For Quick Alerts
ALLOW NOTIFICATIONS  
For Daily Alerts

ಟೋಕಿಯೋ ಪ್ಯಾರಾಲಿಂಪಿಕ್ಸ್: 16ನೇ ಸುತ್ತಿಗೆ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್

Tokyo Paralympics 2021: Paddler Bhavinaben Patel advances to round of 16

ಟೋಕಿಯೋ: ಭಾರತದ ಸ್ಟಾರ್ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ಲಾಸ್-4 ಟೇಬಲ್ ಟೆನಿಸ್ ವಿಭಾಗದಲ್ಲಿ ಸ್ಪರ್ಧಿಸಿ ಗ್ರೇಟ್‌ ಬ್ರಿಟನ್‌ನ ಮೇಗನ್ ಶಾಕ್ಲೆಟನ್ ವಿರುದ್ಧ 3-1ರ ಜಯ ಗಳಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಭವೀನಾಬೆನ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

34ರ ಹರೆಯದ ಭವೀನಾಬೆನ್ ಪಟೇಲ್ ಅವರು ವಿಶ್ವ ನಂ.9 ಆಟಗಾರ್ತಿ ಮೇಗನ್ ಶಾಕ್ಲೆಟನ್ ಎದುರು 11-7, 9-11, 17-15, 13-11ರ ಜಯ ದಾಖಲಿಸಿದ್ದಾರೆ. ಇಬ್ಬರ ಮಧ್ಯೆ 41 ನಿಮಿಗಳ ಸೆಣಸಾಟ ನಡೆಯಿತು. ಮಾಡು ಇಲ್ಲವೆ ಮಡಿ ರೀತಿಯಲ್ಲಿ ನಡೆದ ಪಂದ್ಯದಲ್ಲಿ ವಿಶ್ವ 12ನೇ ಶ್ರೇಯಾಂಕಿತೆ ಭವೀನಾಬೆನ್ ಕಡೆಗೂ ಯಶಸ್ವಿಯಾದರು.

8 ನಿಮಿಷಗಳವರೆಗೆ ನಡೆದ ಆರಂಭಿಕ ಸುತ್ತಿನ ಸ್ಪರ್ಧೆಯಲ್ಲಿ ಭವೀನಾಬೆನ್ 11-7ರ ಜಯ ಕಂಡರು. ಆದರೆ ದ್ವಿತೀಯ ಸುತ್ತಿನಲ್ಲಿ ಶಾಕ್ಲೆಟನ್ ಕಮ್‌ಬ್ಯಾಕ್ ತೋರಿಸಿದರು. 9-11ರಿಂದ ಪಂದ್ಯ ಗೆದ್ದುಕೊಂಡರು. ಆದರೆ ಆ ಬಳಿಕ ಎರಡು ಸೆಟ್‌ಗಳಲ್ಲಿ ಭಾರತೀಯ ಆಟಗಾರ್ತಿಯ ಕೈ ಮೇಲಾಯ್ತು.

"ಮುಂದಿನ ಪಂದ್ಯಗಳಲ್ಲಿ ನಾನು ಇನ್ನೂ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಇವತ್ತು ನಾನು ಚೆಂಡಿನ ಮೇಲೆ ಹಿಡಿತ ಸಾಧಿಸುವತ್ತ ಗಮನ ಹರಿಸಿದೆ. ನಕಾರಾತ್ಮಕ ಯೋಚನೆ ನನ್ನ ತಲೆಯಲ್ಲಿ ಬರಲು ನಾನು ಬಿಡಲೇಯಿಲ್ಲ," ಎಂದು ಪಂದ್ಯದ ಬಳಿಕ ಭವೀನಾಬೆನ್ ಹೇಳಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಒಟ್ಟು 54 ಅಥ್ಲೀಟ್‌ಗಳು ಭಾಗವಹಿಸುತ್ತಿದ್ದಾರೆ.

Story first published: Thursday, August 26, 2021, 15:42 [IST]
Other articles published on Aug 26, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+