For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಮೂಲಕ ಅಭಿಯಾನ ಆರಂಭಿಸಿದ ಭಾರತ

Tokyo Olympics: Archery Ranking Rounds updates, Deepika Kumari and Atanu Das begin Indias medal hopes

ಟೋಕಿಯೋ ಒಲಿಂಪಿಕ್ಸ್‌ಗೆ ಶುಕ್ರವಾರ ಸಂಜೆ ಚಾಲನೆ ದೊರೆಯಲಿದೆ. ಆದರೆ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಭಾರತ ತನ್ನ ಅಭಿಯಾನವನ್ನು ಆರಂಭ ಮಾಡಿದೆ. ಸಾಫ್ಟ್ ಬಾಲ್ ಮತ್ತು ಫುಟ್ಬಾಲ್ ಪಂದ್ಯಗಳು ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಆರಂಭವಾಗಿದ್ದು ಆರ್ಚರಿ ಕೂಡ ಇದೇ ಸಾಲಿಗೆ ಸೇರಿದೆ. ಭಾರತದ ಆರ್ಚರ್‌ಗಳಾದ ದೀಪಿಕಾ ಕುಮಾರಿ, ಅತನು ದಾಸ್ ಆರಂಭದ ದಿನವೇ ಸ್ಪರ್ಧಾ ಕಣಕದಲ್ಲಿ ಕಾಣಿಸಿಕೊಂಡಿದ್ದಾರೆ.

ಮಹಿಳೆಯರ ವೈಯಕ್ತಿಕ ರಿಕ್ಯೂರ್ವ್ ಆರ್ಚರಿ ವಿಭಾಗದ ಶ್ರೇಯಾಂಕ ಸುತ್ತಿನಲ್ಲಿ ದೀಪಿಕಾ ಕುಮಾರಿ 9ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಾಕಷ್ಟು ಏರಿಳಿತಗಳ ನಂತರ ದೀಪಿಕಾ ಕುಮಾರಿ 9ನೇ ಸ್ಥಾನವನ್ನು ಸಂಪಾದನೆ ಮಾಡುವಲ್ಲಿ ದೀಪಿಕಾ ಯಶಸ್ವಿಯಾದರು.

ನಂಬರ್ 1 ಶ್ರೇಯಾಂಕಿತ ಆರ್ಚರ್ ದೀಪಿಕಾ ಕುಮಾರಿ ಮೂರನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲಂಡನ್ ಹಾಗೂ ರಿಯೋ ಒಲಿಂಪಿಕ್ಸ್‌ನಲ್ಲಿ ನಿರೀಕ್ಷೆಯ ಮಟ್ಟವನ್ನು ತಲುಪಲು ವಿಫಲವಾಗಿದ್ದ ದೀಪಿಕಾ ಕುಮಾರಿ ಮೇಲೆ ಈ ಬಾರಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ದೀಪಿಕಾ ಕುಮಾರಿ ಅವರ ವೈಯಕ್ತಿಕ ರ್ಯಾಂಕಿಂಗ್ ಸುತ್ತು ಭಾರತೀಯ ಕಾಲಮಾನ ಮುಂಜಾನೆ 5:30ಕ್ಕೆ ಆರಂಭವಾಗಿದೆ. ಯೆಮೆನೋಶಿಮಾ ಪಾರ್ಕ್‌ನಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಈ ಸುತ್ತಿನಲ್ಲಿ ದೀಪಿಕಾ ಕುಮಾರಿ ಕಠಿಣ ಸ್ಪರ್ಧೆಯನ್ನು ಎದುರಿಸಿದ್ದಾರೆ.

ಇನ್ನು ದೀಪಿಕಾ ದಾಸ್ ಬಳಿಕ ಪುರುಷರ ವಿಭಾಗದ ಆರ್ಚರಿ ಸ್ಪರ್ಧೆ ಕೂಡ ನಡೆಯಲಿದೆ. ಪುರುಷರ ವೈಯಕ್ತಿಕ ರ್ಯಾಂಕಿಂಗ್ ಸುತ್ತಿನ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 9:30 ರಿಂದ 11:30ರ ಅವಧಿಯಲ್ಲಿ ನಿಗದಿಯಾಗಿದೆ. ಇದು ಕೂಡ ಜಪಾನ್‌ನ ಟೋಕಿಯೋದಲ್ಲಿರುವ ಯೆಮೆನೋಶಿಮಾ ಪಾರ್ಕ್‌ನಲ್ಲಿ ನಡೆಯಲಿದೆ

Story first published: Friday, July 23, 2021, 8:50 [IST]
Other articles published on Jul 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+