ವಿಶ್ವದಾಖಲೆಯೊಂದಿಗೆ ಮಹಿಳಾ 4x200 ಮೀ. ಫ್ರೀಸ್ಟೈಲ್ ರಿಲೇ ಚಿನ್ನ ಗೆದ್ದ ಚೀನಾ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ 4x200 ಮೀಟರ್ ಫ್ರೀಸ್ಟೈಲ್ ರಿಲೇ ಈಜು ಸ್ಪರ್ಧೆಯಲ್ಲಿ ಚೀನಾ ಮಹಿಳಾ ತಂಡ ವಿಶ್ವದಾಖಲೆಯೊಂದಿಗೆ ಚಿನ್ನ ಚಾಚಿಕೊಂಡಿದೆ. ಗುರುವಾರ (ಜುಲೈ 29) ನಡೆದ ಸ್ಪರ್ಧೆಯಲ್ಲಿ ಚೀನಾ ಪಾರಮ್ಯ ಮೆರೆದಿರುವುದಲ್ಲದೆ ಚಿನ್ನದ ಪದಕಗಳ ಸಂಖ್ಯೆ ಹೆಚ್ಚಿಸಿಕೊಂಡಿದೆ.
ಯಾಂಗ್ ಜುಂಕ್ಸುವಾನ್, ಜಾಂಗ್ ಯುಫೀ, ಲಿ ಬಿಂಗ್ಜಿ ಮತ್ತು ಟ್ಯಾಂಗ್ ಮುಹಾನ್ ಅವರಿದ್ದ ತಂಡ 7 ನಿಮಿಷ 40.33 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಜಯಿಸಿದೆ. ಇದೇ ವಿಭಾಗದಲ್ಲಿ ಯುನೈಟೆಡ್ ಸ್ಟೇಟ್ಸ್ ತಂಡ 7:40.73 ಸೆ. ಕಾಲಾವಧಿಯೊಂದಿಗೆ ಬೆಳ್ಳಿ ಪದಕ ಗೆದ್ದಿದೆ.
ಮಹಿಳಾ 4x200 ರಿಲೇ ಕಂಚಿನ ಪದಕ ಆಸ್ಟ್ರೇಲಿಯಾ ತಂಡದ ಪಾಲಾಗಿದೆ. ಆಸೀಸ್ ತಂಡ 7:41.29 ಸೆ. ಅಂತರದಲ್ಲಿ ದೂರ ಕ್ರಮಿಸಿದೆ. 1996ರಲ್ಲಿ ಈ ಸ್ಪರ್ಧೆ ಪರಿಚಯಿಸಿದಾಗಿನಿಂದ ಒಂದೋ ಯುಎಸ್‌ಎ ಅಥವಾ ಆಸ್ಟ್ರೇಲಿಯಾ ಚಿನ್ನ ಗೆಲ್ಲದಿರುವುದು ಇದು ಮೊದಲನೇ ಬಾರಿ.
ಈ ಸ್ಪರ್ಧೆಯ ಫಲಿತಾಂಶದೊಂದಿಗೆ ಜಪಾನ್ ತಂಡ 15 ಚಿನ್ನದ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಚೀನಾ ತಂಡ 14 ಚಿನ್ನದ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದೆ. ಭಾರತ 46ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications