ಟೋಕಿಯೋ ಒಲಿಂಪಿಕ್ಸ್ ಅಥ್ಲೆಟಿಕ್ಸ್ ವಿಲೇಜ್‌ನ ಚಿತ್ರಣ ನೀಡಿದ ಶರತ್ ಕಮಲ್: ವಿಡಿಯೋ

ಟೋಕಿಯೋ: ಭಾರತೀಯ ಕ್ರೀಡಾಪಟುಗಳಿದ್ದ ಒಂದು ತಂಡ ಈಗಾಗಲೇ ಜಪಾನ್‌ನ ಟೋಕಿಯೋ ತಲುಪಿದೆ. ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ತೆರಳಿರುವ ಕ್ರೀಡಾಪಟುಗಳಲ್ಲಿ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಕೂಡ ಇದ್ದಾರೆ. ಭಾನುವಾರ ಟೋಕಿಯೋಗೆ ಭಾರತೀಯರ ತಂಡ ತಲುಪಿದೆ.
ಟೋಕಿಯೋದಲ್ಲಿಂದ ಶರತ್ ಕಮಲ್ ಅವರು ಅಥ್ಲೆಟಿಕ್ಸ್ ವಿಲೇಜ್‌ನ ಚಿತ್ರಣ ಹಂಚಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಕಮಲ್, 'ಟೋಕಿಯೋ ಒಲಿಂಪಿಕ್ಸ್ ಅಥ್ಲೆಟಿಕ್ಸ್ ಗ್ರಾಮದಿಂದ ಎಲ್ಲರಿಗೂ ಶುಭಸಂಜೆ' ಎಂದು ಬರೆದು ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಟೋಕಿಯೋದಲ್ಲಿನ ಗಗನಚುಂಬಿ ಕಟ್ಟಡಗಳಲ್ಲಿ ಕ್ರೀಡಾಪಟುಗಳು ತಂಗಲು ವ್ಯವಸ್ಥೆ ಮಾಡಲಾಗಿದೆ. ಟೋಕಿಯೋ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿರುವ ಕಮಲ್, ಇಷ್ಟರವರೆಗೆ ಒಲಿಂಪಿಕ್ಸ್‌ನಲ್ಲಿ ಈಬಾರಿಯ ಟೇಬಲ್ ಟೆನಿಸ್ ತಂಡ ಅತ್ಯುತ್ತಮ ತಂಡವಾಗಿದೆ ಎಂದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ಗಾಗಿ ಸಿದ್ಧತೆ ನಡೆಸುತ್ತಿರುವ ಕ್ರೀಡಾಪಟುಗಳಲ್ಲಿ 3 ಅಥ್ಲೀಟ್‌ಗಳಿಗೆ ಕೋವಿಡ್ ಸೋಂಕು ತಗುಲಿರುವುದು ವರದಿಯಾಗಿದೆ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications