For Quick Alerts
ALLOW NOTIFICATIONS  
For Daily Alerts

ಟೋಕಿಯೋ ಪ್ಯಾರಾಲಂಪಿಕ್ಸ್: ಪ್ರೇಕ್ಷಕರಾಗಿ ಮಕ್ಕಳಿಗೆ ಅವಕಾಶ ನೀಡಲು ಆಯೋಜಕರ ಚಿಂತನೆ

Tokyo Paralympics: Organisers planning to allow school children to attend Paralympic Games

ಟೋಕಿಯೊ, ಆಗಸ್ಟ್ 22: 2020ರ ಟೋಕಿಯೋ ಒಲಿಂಪಿಕ್ಸ್ ಅತ್ಯಂತ ಯಶಸ್ವಿಯಾಗಿ ಮುಕ್ತಾಯಕಂಡಿದೆ. ಕೊರೊನಾವೈರಸ್ ಮಧ್ಯೆ ಈ ಕ್ರೀಡಾಕೂಟವನ್ನು ನಡೆಸಿ ಜಪಾನ್ ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಈ ಮಧ್ಯೆ ಈಗ ಪ್ಯಾರಾಲಂಪಿಕ್ಸ್ ನಡೆಸುವ ಜವಾಬ್ಧಾರಿ ಜಪಾನ್‌ಗಿದ್ದು ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಈ ಕ್ರೀಡಾಕೂಟದಲ್ಲಿ ಮಕ್ಕಳಿಗೆ ಪ್ರೇಕ್ಷಕರಾಗು ಅವಕಾಶ ನೀಡುವ ಚಿಂತನೆಯನ್ನು ಆಯೋಜಕರು ನಡೆಸುತ್ತಿದ್ದಾರೆ.

ಕೊರೋನಾವೈರಸ್‌ನ ಡೆಲ್ಟಾ ರೂಪಾಂತರಿ ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ಹದಿಹರೆಯದವರಲ್ಲಿ ಮತ್ತು ಲಸಿಕೆ ಹಾಕಿಸದ ಕಿರಿಯ ವಯಸ್ಸಿನ ಮಕ್ಕಳಲ್ಲಿ ಹರಡುತ್ತಿದ್ದು ಆತಂಕ ಮೂಡಿಸುತ್ತಿದೆ. ಈ ಮಧ್ಯೆಯೇ ಶಾಲಾ ಮಕ್ಕಳಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೆ ಹಾಜರಾಗಲು ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಇದೇ ಮಂಗಳವಾರದಿಂದ ಪ್ಯಾರಾಲಂಪಿಕ್ಸ್ ಕ್ರೀಡಾಕೂಟ ಆರಂಬವಾಗಲಿದ್ದು ಸೆಪ್ಟೆಂಬರ್ 5ನೇ ತಾರೀಕಿನವರೆಗೆ ಇದು ನಡೆಯಲಿದೆ. ಈ ಕ್ರೀಡಾಕೂಟದಲ್ಲಿ 160 ದೇಶಗಳ ಸುಮಾರು 4,400 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಆದರೆ ಈ ಕ್ರೀಡಾಕೂಟಕ್ಕೆ ಅಭಿಮಾನಿಗಳಿಗೆ ಕ್ರೀಡೆಗಳನ್ನು ವೀಕ್ಷಿಸಲು ಅವಕಾಶವಿಲ್ಲ. ಕೊರೊನಾವೈರಸ್‌ನ ಕಾರಣದಿಂದಾಗಿ ಪ್ರೇಕ್ಷಕರಿಲ್ಲದೆಯೇ ಕ್ರೀಡಾಕೂಟವನ್ನು ನಡೆಸಲಾಗುತ್ತದೆ.

ಟೋಕಿಯೊ ಗವರ್ನರ್ ಯೂರಿಕೊ ಕೊಯಿಕೆ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಶಾಲಾ ಮಕ್ಕಳಿಗೆ ಅನುಮತಿ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪೋಷಕರು ಮತ್ತು ಶಾಲೆಗಳಿಂದ ಬೆಂಬಲ ದೊರೆತರೆ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ 130,000ದಿಂದ 1,40,000ಷ್ಟು ಮಕ್ಕಳು ಈ ಕ್ರೀಡಾಕೂಟದ ಪ್ರೇಕ್ಷಕರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡುತ್ತಿವೆ. ಟೋಕಿಯೋವನ್ನು ಸೆಪ್ಟೆಂಬರ್ 12 ರವರೆಗೆ ತುರ್ತು ಪರಿಸ್ಥಿತಿಯಲ್ಲಿ ಮುಂದುವರಿಯಲಿದೆ.

ಜಪಾನ್‌ನಲ್ಲಿ ಲಸಿಕೆ ಕಾರ್ಯಕ್ರಮ ವೇಗವಾಗಿ ನಡೆಯುತ್ತಿದೆ. ಅಲ್ಲಿ ಈಗಾಗಲೇ 40 ಶೇಕಡಾದಷ್ಟು ಜನರಿಗೆ ಪೂರ್ಣ ಪ್ರಮಾಣದ ಲಸಿಕೆಯನ್ನು ನೀಡಲಾಗಿದೆ. ಈ ಮಧ್ಯೆ ಟೋಕಿಯೋದಲ್ಲಿ ಕೊರೊನಾವೈರಸ್ ಪ್ರಕರಣಗಳು ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಶನಿವಾರ ಒಂದೇ ದಿನ ಟೋಕಿಯೋ ನಗರದಲ್ಲಿ 5,074 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಜಪಾನ್‌ನ ರಾಜಧಾನಿಯಲ್ಲಿ ಸತತ ನಾಲ್ಕನೇ ದಿನ 5 ಸಾವಿರಕ್ಕೂ ಅಧಿಕ ಕೊರೊನಾವೈರಸ್ ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ. ಕಳೆದ ತಿಂಗಳು ಜುಲೈ 23ರಿಂದ ಒಲಿಂಪಿಕ್ಸ್ ಆರಂಭವಾಗುತ್ತಿದ್ದಂತೆಯೇ ಕೊರೊನಾವೈರಸ್ ಪ್ರಕರಣಗಳು ಕೂಡ ಜಪಾನ್ ನಗರದಲ್ಲಿ ಹೆಚ್ಚಾಗಲು ಆರಂಭಿಸಿತ್ತು. ಭಾನುವಾರ ಜಪಾನ್‌ನಲ್ಲಿ 4392 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದೆ. 15,500ಕ್ಕೂ ಅಧಿಕ ಜನರು ಜಪಾನ್‌ನಲ್ಲಿ ಕರೊಒನಾವೈರಸ್‌ಗೆ ಈವರೆಗೆ ಮೃತಪಟ್ಟಿದ್ದಾರೆ.

ಇನ್ನು ಈ ಬಾರಿಯ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಕ್ಕಳಿಗೆ ಪ್ರೇಕ್ಷಕರಾಗಿ ಅವಕಾಶ ನೀಡುವ ಪ್ರಸ್ತಾಪಕ್ಕೆ ಟೋಕಿಯೋ ಆಯೋಜಕ ಮಂಡಳಿ ಮತ್ತು ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ ಕೂಡ ಬೆಂಬಲ ಸೂಚಿಸಿದೆ. ದೈಹಿಕ ನ್ಯೂನ್ಯತೆಗಳ ಮಧ್ಯೆಯೂ ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಮಕ್ಕಳು ಅರಿತುಕೊಳ್ಳುವ ಅಗತ್ಯವಿದೆ ಎಂದು ಅವರು ವಾದವನ್ನು ಮುಂದಿಡುತ್ತಿದ್ದಾರೆ. ಈ ಮೂಲಕ ಜಪಾನ್‌ನಲ್ಲಿರುವ ಸಂಪ್ರದಾಯವಾಗಿ ಮನೋಭಾವವನ್ನು ಬದಲಾಹಿಸಲು ಸಾಧ್ಯವಿದೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ ಆಯೋಜಕರು.

ಈ ಪೀಳಿಗೆ ಭವಿಷ್ಯದಲ್ಲಿ ನಮ್ಮ ಸಮಾಜವನ್ನು ಕಾಪಾಡುತ್ತದೆ. ಹೀಗಾಗಿ ನಾವು ಈ ಅವಕಾಶವನ್ನು ಮಕ್ಕಳಿಗೆ ಒದಗಿಸಲು ಸಂಪೂರ್ಣವಾಗಿ ಉತ್ಸುಕರಾಗಿದ್ದೇವೆ ಎಂದು ಟೋಕಿಯೊ ಸಂಘಟನಾ ಸಮಿತಿಯ ವಕ್ತಾರ ಮಾಸಾ ಟಕಯಾ ಪ್ರತಿಕ್ರಿಯೆ ನೀಡಿದ್ದಾರೆ.

Story first published: Sunday, August 22, 2021, 16:50 [IST]
Other articles published on Aug 22, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+