Rebecca Cheptege: ಪ್ರಿಯಕರನಿಂದಲೇ ಹತ್ಯೆಗೀಡಾದ ಪ್ಯಾರಿಸ್ ಒಲಿಂಪಿಕ್ಸ್ ಅಥ್ಲೀಟ್
ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾಗವಹಿಸಿದ್ದ ಉಂಗಾಡಾದ ಅಥ್ಲೀಟ್ ರೆಬೆಕಾ ಚೆಪ್ಟೆಗೆ ಅವರು ಪ್ರಿಯಕರನಿಂದಲೇ ಹತ್ಯೆಗೀಡಗಿದ್ದಾರೆ. ಕಳೆದ ತಿಂಗಳು ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮ್ಯಾರಥಾನ್‌ನಲ್ಲಿ 33 ವರ್ಷದ ರೆಬೆಕಾ ಸ್ಪರ್ಧಿಸಿದ್ದರು. ಆದರೆ ಯಾವುದೇ ಪದಕಗಳನ್ನು ಸಾಧ್ಯವಾಗಿರಲಿಲ್ಲ.
ಆಸ್ತಿ ವಿವಾದ ಹಿನ್ನೆಲೆ ಸೆಪ್ಟೆಂಬರ್ 1 ರಂದು ರೆಬೆಕಾ ಮೇಲೆ ಆಕೆಯ ಪ್ರಿಯಕರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಕೀನ್ಯಾದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಬದುಕುಳಿಯುವ ಹೋರಾಟ ನಡೆಸಿದ ರೆಬೆಕಾ ಗುರುವಾರ ಮೃತಪಟ್ಟಿದ್ದಾರೆ.

ವರದಿಗಳ ಪ್ರಕಾರ, 'ರೆಬೆಕಾ ಮತ್ತು ಆಕೆಯ ಪ್ರಿಯಕರ ಡಿಕ್ಸನ್ ಎನ್ಡಿಮಾ ಜರ್ಕಿನ್ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಆಕೆಯ ಮೇಲೆ ಡಿಕ್ಸನ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ರೆಬೆಕಾ ದೇಹದ ಶೇ.80ರಷ್ಟು ಸುಟ್ಟು ಹೋಗಿತ್ತು. ಈ ಕುರಿತು ಸೋಮವಾರ ಪ್ರಕರಣ ದಾಖಲಿಸಿಕೊಂಡ ಟ್ರಾನ್ಸ್ ನ್ಜೋವಾ ಕೌಂಟಿ ಪೊಲೀಸ್ ಕಮಾಂಡರ್ ಜೆರೆಮಿಯಾ ಓಲೆ ಕೊಸಿಯಾಮ್ ಅವರು ಹೇಳಿದ್ದಾರೆ.
ನ್ಯಾಯಕ್ಕಾಗಿ ಒತ್ತಾಯ
ಉಗಾಂಡಾ ಅಥ್ಲೆಟಿಕ್ಸ್ ಫೆಡರೇಶನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ರೆಬೆಕಾ ಮೃತಪಟ್ಟಿರುವುದರ ಬಗ್ಗೆ ಮಾಹಿತಿ ನೀಡಿದೆ. ಅಥ್ಲೀಟ್ ಸಾವಿಗೆ ನ್ಯಾಯ ನೀಡುವಂತೆ ಫೆಡರೇಶನ್ ಒತ್ತಾಯಿಸಿದೆ. "ಕೌಟುಂಬಿಕ ಹಿಂಸಾಚಾರದಿಂದಾಗಿ ಬಲಿಯಾದ ನಮ್ಮ ಅಥ್ಲೀಟ್ ರೆಬೆಕಾ ಚೆಪ್ಟೆಗೆ ಅವರ ಸಾವನ್ನು ಘೋಷಿಸಲು ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ನಾವು ಇಂತಹ ಕೃತ್ಯಗಳನ್ನು ಖಂಡಿಸುತ್ತೇವೆ ಮತ್ತು ನ್ಯಾಯಕ್ಕಾಗಿ ಒತ್ತಾಯಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications