For Quick Alerts
ALLOW NOTIFICATIONS  
For Daily Alerts

ಅಂಡರ್‌ 19 ವಿಶ್ವಕಪ್‌: ಸೆಮಿ ಫೈನಲ್‌ನಲ್ಲಿ ಅಪ್ಘಾನಿಸ್ತಾನ್‌ ಮಣಿಸಿದ ಭಾರತ, ಫೈನಲ್‌ ಪ್ರವೇಶ

U19 World Cup 2026: ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಅಂಡರ್‌ 19 ವಿಶ್ವಕಪ್‌ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನ್ ವಿರುದ್ಧ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿತು. ಮಹತ್ವದ ಪಂದ್ಯದಲ್ಲಿ ಭಾರತ ತಂಡ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿದ್ದು, ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಅಪ್ಘಾನಿಸ್ತಾನ್ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 310 ರನ್‌ಗಳನ್ನು ಕಲೆಹಾಕಿ ಭಾರತಕ್ಕೆ 311 ರನ್‌ಗಳನ್ನು ಗುರಿ ನೀಡಿತು. ಭಾರತವು ಕೇವಲ 41.1 ಓವರ್‌ಗಳಲ್ಲಿ ಈ ಗುರಿಯನ್ನು ತಲುಪುವಲ್ಲಿ ಯಶ್ವಸಿಯಾಗುವ ಮೂಲಕ ಸೆಮಿ ಫೈನಲ್‌ ಪಂದ್ಯದಲ್ಲಿ ಗೆದ್ದು ಫೈನಲ್‌ ಪ್ರವೇಶ ಮಾಡಿತು.

U19 World Cup 2026 India Beat Afghanistan in Semi-Final Enters Final Know Complete details

ಭಾರತ ಬ್ಯಾಟರ್‌ಗಳ ಅಬ್ಬರ: ಭಾರತದ ಪರ ಬ್ಯಾಟ್ ಬೀಸಿದ ಆರೋನ್ ಜಾರ್ಜ್ 104 ಎಸೆತಗಳಲ್ಲಿ 2 ಸಿಕ್ಸ್, 15 ಬೌಂಡರಿಗಳ ಸಹಿತ 115 ರನ್‌ಗಳನ್ನು ಸಿಡಿಸಿ ತಂಡಕ್ಕೆ ಆಸರೆಯಾದರು. ವೈಭವ್ ಸೂರ್ಯವಂಶಿ 33 ಬಾಲ್‌ಗಳಲ್ಲಿ 4 ಸಿಕ್ಸ್‌, 9 ಬೌಂಡರಿಗಳೊಂದಿಗೆ 68, ಆಯುಷ್ ಮ್ಹಾತ್ರೆ 59 ಎಸೆತಗಳಲ್ಲಿ 4 ಸಿಕ್ಸ್, 5 ಬೌಂಡರಿಗಳ ಸಹಿತ 62 ರನ್‌ ಕಲೆಹಾಕಿ ವಿಕೆಟ್‌ ಒಪ್ಪಿಸಿದರು. ಈ ಮೂವರು ಕಲೆಹಾಕಿದ ಬೃಹತ್ ರನ್‌ಗಳೇ ತಂಡದ ಗೆಲುವಿಗೆ ಪ್ರಮಖ ಪಾತ್ರವಾಗಿದೆ. ವಿಹಾನ್ ಮಲ್ಹೋತ್ರಾ 38(47), ವೇದಾಂತ್ ತ್ರಿವೇದಿ 5(6) ರನ್‌ ಕಲೆಹಾಕಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಇದಕ್ಕೂ ಮುನ್ನ ಆರಂಭದಿಂದಲೇ ಅಫ್ಘಾನಿಸ್ತಾನ್ ಬ್ಯಾಟ್ಸ್‌ಮನ್‌ಗಳು ಕೂಡ ಉತ್ತಮವಾಗಿ ಪ್ರದರ್ಶನ ತೋರಿದರು. ಅಫ್ಘಾನಿಸ್ತಾನದ ಪರ ಉಜೈರುಲ್ಲಾ ನಿಯಾಜೈ ಮತ್ತು ಫೈಸಲ್ ಶಿನೋಜಾಡಾ ಶತಕದ ನೆರವಿನಿಂದ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ನಿಯಾಜೈ 86 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ ಅಜೇಯ 101 ರನ್ ಗಳಿಸಿದರೆ, ಫೈಸಲ್ ಶಿನೋಜಾಡಾ 93 ಎಸೆತಗಳಲ್ಲಿ 15 ಬೌಂಡರಿಗಳ ಸಹಿತ 110 ರನ್‌ಗಳನ್ನು ಸೇರಿಸಿದರು. ಇವರ ಜೊತೆಯಾಟ ತಂಡದ ಮೊತ್ತವನ್ನು 300 ರನ್‌ಗಳ ಗಡಿಗೆ ತಲುಪಿಸಿತು.

ಅಫ್ಘಾನ್‌ ಬ್ಯಾಟರ್‌ಗಳಿಗೆ ಕಾಡಿದ ಭಾರತ್ ಬೌಲರ್ಸ್‌: ಭಾರತದ ಪರ ದೀಪೇಶ್ ದೇವೇಂದ್ರನ್ ಹಾಗೂ ಕನಿಷ್ಕ್ ಚೌಹಾಣ್ ತಲಾ ಎರಡು ವಿಕೆಟ್‌ಗಳನ್ನು ಪಡೆದು ತಂಡಕ್ಕೆ ಪ್ರಮುಖ ಯಶಸ್ಸು ತಂದುಕೊಟ್ಟರು. ಉಳಿದ ಬೌಲರ್‌ಗಳು ನಿಯಂತ್ರಿತ ಬೌಲಿಂಗ್ ಮೂಲಕ ರನ್ ವೇಗ ಕಡಿಮೆ ಮಾಡಲು ಪ್ರಯತ್ನಿಸಿದರು. ಈ ಮೂಲಕ ಅಫ್ಘಾನಿಸ್ತಾನವನ್ನು 310 ರನ್‌ಗಳಿಗೆ ಕಟ್ಟಿಹಾಕಿದರು.

ಫೈನಲ್‌ಗೆ ಪ್ರವೇಶ ಪಡೆದ ಭಾರತ: ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2026ರ ಅಂಡರ್‌ 19 ಏಕದಿನ ವಿಶ್ವಕಪ್‌ನ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾದವು. ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ಯುವ ಪಡೆ ಉತ್ತಮ ಪ್ರದರ್ಶನ ತೋರಿದ್ದು, ಅಫ್ಘಾನಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸತತ ಆರನೇ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.

ಅಫ್ಘಾನಿಸ್ತಾನ ನೀಡಿದ 311 ರನ್‌ಗಳನ್ನು ಕೇವಲ 41.1 ಓವರ್‌ಗಳಲ್ಲಿ ಮುಟ್ಟಿ ಗೆಲುವು ಸಾಧಿಸಿತು. ಭಾರತೀಯ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯುತ ಆಟದ ಫಲವಾಗಿ ಇನ್ನೂ 53 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿದ ಭಾರತ ತಂಡ, ಅಂಡರ್‌ 19 ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಅತಿದೊಡ್ಡ ಗುರಿ ಬೆನ್ನಟ್ಟಿದ ದಾಖಲೆಯನ್ನು ಸಹ ತನ್ನ ಹೆಸರಿಗೆ ಬರೆದುಕೊಂಡಿತು. ಈ ಗೆಲುವಿನೊಂದಿಗೆ ಭಾರತ ತಂಡ ಟ್ರೋಫಿ ಗೆಲ್ಲುವ ಕನಸಿಗೆ ಮತ್ತಷ್ಟು ಹತ್ತಿರವಾಗಿದೆ.

Story first published: Wednesday, February 4, 2026, 20:14 [IST]
Other articles published on Feb 4, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+