For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಆರಂಭಿಕ ಸುತ್ತಿನಲ್ಲೇ ಮುಗ್ಗರಿಸಿದ ರಸ್ಲರ್ ಸೀಮಾ ಬಿಸ್ಲಾ

Tokyo Olympics 2021: wrestler Seema Bisla loses 50kg opener to Sarra Hamdi

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಮಹಿಳಾ 50 ಕೆಜಿ ರಸ್ಲಿಂಗ್ ಸ್ಪರ್ಧೆಯಲ್ಲಿ ಭಾರತದ ರಸ್ಲರ್ ಸೀಮಾ ಬಿಸ್ಲಾ ಆರಂಭಿಕ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ. ಶುಕ್ರವಾರ (ಆಗಸ್ಟ್ 6) ನಡೆದ ಪಂದ್ಯದಲ್ಲಿ ಟ್ಯುನೀಷಿಯಾದ ಸರ್ರ ಹಮ್ದಿ ವಿರುದ್ಧ ಸೀಮಾ ನಿರಾಸೆ ಅನುಭವಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಮೂಲಕ 27ರ ಹರೆಯದ ಸೀಮಾ ಇದು ಚೊಚ್ಚಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಿದ್ದರು.

ಶುಕ್ರವಾರದ ಪಂದ್ಯದಲ್ಲಿ ಸೀಮಾ ಬಿಸ್ಲಾ ಎದುರಾಳಿ ಸರ್ರ ಹಮ್ದಿ ಎದುರು ಸುಲಭವಾಗಿ ಶರಣಾಗಿದ್ದಾರೆ. ಕಾದಾಟಕ್ಕಿಳಿದ ಸೀಮಾ ಅವರನ್ನು ಸರ್ರ ಲಾಕ್ ಮಾಡಿದರು. ಹೇಗೆಂದರೆ ಸೀಮಾಗೆ ಲಾಕ್ ಬಳಿಕ ಒಂದೇ ಒಂದು ಚಲನೆ ತೋರಿಸದ ರೀತಿ ಕಟ್ಟಿಹಾಕಿ ಪಂದ್ಯದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇತ್ತ ಸೀಮಾ ಮೊದಲ ಒಲಿಂಪಿಕ್ಸ್‌ನಲ್ಲಿ ತೀರಾ ನಿರಾಸೆ ಅನುಭವಿಸುವಂತಾಗಿದೆ.

ರಸ್ಲಿಂಗ್‌ನಲ್ಲಿ ಈ ಬಾರಿ ಹೆಚ್ಚಿನ ಪದಕ ನಿರೀಕ್ಷೆ
ಮಹಿಳಾ 50 ಕೆಜಿ ವಿಭಾಗದ ರಸ್ಲಿಂಗ್‌ನಲ್ಲಿ ಸೀಮಾ 3-1ರ ಸೋಲು ಕಂಡಿದ್ದಾರಾದರೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ರಸ್ಲಿಂಗ್‌ನಲ್ಲಿ ಈಗಾಗಲೇ ಒಂದು ಪದಕ ಲಭಿಸಿದೆ. ಪುರುಷರ 57 ಕೆಜಿ ವಿಭಾಗದ ರಸ್ಲಿಂಗ್‌ನಲ್ಲಿ ರವಿಕುಮಾರ್ ದಾಹಿಯ ಬೆಳ್ಳಿ ಪದಕ ಗೆದ್ದಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಪುರುಷರ 65 ಕೆಜಿ ಫ್ರೀ-ಸ್ಟೈಲ್ ರಸ್ಲಿಂಗ್ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಭಜರಂಗ್ ಪೂನಿಯಾ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಪೂನಿಯಾ ಅವರು ಇರಾನ್‌ನ ಮೊರ್ಟೆಜಾ ಘಿಯಾಸಿ ಚೆಕಾ ಅವರನ್ನು 2-1ರ ಅಂತರದಿಂದ ಸೋಲಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಗೆದ್ದರೆ ಪೂನಿಯಾಗೆ ಪದಕ ಖಾತ್ರಿಯಾಗಲಿದೆ. ಸೋತರೂ ಕಂಚಿನ ಪದಕಕ್ಕಾಗಿ ಪೂನಿಯಾ ಮತ್ತೊಂದು ಪಂದ್ಯ ಆಡಲಿದ್ದಾರೆ.

ಭಾರತಕ್ಕೆ ಎರಡು ಬೆಳ್ಳಿ, ಮೂರು ಕಂಚಿನ ಪದಕಗಳು
ಭಾರತದ ಪದಕ ಖಾತೆಯಲ್ಲಿ ಈವರೆಗೆ ಒಟ್ಟು ಐದು ಪದಕಗಳು ಸೇರಿಕೊಂಡಿವೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳು ಬರುತ್ತಿರುವುದು ಇದೇ ಮೊದಲಸಾರಿ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರೆ, ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಎರಡನೇ ಪದಕವಾಗಿ ಕಂಚು ಗೆದ್ದಿದ್ದರು. ಇನ್ನು ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಕೂಡ ಭಾರತಕ್ಕೆ ಕಂಚಿನ ಪದಕ ತಂದಿದ್ದರು. ಅದಾಗಿ ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ ಲಭಿಸಿತ್ತು. ಇನ್ನು ಪುರುಷರ 57 ಕೆಜಿ ರಸ್ಲಿಂಗ್‌ನಲ್ಲಿ ರವಿಕುಮಾರ್ ದಾಹಿಯ ಅವರಿಗೆ ಬೆಳ್ಳಿ ಪದಕ ಲಭಿಸಿದೆ. ಒಟ್ಟಿಗೆ 5 ಪದಕಗಳು ಈಗ ಭಾರತದ ಖಾತೆಯಲ್ಲಿವೆ. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕದಾಸೆ ಇಲ್ಲವಾಗಿದೆ.

ಅಥ್ಲೆಟಿಕ್ಸ್‌ನಲ್ಲಿ ನೀರಜ್ ಚೋಪ್ರಾ ಫೈನಲ್‌ಗೆ
ಅಥ್ಲೆಟಿಕ್ಸ್ ವಿಭಾಗದಲ್ಲಿ ಒಂದು ಪದಕದ ನಿರೀಕ್ಷೆಯಿದೆ. ಭಾರತದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಈಗಾಗಲೇ ಫೈನಲ್‌ಗೆ ಪ್ರವೇಶಿಸಿದ್ದಾರೆ. ಆಗಸ್ಟ್ 4ರಂದು ನಡೆದಿದ್ದ ಗ್ರೂಪ್ ಹಂತದ ಸ್ಪರ್ಧೆಯಲ್ಲಿ ಗ್ರೂಪ್ 'ಎ'ಯಲ್ಲಿದ್ದ ಚೋಪ್ರಾ ಉತ್ತಮ ಪ್ರದರ್ಶನದೊಂದಿಗೆ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಚೋಪ್ರಾ 86.65 ಮೀಟರ್ ಸಾಧನೆಯೊಂದಿಗೆ ಫೈನಲ್‌ಗೆ ನೇರ ಪ್ರವೇಶ ಪಡೆದುಕೊಂಡಿದ್ದಾರೆ. ಈ ವೇಳೆ ವಿಶ್ವ ನಂ.1 ಜಾವೆಲಿನ್ ಥ್ರೋವರ್ ಜರ್ಮನಿಯ ಜೋಹಾನ್ಸ್ ವೆಟರ್ ಮೊದಲ ಪ್ರಯತ್ನದಲ್ಲಿ 82.04 ಮೀಟರ್ ಸಾಧನೆ ತೋರಿದ್ದಾರೆ. ಚೋಪ್ರಾ ಅವರ ಫೈನಲ್ ಸ್ಪರ್ಧೆ ಆಗಸ್ಟ್ 7ರಂದು ಶನಿವಾರ ನಡೆಯಲಿದೆ. ಜುಲೈ 23ರಂದು ಆರಂಭಗೊಂಡಿರುವ ಟೋಕಿಯೋ ಒಲಿಂಪಿಕ್ಸ್ ಆಗಸ್ಟ್ 8ರಂದು ಸಮಾರೋಪ ಸಮಾರಂಭದ ಬಳಿಕ ತೆರೆ ಕಾಣಲಿದೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ವಿಶ್ವದ ವಿವಿಧ ಭಾಗದಿಂದ ಆಗಮಿಸಿರುವ 11000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಟ್ಟು 205 ರಾಷ್ಟ್ರಗಳಿಂದ ಕ್ರೀಡಾಳುಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ರೀಡಾಪುಟಗಳೆಲ್ಲ 17 ದಿನಗಳಲ್ಲಿ 50 ವಿಭಾಗಗಳಲ್ಲಿ 33 ಕ್ರೀಡೆಗಳಲ್ಲಿ 339 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.

Story first published: Friday, August 6, 2021, 13:29 [IST]
Other articles published on Aug 6, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+