For Quick Alerts
ALLOW NOTIFICATIONS  
For Daily Alerts

ಆರ್ಚರಿ: ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದ ಭಾರತದ ಮಿಶ್ರ ಡಬಲ್ಸ್ ಜೋಡಿ

Tokyo olympics, archery: India mixed doubles team with deepika and pravin reached quarterfinals

ಟೋಕಿಯೋ, ಜುಲೈ 24: ಆರ್ಚರಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತ ಮೊದಲ ಯಶಸ್ಸು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಭಾರತದ ಮಿಶ್ರಡಬಲ್ಸ್ ಜೋಡಿ ಚೈನೀಸ್ ತೈಪೆ ಜೋಡಿಯ ವಿರುದ್ಧ 5-3 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಕ್ವಾರ್ಟರ್‌ಫೈನಲ್ ಪ್ರವೇಶ ಪಡೆದುಕೊಂಡಿದೆ.

ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಜಾಧವ್ ಅವರ ಮಿಶ್ರ ಡಬಲ್ಸ್ ಜೋಡಿ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿಗೆ ಈ ಇಬ್ಬರು ಮಿಶ್ರ ಡಬಲ್ಸ್‌ನಲ್ಲಿ ಜೋಡಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಅರ್ಹತಾ ಸುತ್ತಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಹಿಳಾ ಹಾಗೂ ಪುರುಷರ ತಂಡ ಸ್ಪರ್ಧಿಗಳನ್ನು ಮಿಶ್ರ ಡಬಲ್ಸ್‌ಗೆ ಆಯ್ಕೆ ಮಾಡುವ ಕಾರಣ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಜಾಧವ್ ಈ ಸ್ಪರ್ಧೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಆರಂಭದಲ್ಲಿ ಭಾರತ ಈ ಸ್ಪರ್ಧೆಯಲ್ಲಿ ಹಿನ್ನಡೆಯನ್ನು ಕಂಡಿತ್ತು. ಮೊದಲ ಸೆಟ್‌ನ ಅಂತ್ಯಕ್ಕೆ ಭಾರತ 0-2 ಅಂತರದಿಂದ ಹಿನ್ನಡೆಯನ್ನು ಕಂಡಿತ್ತು. ಆದರೆ ಬಳಿಕ ಅದ್ಭುತ ಪ್ರದರ್ಶನದ ಮೂಲಕ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸಲು ಆರಂಭಿಸಿತು ಭಾರತದ ಜೋಡಿ. ಎರಡನೇ ಸೆಟ್‌ನಲ್ಲಿ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನಂತರ ಚೈನೀಸ್ ತೈಪೆ ವಿರುದ್ಧ ಮೇಲುಗೈ ಸಾಧಿಸಿ ಗೆಲುವು ಸಂಪಾದಿಸಿದೆ.

ಬಾಂಗ್ಲಾದೇಶ ಹಾಗೂ ದಕ್ಷಿಣ ಕೊರಿಯಾ ನಡುವಿನ ಸ್ಪರ್ಧಿಗಳ ವಿಜೇತರು ಕ್ವಾರ್ಟರ್‌ಫೈನಲ್‌ನಲ್ಲಿ ಭಾರತಕ್ಕೆ ಎದುರಾಗಲಿದ್ದಾರೆ. ದಕ್ಷಿಣ ಕೊರಿಯಾ ಆರ್ಚರಿಯಲ್ಲಿ ಸಾಕಷ್ಟು ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಈ ಹಂತದಲ್ಲಿ ದಕ್ಷಿಣ ಕೊರಿಯಾ ಭಾರತಕ್ಕೆ ಎದುರಾಗುವುದು ಬಹುತೇಕ ನಿಶ್ಚಿತವಾಗಿದ್ದು ಕಠಿಣ ಸವಾಲು ಎದುರಾಗಲಿದೆ.

ಒಲಿಂಪಿಕ್ಸ್‌ನಲ್ಲಿ ದೀಪಿಕಾ ಕುಮಾರಿ ತಮ್ಮ ಪತಿ ಅತನು ದಾಸ್ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿತ್ತು. ಆದರೆ ಭಾರತೀಯ ಪುರುಷ ಆರ್ಚರ್‌ಗಳ ಪೈಕಿ ಪ್ರವೀಣ್ ಜಾಧವ್ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ಒಲಿಂಪಿಕ್ಸ್ ಕ್ರೀಡಾಕೂಟದ ಮಿಶ್ರ ಡಬಲ್ಸ್‌ನಲ್ಲಿ ಆಡುವ ಅವಕಾಶವನ್ನು ಅವರು ಗಿಟ್ಟಿಸಿಕೊಂಡಿದ್ದಾರೆ.

Story first published: Saturday, July 24, 2021, 7:13 [IST]
Other articles published on Jul 24, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+