Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶೇಷ ಫೋಟೋ ಮೂಲಕ ಸಾಮಾಜಿಕ ಅಂತರದ ಸಂದೇಶ ನೀಡಿದ ಉಸೇನ್ ಬೋಲ್ಟ್

Usain Bolt Sends Strong Message On Social Distancing Through Iconic Photo

ಉಸೇನ್ ಬೋಲ್ಟ್ ಈ ಜಗತ್ತು ಕಂಡ ಅತ್ಯಂತ ವೇಗದ ಓಟಗಾರ. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ದಾಖಲೆಯ ಕ್ಷಣದಲ್ಲಿ ಗುರಿಯನ್ನು ತಲುಪಿ ಜಗತ್ತನ್ನು ನಿಬ್ಬೆರಗಾಗಿಸಿದ ಜಮೈಕಾದ ಕ್ರೀಡಾಪಟು. ಈಗ ವಿಶೇಷ ಸಂದೇಶವೊಂದನ್ನು ನೀಡಿದ್ದಾರೆ. ಈ ಸಂದೇಶವನ್ನು ನೀಡಲು ಉಸೇನ್ ಬೋಲ್ಟ್ ವಿಶಿಷ್ಟ ಫೋಟೋವೊಂದನ್ನು ಬಳಸಿಕೊಂಡಿದ್ದಾರೆ.

ಇಡಿ ಜಗತ್ತು ಕೊರೊನಾ ವೈರಸ್‌ನ ದಾಳಿಗೆ ನಲುಗಿದೆ. ಹೊರಗಿನ ಸಂಪರ್ಕಕ್ಕೆ ಹೋಗದೆ ಮನೆಯೊಳಗೇ ಇರುವುದು ಮಾತ್ರವೇ ಈ ಮಾರಣಾಂತಿಕ ವೈರಸ್‌ನಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಇರುವ ದಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಮನೆಯಲ್ಲೇ ಇರುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಇದೇ ಮನವಿಯನ್ನು ಉಸೇನ್ ಬೋಲ್ಟ್ ಕೂಡ ಮಾಡಿದ್ದಾರೆ.

ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 100 ಮೀಟರ್‌ ವಿಶ್ವ ದಾಖಲೆಯ ಚಿತ್ರವನ್ನು ಬಳಸಿಕೊಂಡು ಅಭಿಮಾನಿಗಳಿಗೆ ಬೋಲ್ಟ್ ಸಂದೇಶವನ್ನು ನೀಡಿದ್ದಾರೆ. ವಿಶ್ವದಾಖಲೆಯ ಗುರಿ ತಲುಪಿದಾಗಿನ ದಾಖಲೆಯ ಅಂತರದ ಚಿತ್ರವನ್ನು ತೋರಿಸಿ ಬೋಲ್ಟ್ 'ಸಾಮಾಜಿಕ ಅಂತರ' ಎಂದು ಟ್ವೀಟ್ ಮಾಡಿದ್ದಾರೆ.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್ ಈ ವಿರ್ಶವಾದಾಖಲೆಯನ್ನು ಬರೆದಿದ್ದರು. 100 ಮೀಟರ್ ದೂರವನ್ನು ಕೇವಲ 9.69 ಸೆಕೆಂಡ್‌ನಲ್ಲಿ ತಲುಪಿ ನಿಬ್ಬೆರಗಾಗಿಸಿದ್ದರು. ಎರಡನೇ ಸ್ಥಾನ ಪಡೆದ ರಿಚರ್ಡ್ ಥಾಮ್ಸನ್ ಅವರಿಗಿಂತ 0.20 ಸೆಕೆಂಡ್‌ ಮೊದಲು ಗುರಿಯನ್ನು ತಲುಪಿದ್ದರು ಬೋಲ್ಟ್.

ಇದೇ ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್ 200 ಮೀಟರ್ ಓಟದಲ್ಲೂ ವಿಶ್ವದಾಖಲೆಯನ್ನು ಬರೆದಿದ್ದಾರೆ. 200 ಮೀಟರ್ ಓಟವನ್ನು 19.38 ಸೆಕೆಂಡ್‌ಗಳಲ್ಲಿ ಬೋಲ್ಟ್ ತಲುಪಿದ್ದರು. ಇದು ಕೂಡ ವಿಶ್ವದಾಖಲೆಯಾಗಿಯೇ ಉಳಿದುಕೊಂಡಿದೆ.

Story first published: Tuesday, April 14, 2020, 13:43 [IST]
Other articles published on Apr 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+