ಟೋಕಿಯೋ ಒಲಿಂಪಿಕ್ಸ್ ಅಭಿಮಾನಿಗಳಿಲ್ಲದೆ ನಡೆಯಬಹುದು: ಹಶಿಮೊಟೊ

ಟೋಕಿಯೋ: ಕೋವಿಡ್-19 ಕಾರಣದಿಂದಾಗಿ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಕದ ಮುಚ್ಚಿದ ಮೈದಾನದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಟೋಕಿಯೋ ಒಲಿಂಪಿಕ್ಸ್ 2020ರ ಅಧ್ಯಕ್ಷ ಸೈಕೊ ಹಶಿಮೊಟೊ ಹೇಳಿದ್ದಾರೆ. ಗೇಮ್ಸ್ ಸುರಕ್ಷಿತ ಅನ್ನಿಸಿಕೊಳ್ಳುವುದಕ್ಕಾಗಿ ಕ್ರೀಡಾ ಕೂಟವನ್ನು ಕದ ಮುಚ್ಚಿದ ಸ್ಟೇಡಿಯಂನಲ್ಲಿ ನಡೆಸುವ ಸಾಧ್ಯತೆಯಿದೆ ಎಂದು ಹಶಿಮೊಟೊ ಹೇಳಿದ್ದಾರೆ.
ಗೇಮ್ಸ್ ವೇಳೆ ಜಪಾನ್‌ನಲ್ಲಿರುವ ಜನ ಮತ್ತು ಅಥ್ಲೀಟ್‌ಗಳನ್ನು ಆಯೋಜಕರು ರಕ್ಷಿಸಿದರೆ ಮಾತ್ರ ಗೇಮ್ಸ್ ಯಶಸ್ವಿಯಾಗಲಿದೆ ಎಂದು ಮಾಜಿ ಒಲಿಂಪಿಕ್ಸ್ ಸ್ಪರ್ಧಿಯಾಗಿರುವ ಸೈಕೊ ಹಶಿಮೊಟೊ ಹೇಳಿದ್ದಾರೆ. ಹೀಗಿದ್ದರೆ ಮಾತ್ರ ಜನಕ್ಕೂ ಕ್ರೀಡಾಕೂಟ ಆಯೋಜನೆ ಖುಷಿ ನೀಡಲಿದೆ ಎಂದು ಹಶಿಮೊಟೊ ಹೇಳಿದ್ದಾರೆ.
ಜಪಾನ್‌ನಲ್ಲಿ ಈ ಬಾರಿಯ ಪ್ರತಿಷ್ಠಿತ ಕ್ರೀಡಾಕೂಟ ನಡೆಸುವಾಗ ಜಪಾನ್‌ನ ಅಭಿಮಾನಿಗಳಷ್ಟೇ ವೀಕ್ಷಿಸಲು ಅವಕಾಶ ನೀಡಲು ನಿರ್ಧಾರ ತಾಳಲಾಗಿತ್ತು. ಹೊರ ದೇಶಗಳಿಂದ ಬರುವ ಅಭಿಮಾನಿಗಳಿಗೆ ವೀಕ್ಷಣೆಗೆ ಅವಕಾಶ ಇಲ್ಲದಾಗಿದೆ. ಈಗ ಜಪಾನ್‌ನ ಅಭಿಮಾನಿಗಳೂ ವೀಕ್ಷಣೆ ಅನುಮತಿಗೆ ಜೂನ್ ವರೆಗೆ ಕಾದು ನೋಡಬೇಕಾಗಿದೆ.
ಜಪಾನ್‌ನಲ್ಲಿ ಸೋಂಕಿನ ಹೊಸ ಅಲೆಯ ನಿರೀಕ್ಷೆಯಿರುವುದರಿಂದ ಜೂನ್‌ವರೆಗೂ ಕಾದು ನೋಡಿ ಆ ಬಳಿಕ ಜಪಾನ್ ಅಭಿಮಾನಿಗಳಿಗಾದರೂ ಕ್ರೀಡಾಕೂಟ ವೀಕ್ಷಣೆಗೆ ಅವಕಾಶ ನೀಡಬೇಕೋ ಬೇಡವೋ ಎಂದು ನಿರ್ಧರಿಸಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ. ಈ ವರ್ಷ ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯುವುದರಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications