Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೈಕ್ಲಿಂಗ್‌ನಲ್ಲಿ ಚಿನ್ನ ಗೆದ್ದ ಬಾಗಲಕೋಟೆಯ ವೆಂಕಣ್ಣ ಕೆಂಗಲಗುತ್ತಿ

Venkappa Kengalagutti Won Gold Medal in Asia cycling championship

ಬೆಂಗಳೂರು, ಸೆಪ್ಟೆಂಬರ್ 12 : ಬಾಗಲಕೋಟೆ ಜಿಲ್ಲೆಯ ವೆಂಕಣ್ಣ ಕೆಂಗಲಗುತ್ತಿ ಏಷಿಯನ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದಿದ್ದಾರೆ. ನವದೆಹಲಿಯಲ್ಲಿ ಏಷಿಯನ್ ಕಪ್ ಸೈಕ್ಲಿಂಗ್ ಕ್ರೀಡಾಕೂಟ ನಡೆಯಿತು.

ಬಾಗಲಕೋಟೆಯ ತುಳಸಿಗೇರಿ ಗ್ರಾಮದ ವೆಂಕಣ್ಣ ಕೆಂಗಲಗುತ್ತಿ ಏಷಿಯನ್ ಕ್ರೀಡಾಕೂಟದಲ್ಲಿ ಜೂನಿಯರ್ ವಿಭಾಗದ 3 ಕಿ.ಮೀ ವೈಯಕ್ತಿಕ ಶೂಟ್‍ನಲ್ಲಿ ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ 10 ಕಿ.ಮೀ ಸ್ಕ್ರ್ಯಾಚ್ ರೇಸ್‍ನಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.

ವೆಂಕಣ್ಣ ಕೆಂಗಲಗುತ್ತಿ ತುಳಸಿಗೇರಿ ಗ್ರಾಮದ ಶಿವಪ್ಪ ಮತ್ತು ಬಾಗವ್ವ ದಂಪತಿಗಳ ಪುತ್ರ. ತಂದೆ ಶಿವಪ್ಪ ಕೃಷಿಕರು, ವೆಂಕಣ್ಣ 1 ರಿಂದ 4ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಕುವೆಂಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 5 ರಿಂದ 9ನೇ ತರಗತಿವರೆಗೆ ಬಾಗಲಕೋಟೆಯ ಸರ್ಕರಿ ಕಿರಿಯ ಪ್ರೌಢಶಾಲೆಯಲ್ಲಿ ಹಾಗೂ ಎಸ್.ಎಸ್.ಎಲ್.ಸಿಯನ್ನು ಬೆಳಗಾವಿ ಜಿಲ್ಲೆಯ ಕುಲಗೋಡದಲ್ಲಿ ಮುಗಿಸಿದ್ದಾರೆ.

ಜಮಖಂಡಿಯ ಬಿ.ಎಲ್.ಡಿ ಸಂಸ್ಥೆಯಲ್ಲಿ ಪಿಯಿಸಿ ಮುಗಿಸಿದ ಅವರು ಕ್ರೀಡಾ ಶಾಲೆಗೆ 2013-14ರಲ್ಲಿ ಆಯ್ಕೆಗೊಂಡರು. 2016 ವರೆಗೆ ಸೈಕ್ಲಿಂಗ್ ತರಬೇತಿದಾರರಾದ ಅನಿತಾ ನಿಂಬರಗಿ ಅವರಿಂದ ತರಬೇತಿ ಪಡೆದಿದ್ದಾರೆ.

Venkappa Kengalagutti Won Gold Medal in Asia cycling championship

2017ರಲ್ಲಿ ದೆಹಲಿಯ ಕೇಂದ್ರ ಸರ್ಕಾರದ ಸೈಕ್ಲಿಂಗ್ ಕ್ರೀಡಾ ನಿಲಯಕ್ಕೆ ಆಯ್ಕೆಯಾಗಿ ಅಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ವೆಂಕಣ್ಣ ಕೆಂಗಲಗುತ್ತಿ ಅವರು ರಾಜ್ಯ ಮಟ್ಟದಲ್ಲಿ 6 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ 2013ರಿಂದ ಇದುವರೆಗೂ 10 ಚಿನ್ನದ ಪದಕ, 6 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಮೂರು ಅಂತರರಾಷ್ಟ್ರೀಯ ಏಷಿಯನ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ 2018ರಲ್ಲಿ ಮಲೇಷಿಯಾದಲ್ಲಿ ನಡೆದ ಏಷಿಯನ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದಾರೆ.

ಈ ವರ್ಷ ಇಂಡೋನೇಷಿಯಾದಲ್ಲಿ ನಡೆದ ಏಷಿಯನ್ ಚಾಂಪಿಯನ್‍ಶಿಪ್‍ನಲ್ಲಿ 1 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲಾಡಳಿತದ ವತಿಯಿಂದ ಒಳ್ಳೆಯ ಕ್ರೀಡಾಪಟು ಎಂದು 2018ರಲ್ಲಿ ಗಣರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಏಷಿಯನ್ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದ ವೆಂಕಣ್ಣ ಕೆಂಗಲಗುತ್ತಿ ಅವರನ್ನು ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಭಿನಂದಿಸಿದೆ.

Story first published: Thursday, September 12, 2019, 14:56 [IST]
Other articles published on Sep 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+