಯ

Tokyo Olympics 2021: Team Indias schedule on July 27 tuesday

ಟೋಕಿಯೋ, ಜುಲೈ 26: ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೋಮವಾರ(ಜುಲೈ 26) ಯಾವುದೇ ಪದಕ ಗಳಿಸದೆ ನಿರಾಸೆ ಅನುಭವಿಸಿದೆ. ಮತ್ತೊಂದು ಉತ್ತಮ ದಿನಕ್ಕಾಗಿ ಭಾರತದ ಕ್ರೀಡಾ ಅಭಿಮಾನಿಗಳು ನಿರೀಕ್ಷೆಯಿಂದ ಮಂಗಳವಾರದ ಕ್ರೀಡೆಗಳತ್ತ ಚಿತ್ತ ನೆಟ್ಟಿದ್ದಾರೆ. ಭಾರತದ ಶೂಟರ್‌ಗಳು ವೈಯಕ್ತಿಕ ವಿಭಾಗದಲ್ಲಿ ನಿರಾಸೆ ಮೂಡಿಸಿದ್ದಾರೆ. ಆದರೆ ಮಂಗಳವಾರ ಶೂಟರ್‌ಗಳು ಒಟ್ಟಾಗಿ ಗುಂಪು ಹಂತದಲ್ಲಿ ಕಣಕ್ಕಿಳಿಯಲಿದ್ದು ಭರವಸೆ ಮೂಡಿಸಿದ್ದಾರೆ.

ಅಲ್ಲದೆ ಬ್ಯಾಡ್ಮಿಂಟನ್, ಸೈಲಿಂಗ್, ಪುರುರ ಟೇಬಲ್ ಟೆನಿಸ್ ಸಿಂಗಲ್ಸ್, ಹಾಕಿ ಸೇರಿದಂತೆ ಇನ್ನೂ ಕೆಲ ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಮಂಗಳವಾರದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವೇಳಾಪಟ್ಟಿ ಹಾಗೂ ಸಮಯದ ವಿವರಗಳು ಇಲ್ಲಿದೆ.

ಒಲಿಂಪಿಕ್ಸ್‌ನಲ್ಲಿ ಮಂಗಳವಾರ ಭಾರತೀಯರು ಕಣಕ್ಕಿಳಿಯುವ ಕ್ರೀಡೆಗಳು ಹಾಗೂ ಸಮಯ:

ಹಾಕಿ
ಭಾರತ vs ಸ್ಪೇನ್
ಬೆಳಿಗ್ಗೆ 6.30

ಬ್ಯಾಡ್ಮಿಂಟನ್
ಪುರುಷರ ಡಬಲ್ಸ್ ಗ್ರೂಪ್ ಪ್ಲೇ ಸ್ಟೇಜ್ - ಗ್ರೂಪ್ ಎ
ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ vs ಬೆನ್ ಲೇನ್ ಮತ್ತು ಸೀನ್ ವೆಂಡಿ,
ಬೆಳಿಗ್ಗೆ 8.30

ಸೈಲಿಂಗ್
ಪುರುಷರ ಲೇಸರ್
ರೇಸ್ 4: ಬೆಳಿಗ್ಗೆ 8.45 ಗಂಟೆಗೆ
ರೇಸ್ 5: ಬೆಳಿಗ್ಗೆ 10 ಗಂಟೆಗೆ
ರೇಸ್ 6: ಬೆಳಿಗ್ಗೆ 11.15 ಗಂಟೆಗೆ

ಸೈಲಿಂಗ್
ಮಹಿಳಾ ಲೇಸರ್ ರೇಡಿಯಲ್
ರೇಸ್ 5: ಬೆಳಿಗ್ಗೆ 8.35 ಗಂಟೆಗೆ
ರೇಸ್ 6: ಬೆಳಿಗ್ಗೆ 9.50 ಗಂಟೆಗೆ

ಸೈಲಿಂಗ್
ಪುರುಷರ ಸ್ಕಿಫ್
ರೇಸ್ 1: ಬೆಳಿಗ್ಗೆ 11.20 ಗಂಟೆಗೆ
ರೇಸ್ 2: ಮಧ್ಯಾಹ್ನ 12.15 ಗಂಟೆಗೆ
ರೇಸ್ 3: ಮಧ್ಯಾಹ್ನ 1.10 ಗಂಟೆಗೆ

ಶೂಟಿಂಗ್
ಮಿಶ್ರ 10 ಮೀ ಏರ್ ಪಿಸ್ತೂಲ್ ತಂಡದ ಅರ್ಹತೆ
ಬೆಳಿಗ್ಗೆ 5.30 ರಿಂದ ಆರಂಭ
ಕಂಚಿನ ಪದಕ ಪಂದ್ಯ ಮತ್ತು ಅಂತಿಮ (ಅರ್ಹತೆ ಪಡೆದರೆ)
ಬೆಳಿಗ್ಗೆ 7.30 ಗಂಟೆಗೆ ಮತ್ತು ಬೆಳಿಗ್ಗೆ 8.07 ಗಂಟೆಗೆ

ಟೇಬಲ್ ಟೆನಿಸ್
ಪುರುಷರ ಸಿಂಗಲ್ಸ್ 3ನೇ ಸುತ್ತು
ಶರತ್ ಕಮಲ್ ವಿರುದ್ಧ ಮಾ ಲಾಂಗ್ - ಬೆಳಿಗ್ಗೆ 8:30

ಶೂಟಿಂಗ್
ಮಿಶ್ರ 10 ಮೀ ಏರ್ ರೈಫಲ್ ತಂಡದ ಅರ್ಹತೆ
ಬೆಳಿಗ್ಗೆ 9.45, ಕಂಚಿನ ಪದಕ
ಅಂತಿಮ (ಅರ್ಹತೆ ಪಡೆದರೆ): ಬೆಳಿಗ್ಗೆ 11.45 ಮತ್ತು ಮಧ್ಯಾಹ್ನ 12.22

ಬಾಕ್ಸಿಂಗ್
ಮಹಿಳೆಯರ ವೆಲ್ಟರ್ವೈಟ್ 16 ರೌಂಡ್
ಲೊವ್ಲಿನಾ ಬೊರ್ಗೊಹೈನ್ vs ನಾಡಿನ್ ಅಪೆಟ್ಜ್
ಬೆಳಿಗ್ಗೆ 10:57 ಗಂಟೆಗೆ

Story first published: Monday, July 26, 2021, 20:54 [IST]
Other articles published on Jul 26, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+