ಕಾಮನ್‌ವೆಲ್ತ್ ಗೇಮ್ಸ್ 2026ರ ಆಯೋಜನೆಯಿಂದ ಹಿಂದೆ ಸರಿದ ಆಸ್ಟ್ರೇಲಿಯಾ: ಅಹ್ಮದಾಬಾದ್‌ನಲ್ಲಿ ನಡೆಯಲಿದೆಯಾ ಕ್ರೀಡಾಕೂಟ?
2026ರಲ್ಲಿ ನಡೆಯಬೇಕಿದ್ದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಆಯೋಜನೆಯಿಂದ ಆಸ್ಟ್ರೇಲಿಯಾದ ವಿಕ್ಟೋರಿಯಾದ ಹಿಂದಕ್ಕೆ ಸರಿದಿದೆ. ಈ ಕ್ರೀಡಾಕೂಟದ ಆಯೋಜನೆಗೆ ಭಾರೀ ಪ್ರಮಾಣದ ಖರ್ಚು ಉಂಟಾಗಲಿದೆ ಎಂಬ ಕಾರಣಕ್ಕಾಗಿ ಈ ನಿರ್ಧಾರಕ್ಕೆ ಬಂದಿದೆ ವಿಕ್ಟೋರಿಯಾ. ಹೀಗಾಗಿ 2026ರ ಕಾಮನ್‌ವೆಲ್ತ್ ಕ್ರಿಡಾಕೂಟ ನಡೆಯುವ ಬಗ್ಗೆಯೇ ಅನುಮಾನಗಳು ಉಂಟಾಗಿದೆ.
ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಕ್ಟೋರಿಯಾ ರಾಜ್ಯದ ಪ್ರಧಾನಿ ಡೇನಿಯಲ್ ಆಂಡ್ರ್ಯೂಸ್ "ನಾಲ್ಕು ಪ್ರಾಂತ್ಯಗಳಲ್ಲಿ ನಡೆಯಬೇಕಿದ್ದ ಈ ಕ್ರೀಡಾಕೂಟಕ್ಕೆ 12.36 ಬಿಲಿಯನ್ ಡಾಲರ್(1152 ಕೋಟಿ) ಖರ್ಚಾಗುವ ನಿರೀಕ್ಷೆಯಿತ್ತು. ಆದರೆ ಅದು 2026ರ ವೇಳೆಗೆ 40,000 ಕೋಟಿ ರೂಪಾಯಾಗುವ ಸಾಧ್ಯತೆಯಿದೆ. 12 ದಿನಗಳ ಈ ಕ್ರೀಡಾಕೂಟಕ್ಕಾಗಿ ಇಷ್ಟು ಬೃಹತ್ ಮೊತ್ತವನ್ನು ವ್ಯಯಿಸಲು ನಾವು ಬಯಸುವುದಿಲ್ಲ" ಎಂದು ಹೇಳಿಕೆಯನ್ನು ನೀಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ರೀಡಾಕೂಟದ ಆಯೋಜನೆಯ ಒಪ್ಪಂದದಿಂದ ಹಿಂದೆ ಸರಿಯುವ ತಮ್ಮ ಸರ್ಕಾರದ ನಿರ್ಧಾರದ ಬಗ್ಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ಸಂಘಟಕರಿಗೆ ಸೂಚನೆ ನೀಡಿದ್ದೇನೆ ಎಂದು ಆಂಡ್ರ್ಯೂಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ಈ ವಿಚಾರವಾಗಿ ಕಾಮನ್‌ವೆಲ್ತ್ ಗೇಮ್ಸ್ ಫಡರೇಷನ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ತಮ್ಮ ಮುಂದಿರುವ ಆಯ್ಕೆಗಳ ಬಗ್ಗೆ ಸಲಹೆಗಳನ್ನು ಪಡೆಯುವದಾಗಿ ತಿಳಿಸಿದೆ. ಇನ್ನು ದೊಡ್ಡ ಪ್ರಮಾಣದ ವೆಚ್ಚದ ಹೆಚ್ಚಳಕ್ಕೆ ಪ್ರಾದೇಶಿಕ, ಬಹು-ನಗರದಲ್ಲಿ ಆಯೋಜನೆ ಮಾಡುವ ಮಾದರಿ, ಹೆಚ್ಚಿನ ಕ್ರೀಡೆಗಳನ್ನು ಸೇರ್ಪಡೆಗೊಳಿಸುವ ಮತ್ತು ತಾಣಗಳನ್ನು ಬದಲಾಯಿಸುವ ವಿಕ್ಟೋರಿಯಾ ಸರ್ಕಾರದ ನಿರ್ಧಾರಗಳಿಂದಾಗಿಅಂದಾಜು ವೆಚ್ಚದ ಹೆಚ್ಚಳವಾಗಿದೆ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಈ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾ ಈ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಯಿಂದ ಹಿಂದಕ್ಕೆ ಸರಿಯುತ್ತಿದೆ ಎಂಬುದು ದೃಢವಾಗುತ್ತಿದ್ದಂತೆಯೇ ಭಾರತದ ಅಹ್ಮದಾಬಾದ್ ನಗರ ಈ ಪ್ರತಿಷ್ಠಿತ ಕ್ರೀಡಾಕೂಟದ ಆಯೋಜನೆಗೆ ಆಸಕ್ತಿವಹಿಸಿದೆ ಎಂಬ ಸುದ್ದಿಗಳು ವರದಿಯಾಗಿದ್ದವು. ಆದರೆ ಗುಜರಾತ್ ಸರ್ಕಾರದ ಅಧಿಕಾರಿಗಳು ಈ ಬಗ್ಗೆ ದೃಢಪಡಿಸಿದ್ದು 2026ರ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಯ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ನಮ್ಮ ಚಿತ್ತ 2036ರ ಒಲಿಂಪಿಕ್ಸ್ ಆಯೋಜನೆಯ ಹಕ್ಕನ್ನು ಪಡೆದುಕೊಳ್ಳುವುದರ ಮೇಲೆ ನೆಟ್ಟಿದೆ ಎಂದಿದ್ದಾರೆ.
ಗುಜರಾತ್‌ನ ರಾಜ್ಯ ಕ್ರೀಡೆ, ಯುವಜನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಇಲಾಖೆಯ ಉಪ ಕಾರ್ಯದರ್ಶಿ ಯು ಎ ಪಟೇಲ್ ಅವರು ಪಿಟಿಐಗೆ ಮಾಹಿರಿ ನೀಡುತ್ತಾ ಈ ವರದಿಯನ್ನು ನಿರಾಕರಿಸಿದ್ದಾರೆ. "2036ರ ಒಲಿಂಪಿಕ್ಸ್‌ನ ಆತಿಥ್ಯದ ಹಕ್ಕುಗಳನ್ನು ಪಡೆದುಕೊಳ್ಳುವುದರ ಮೇಮೆ ನಮ್ಮ ಗಮನವಿದೆ. ಸದ್ಯಕ್ಕೆ 2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಬಿಡ್ ಮಾಡಲು ನಮ್ಮ ಕಡೆಯಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ" ಎಂದು ಪಟೇಲ್ ಪಿಟಿಐಗೆ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications