ವಿಶ್ವ ನಂ.1 ಎಲಿಸನ್ ವಿರುದ್ಧ ಸೋತ ಭಾರತದ ಆರ್ಚರ್ ಪ್ರವೀಣ್ ಜಾಧವ್

ಟೋಕಿಯೋ: ಪುರುಷರ ರಿಕರ್ವ್ ವೈಯಕ್ತಿಕ ವಿಭಾಗದ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಜಾಧವ್ ಸ್ಪರ್ಧೆ ಕೊನೆಗೊಂಡಿದೆ. ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ವಿಶ್ವ ನಂ.1 ಆರ್ಚರ್ ಯುನೈಟೆಡ್ ಸ್ಟೇಟ್ಸ್‌ನ ಬ್ರಾಡಿ ಎಲಿಸನ್ ಎದುರು ಪ್ರವೀಣ್ ಶರಣಾಗಿದ್ದಾರೆ.
ಬುಧವಾರ (ಜುಲೈ 28) ಟೋಕಿಯೋದ ಯುಮೆನೋಶಿಮಾ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಪ್ರವೀಣ್ ಜಾಧವ್ 6-0ರ ಅಂತರದಿಂದ ಸೋತಿದ್ದಾರೆ. ದ್ವಿತೀಯ ಮತ್ತು ತೃತೀಯ ಸೆಟ್‌ನಲ್ಲಿ ಜಾಧವ್ ನೀರಸ ಪ್ರದರ್ಶನದೊಂದಿಗೆ ವೈಯಕ್ತಿಕ ವಿಭಾಗದ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ.
ವಿಶ್ವ ನಂ.2ನೇ ಶ್ರೇಯಾಂಕಿತ ರಷ್ಯನ್ ಒಲಿಂಪಿಕ್ ಕಮಿಟಿಯ ಆರ್ಚರ್ ಗಲ್ಸನ್ ಬಜಾರ್ಜಪೋವ್ ಎದುರು ಜಾಧವ್ ಭರ್ಜರಿ ಪೈಪೋಟಿಯೊಂದಿಗೆ ರೌಂಡ್ 64ನಲ್ಲಿ ಗೆದ್ದಿದ್ದರು. ಆದರೆ 32ನೇ ಸುತ್ತಿನ ಪಂದ್ಯದಲ್ಲಿ ಪ್ರವೀಣ್ ನೀರಸ ಪ್ರದರ್ಶನ ನೀಡಿದ್ದಾರೆ.
ಭಾರತದ ಪಕದ ಖಾತೆಯಲ್ಲೀಗ ಮೀರಾಬಾಯಿ ಚಾನು ಗೆದ್ದಿರುವ ಒಂದು ಬೆಳ್ಳಿ ಪದಕ ಮಾತ್ರ ಇದೆ. ಪದಕ ಪಟ್ಟಿಯಲ್ಲೀಗ ಜಪಾನ್ ತಂಡ 11 ಬಂಗಾರದ ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಜಪಾನ್ ಕೂಡ 11 ಬಂಗಾರದ ಪದಕಗಳನ್ನು ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications