ಟೋಕಿಯೋ ಒಲಿಂಪಿಕ್ಸ್‌ನ ಮೂವರು ಅಥ್ಲೀಟ್‌ಗಳಿಗೆ ಕೊರೊನಾ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಕೋವಿಡ್-19 ಸೋಂಕಿನ ಭೀತಿಯೂ ಹೆಚ್ಚಾಗುತ್ತಿದೆ. ಶುಕ್ರವಾರ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಒಂದು ಕೋವಿಡ್ ಪ್ರಕರಣ ಕಾಣಿಸಿಕೊಂಡಿತ್ತು. ಈಗ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಕೋವಿಡ್-19 ಸೋಂಕಿಗೀಡಾಗಿರುವ ಮೂವರು ಅಥ್ಲೀಟ್‌ಗಳಲ್ಲಿ ಇಬ್ಬರು ಅಥ್ಲೀಟ್‌ಗಳು ಒಲಿಂಪಿಕ್ಸ್ ವಿಲೇಜ್‌ನಲ್ಲಿ ತಂಗಿದ್ದರು ಎಂದು ಗೇಮ್ಸ್ ಆಯೋಜನಾ ಸಮಿತಿ ಭಾನುವಾರ (ಜುಲೈ 18) ತಿಳಿಸಿದೆ. ಈ ಬೆಳವಣೆಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೋವಿಡ್ ಪ್ರಕರಣಗಳ ಏರುವಿಕೆಯ ಭೀತಿ ಹೆಚ್ಚಿಸಿದೆ.
ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ತಂಗಿದ್ದ ಅಥ್ಲೀಟ್‌ಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಯಾಕೆಂದರೆ ಗೇಮ್ಸ್ ವಿಲ್ಲೇಜ್‌ನಲ್ಲಿ ಇತರರಿಗೂ ಸೋಂಕು ಹಬ್ಬುವ ಸಾಧ್ಯತೆಯಿದೆ. ಸೋಂಕಿತ ಮೂವರಲ್ಲಿ ಇಬ್ಬರು ಕ್ರೀಡಾಗ್ರಾಮದಲ್ಲಿದ್ದರೆ, ಮತ್ತೊಬ್ಬ ಗೇಮ್ಸ್‌ಗಾಗಿ ನೀಡಲಾಗಿದ್ದ ಹೋಟೆಲ್‌ನಲ್ಲಿ ತಂಗಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ಗೆ ಸಂಬಂಧಿಸಿ ಒಟ್ಟಾರೆ 10 ಪ್ರಕರಣಗಳು ಪತ್ತೆಯಾಗಿದೆ. ಇವರಲ್ಲಿ ಐವರು ಗೇಮ್ಸ್ ಸಿಬ್ಬಂದಿಗಳು, ಒಬ್ಬ ಕಾಂಟ್ರ್ಯಾಕ್ಟರ್, ಒಬ್ಬ ಪತ್ರಕರ್ತ ಮತ್ತು ಮೂವರು ಅಥ್ಲೀಟ್‌ಗಳು. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಜಪಾನ್‌ನ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications