Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು ಅಪರಾಧವಲ್ಲ; ಕೋರ್ಟ್‌ಗೆ ಕುಸ್ತಿ ಫೆಡರೇಶನ್ ಮುಖ್ಯಸ್ಥನ ಹೇಳಿಕೆ

ಭಾರತೀಯ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಭಾರತೀಯ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ ಎಂದು ಬುಧವಾರ, ಆಗಸ್ಟ್ 9ರಂದು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಎದುರಾಳಿ ವಕೀಲರು ತಮ್ಮ ವಿರುದ್ಧ ಆರೋಪ ಹೊರಿಸುವಾಗ ಬ್ರಿಜ್ ಭೂಷಣ್ ಶರಣ್ ಸಿಂಗ್ ತಮ್ಮ ವಕೀಲರ ಮೂಲಕ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರಿಗೆ ಹೇಳಿಕೆ ಸಲ್ಲಿಸಿದರು.

ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಸಹ ಆರೋಪಿ ಅಮಾನತುಗೊಂಡ ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧದ ಆರೋಪಗಳ ಕುರಿತು ನ್ಯಾಯಾಲಯವು ಬುಧವಾರ ವಾದ-ಪ್ರತಿವಾದಗಳನ್ನು ಆಲಿಸಲು ಪ್ರಾರಂಭಿಸಿದೆ.

touching-a-woman-without-sexual-intent

ಬ್ರಿಜ್ ಭೂಷಣ್ ಸಿಂಗ್ ಪರ ವಾದ ಮಂಡಿಸಿದ ವಕೀಲ ರಾಜೀವ್ ಮೋಹನ್, ಆರೋಪಗಳಿಗೆ ಉತ್ತರಿಸಲು ಕಾಲಾವಕಾಶ ನೀಡಬೇಕೆ ಎಂದು ನ್ಯಾಯಾಲಯಕ್ಕೆ ಕೇಳಿಕೊಂಡರು.

"ಈ ಕಾಸ್ಮೆಟಿಕ್ ಆಧಾರಗಳು ದೂರುದಾರರಿಗೆ ಬೆದರಿಕೆ ಇದೆ ಎಂದು ಹೇಳಲಾಗುವುದಿಲ್ಲ. ದೂರುದಾರರು ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಮತ್ತು ಐದು ವರ್ಷಗಳಿಂದ ಅವರು ಆರೋಪಿಸಲು ಮುಂದೆ ಬರಲಿಲ್ಲ. ಬಳಿಕ ತಮಗೆ ಬೆದರಿಕೆ ಇದೆ ಎಂದು ಹೇಳುವುದು ಸೂಕ್ತ ವಿವರಣೆಯಲ್ಲ," ಎಂದು ಬ್ರಿಜ್ ಭೂಷಣ್ ಸಿಂಗ್ ಪರ ವಕೀಲ ರಾಜೀವ್ ಮೋಹನ್ ವಾದಿಸಿದರು.

"ಲೈಂಗಿಕ ಕಿರುಕುಳ ಪ್ರಕರಣ ಭಾರತದ ಹೊರಗೆ ನಡೆದಿವೆ ಎಂದು ಆರೋಪಿಸಲಾಗಿರುವ ಕಾರಂ, ಪ್ರಕರಣವನ್ನು ವಿಚಾರಣೆ ಮಾಡಲು ನ್ಯಾಯಾಲಯಕ್ಕೆ ಯಾವುದೇ ಅಧಿಕಾರವಿಲ್ಲ," ಎಂದು ವಕೀಲ ರಾಜೀವ್ ಮೋಹನ್ ಹೇಳಿದರು.

touching-a-woman-without-sexual-intent

"ನಾವು ಈ ಆರೋಪಗಳನ್ನು ತೆಗೆದುಕೊಂಡರೆ, ಭಾರತದ ನ್ಯಾಯವ್ಯಾಪ್ತಿಯು ಈ ಮೂರು ಆರೋಪಗಳಲ್ಲಿ ಮಾತ್ರ ಇರುತ್ತದೆ. ಭಾರತದ ಹೊರಗೆ ಮಾಡಿದ ಅಪರಾಧಗಳನ್ನು ನ್ಯಾಯಾಲಯವು ವಿಚಾರಣೆ ಮಾಡಲು ಬರುವುದಿಲ್ಲ. ಎರಡು ಅಪರಾಧಗಳು ಅಶೋಕ ರಸ್ತೆ ಮತ್ತು ಸಿರಿ ಕೋಟೆಗೆ ಸಂಬಂಧಿಸಿವೆ. ಸಿರಿ ಕೋಟೆಯಲ್ಲಿನ ಅಪರಾಧ ಕೇವಲ ಅಪ್ಪಿಕೊಳ್ಳುವುದಾಗಿದ್ದು, ಕ್ರಿಮಿನಲ್ ಅಥವಾ ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ಸ್ಪರ್ಶಿಸುವುದು ಅಪರಾಧವಲ್ಲ," ಎಂದು ಬ್ರಿಜ್ ಭೂಷಣ್ ಸಿಂಗ್ ಪರ ವಕೀಲರು ತಿಳಿಸಿದರು.

"ಕುಸ್ತಿಯು ಅಂತಹ ಒಂದು ಆಟವಾಗಿದೆ, ಹೆಚ್ಚಾಗಿ ಕೋಚ್‌ಗಳು ಪುರುಷರಾಗಿದ್ದಾರೆ. ಮಹಿಳಾ ಕೋಚ್‌ಗಳು ಅಪರೂಪ. ಸಂತೋಷ ಮತ್ತು ಗೆಲುವಿನ ನಂತರ, ಕುಸ್ತಿಪಟುಗಳನ್ನು ತಬ್ಬಿಕೊಂಡರೆ, ಅದು ಅಪರಾಧದ ವರ್ಗಕ್ಕೆ ಬರಲು ಸಾಧ್ಯವಿಲ್ಲ. ಪುರುಷ ಕೋಚ್‌ಗಳು ಆಟಗಾರನನ್ನು ತಬ್ಬಿಕೊಂಡರೆ ಅದು ಅಪರಾಧವಲ್ಲ," ಎಂದು ರಾಜೀವ್ ಮೋಹನ್ ಹೇಳಿದರು ಮತ್ತು ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಗುರುವಾರ ಮುಂದುವರಿಸಲಿದೆ.

ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶವನ್ನು ತೊರೆಯಬಾರದು ಮತ್ತು ಸಾಕ್ಷಿಗಳಿಗೆ ಯಾವುದೇ ಪ್ರಚೋದನೆ ನೀಡಬಾರದು ಸೇರಿದಂತೆ ಕೆಲವು ಷರತ್ತುಗಳೊಂದಿಗೆ ಮೆಟ್ರೋಪಾಲಿಟನ್ ನ್ಯಾಯಾಲಯವು ಜುಲೈ 20ರಂದು ಬ್ರಿಜ್ ಭೂಷಣ್ ಸಿಂಗ್ ಮತ್ತು ವಿನೋದ್ ತೋಮರ್‌ಗೆ ತಲಾ 25,000 ರೂಪಾಯಿಗಳ ಬಾಂಡ್‌ನಲ್ಲಿ ಜಾಮೀನು ನೀಡಲಾಗಿತ್ತು.

ದೆಹಲಿ ಪೊಲೀಸರು ಜೂನ್ 15ರಂದು ಆರು ಬಾರಿಯ ಸಂಸದನ ವಿರುದ್ಧ ಚಾರ್ಜ್ ಶೀಟ್ ಅನ್ನು 354 (ಮಹಿಳೆಯ ನಮ್ರತೆಯನ್ನು ಪ್ರಚೋದಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಪ್ರಯೋಗ), 354-ಎ (ಲೈಂಗಿಕ ಕಿರುಕುಳ), 354-ಡಿ (ಹಿಂಬಾಲಿಸುವಿಕೆ) ಮತ್ತು 506 (ಕ್ರಿಮಿನಲ್ ಬೆದರಿಕೆ)ರ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು.

Story first published: Thursday, August 10, 2023, 9:50 [IST]
Other articles published on Aug 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+