ಪ್ರೊ ಕಬಡ್ಡಿ ಲೀಗ್ ಫೈನಲ್, ಮುಂಬೈ-ಜೈಪುರ ಮುಖಾಮುಖಿ
ಮುಂಬೈ, ಆ.31 : ಪ್ರೊ ಕಬಡ್ಡಿ ಲೀಗ್ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ. ಮುಂಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಯು-ಮುಂಬಾ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಎರಡು ತಂಡಗಳು ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದಿಂದ ಗಮನಸೆಳೆದಿದ್ದು, ಯಾರಿಗೆ ಪ್ರಶಸ್ತಿ ಎಂದು ಕಾದು ನೋಡಬೇಕಿದೆ.
ಮುಂಬೈನಲ್ಲಿ ನಡೆದ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಯು ಮುಂಬಾ ತಂಡಗಳು ಮುಖಾಮುಖಿಯಾಗಿದ್ದವು. ಸದ್ಯ ಫೈನಲ್‌ನಲ್ಲಿ ಇದೇ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಎರಡು ತಂಡಗಳಲ್ಲಿ ಯಾರು ಬಲಿಷ್ಠರು ಎಂದು ತಿಳಿಯಬೇಕಾದರೆ, ಇಂದು ರಾತ್ರಿ ತಪ್ಪದೇ ಫೈನಲ್ ಪಂದ್ಯವನ್ನು ನೋಡಿ.

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಒಡೆತನದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಟೂರ್ನಿಯಲ್ಲೇ ಅತ್ಯಂತ ಬಲಿಷ್ಠ ತಂಡ ಎಂಬ ಹೆಗ್ಗಳಿಕೆ ಪಡೆದಿದೆ. ತವರಿನಲ್ಲೇ ಫೈನಲ್ ಪಂದ್ಯವಿರುವುದು ಮುಂಬೈ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ತಂಡದ ಕೋಚ್ ರವಿ ಶೆಟ್ಟಿ ಹೇಳಿದ್ದಾರೆ.
ಜೈಪುರ್ ತಂಡ ಸಹ ಬಲಿಷ್ಠವಾಗಿದೆ. ಒಂದು ಸಲ ತಂಡ ಲಯವನ್ನು ಕಂಡುಕೊಂಡರೆ ಎದುರಾಳಿಗಳ ಕಥೆ ಮುಗಿದಂತೆಯೇ, ರೈಡರ್‌ಗಳನ್ನು ಹಿಡಿದು ಕಟ್ಟಿಹಾಕುವಲ್ಲಿ ಜೈಪುರ ತಂಡ ಚಾಣಾಕ್ಷ ನಡೆ ಅನುಸರಿಸುತ್ತದೆ. ಜಸ್ವೀರ್ ಸಿಂಗ್, ಮನಿಂದರ್ ಸಿಂಗ್ ಮುಂತಾದವರು ತಂಡದ ಶಕ್ತಿಯಾಗಿದ್ದಾರೆ.
ಭಾನವಾರ ರಾತ್ರಿ 8 ಗಂಟೆಯಿಂದ ಪ್ರೊ ಕಬ್ಬಡಿ ಫೈನಲ್ ಪಂದ್ಯ ಮುಂಬೈನ ಎನ್‌ಎಸ್‌ಸಿಐ ಸ್ಟೇಡಿಯಂನಲ್ಲಿ ನಡೆಯಲಿದೆ. ಸ್ಟಾರ್ ಗೋಲ್ಡ್ ಮತ್ತು ಸುವರ್ಣ ಪ್ಲಸ್ ಚಾನೆಲ್‌ಗಳಲ್ಲಿ ಪಂದ್ಯದ ನೇರ ಪ್ರಸಾರವಿರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications