Paris Olympics: ಈ ಬಾರಿಯ ಓಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕ ಪಡೆದ ಅಥ್ಲೀಟ್‌ಗಳು ಯಾರು?
ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾನುವಾರ ತಡ ರಾತ್ರಿ ತೆರೆ ಬಿದ್ದಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕ್ರೀಡಾ ಕೂಟ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದೆ. ಭಾರತ ಸಹ ಈ ಕ್ರೀಡಾ ಕೂಟದಲ್ಲಿ ಸ್ಥಿರ ಪ್ರದರ್ಶನ ನೀಡಿ ಆರು ಪದಕವನ್ನು ಬಾಚಿಕೊಂಡಿದೆ. ಇನ್ನು ಹಲವು ಪದಕಗಳು ಜಸ್ಟ್ ಮಿಸ್ ಆಗಿವೆ.
ಭಾರತದಿಂದ ಒಟ್ಟು 117 ಕ್ರೀಡಾಪಟುಗಳು ಈ ಕೂಟದಲ್ಲಿ ಭಾಗವಹಿಸಿದ್ದರು. ಆದರೆ ಆರು ಜನರು ಮಾತ್ರ ಪದಕದ ನಗೆ ಬೀರಿದ್ದಾರೆ. ಇನ್ನು ಹಲವು ದೇಶಗಳು ಈ ಕ್ರೀಡಾಕೂಟದಲ್ಲಿ ಅಮೋಘ ಸಾಧನೆಯನ್ನು ಮಾಡಿವೆ. ಹಾಗಿದ್ದರೆ ಈ ಮಹಾ ಕ್ರೀಡಾ ಉತ್ಸವದಲ್ಲಿ ಈ ಬಾರಿ ವೈಯಕ್ತಿಕ ಅತಿ ಹೆಚ್ಚು ಪದಕಗಳನ್ನು ಗೆದ್ದವರು ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.

ಅಮೆರಿಕ ಹೆಚ್ಚು ಪದಕ
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಯುಎಸ್‌ಎ ಅತಿ ಹೆಚ್ಚು ಪದಕವನ್ನು ಗೆದ್ದ ಸಾಧನೆ ಮಾಡಿದೆ. ಯುಎಸ್‌ಎ ಒಟ್ಟು 126 ಪದಕಗಳನ್ನು ಗೆದ್ದಿದೆ. ಇದರಲ್ಲಿ 40 ಬಂಗಾರ, 44 ಬೆಳ್ಳಿ, 42 ಕಂಚಿನ ಪದಕಗಳು ಸೇರಿವೆ. ಚೀನಾ 40 ಸ್ವರ್ಣ, 27 ರಜತ, 24 ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಜಪಾನ್ ಒಟ್ಟು 45 ಪದಕಗಳನ್ನು ಬಾಚಿಕೊಂಡಿದ್ದು, ಮೂರನೇ ಸ್ಥಾನದಲ್ಲಿದೆ. ವೈಯಕ್ತಿಕವಾಗಿ ಅತಿ ಹೆಚ್ಚು ಪದಕಗಳನ್ನು ಗೆದ್ದ ಕೀರ್ತಿ ಆತಿಥೇಯ ದೇಶದ ಅಥ್ಲೀಟ್‌ಗೆ ಸಲ್ಲುತ್ತದೆ.
ಫ್ರಾನ್ಸ್ ಅಥ್ಲೀಟ್ ಕಮಾಲ್
ಫ್ರಾನ್ಸ್ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಒಟ್ಟು 64 ಪದಕಗಳ ಬೇಟೆಯನ್ನು ನಡೆಸಿದೆ. ಇದರಲ್ಲಿ 16 ಚಿನ್ನ, 26 ಬೆಳ್ಳಿ, 22 ಕಂಚಿನ ಪದಕ ಸೇರಿವೆ. ಫ್ರಾನ್ಸ್ ಅಥ್ಲೀಟ್ ಲಿಯಾನ್ ಮಾರ್ಚಂಡ್ ಈ ಒಲಿಂಪಿಕ್ಸ್‌ನಲ್ಲಿ ಒಟ್ಟು 4 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇವರನ್ನು ಶ್ರೇಷ್ಠ ಈಜು ಅಥ್ಲೀಟ್ ಮೈಕೆಲ್ ಫೆಲ್ಪ್ಸ್‌ಗೆ ಹೋಲಿಸಲಾಗುತ್ತಿದೆ. ಲಿಯಾನ್ ಮಾರ್ಚಂಡ್ ಪುರುಷರ 200 ಮೀಟರ್ ವೈಯಕ್ತಿಕ ಮೆಡ್ಲಿ ವಿಭಾಗ, 200 ಮೀಟರ್ ಬ್ರೇಕ್‌ಸ್ಟ್ರೋಕ್, 200 ಮೀಟರ್ ಬಟರ್ ಫ್ಲೈ, 400 ಮೀಟರ್ ವೈಯಕ್ತಿಕ ಮೆಡ್ಲಿ ವಿಭಾಗದಲ್ಲಿ ಚಿನ್ನ ಬಾಚಿಕೊಂಡಿದ್ದಾರೆ.
ಉಳಿದಂತೆ ಯುಎಸ್‌ಎಯ ಟೋರಿ ಹಸ್ಕೆ, ಸಿಮೋನ್ ಬೈಲ್ಸ್ ಮತ್ತು ಗ್ಯಾಬಿ ಥಾಮಸ್, ಆಸ್ಟ್ರೇಲಿಯಾದ ಮೊಲಿ ಒ'ಕಲ್ಲಾಘನ್ ಮೂರು ಚಿನ್ನ ಪದಕ ಪಡೆದಿದ್ದಾರೆ.

ಒಂದೇ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಚಿನ್ನದ ಪದಕಗಳನ್ನು ಗೆದ್ದ ದಾಖಲೆ ಮೈಕೆಲ್ ಫೆಲ್ಪ್ಸ್ ಹೆಸರಿನಲ್ಲಿದೆ, ಅವರು 2008 ರ ಒಲಿಂಪಿಕ್ಸ್‌ನಲ್ಲಿ ಒಟ್ಟು 8 ವೈಯಕ್ತಿಕ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಗರಿಷ್ಠ ಪದಕದ ಸಾಧನೆ
ಒಂದು ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ದಾಖಲೆ ಇಬ್ಬರು ಕ್ರೀಡಾಪಟುಗಳ ಹೆಸರಿನಲ್ಲಿದೆ. ರಷ್ಯಾದ ಜಿಮ್ನಾಸ್ಟ್ ಅಥ್ಲೀಟ್ ಅಲೆಕ್ಸಾಂಡರ್ ಡೆಟಿಯಾಟಿನ್, 1980 ರ ಒಲಿಂಪಿಕ್ಸ್‌ನಲ್ಲಿ 3 ಚಿನ್ನ, 1 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಒಳಗೊಂಡಂತೆ 8 ಪದಕಗಳನ್ನು ಗೆದ್ದಿದ್ದಾರೆ. ಈ ಸಾಧನೆಯನ್ನು ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಮೈಕೆಲ್ ಫೆಲ್ಪ್ಸ್ ಸರಿಗಟ್ಟಿದ್ದಾರೆ. 6 ಚಿನ್ನ ಮತ್ತು 2 ಕಂಚಿನ ಪದಕ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications