ಕಿಂಗ್ ಕೊಹ್ಲಿಯಿಂದ ಶುಭ್ಮನ್ ಗಿಲ್‌ಗೆ ವಿಶಿಷ್ಟ ಉಡುಗೊರೆ; ರಹಸ್ಯವಾಗಿ ಈ ವಿಚಾರ ತಿಳಿಸಿದ ಗಿಲ್

ಪ್ರತಿಯೊಬ್ಬ ಯುವ ಕ್ರಿಕೆಟಿಗರು ಭಾರತದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ಅದೇ ರೀತಿ 4 ವರ್ಷದ ವಿರಾಟ್ ಕೊಹ್ಲಿ ಆಗಾಗ ಯುವ ಆಟಗಾರರಿಗೆ ಸಲಹೆ ಮತ್ತು ಧೈರ್ಯ ತುಂಬುವುದನ್ನು ನಾವು ಕಂಡಿದ್ದೇವೆ.
ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿಯು ಯುವ ಕ್ರಿಕೆಟಿಗರೊಂದಿಗೆ ಮೈದಾನದ ಒಳಗೆ ಮತ್ತು ಹೊರಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.
ಅದೇ ರೀತಿ ಭಾರತದ ಉದಯೋನ್ಮುಖ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರೊಂದಿಗಿನ ಆನ್‌ಲೈನ್ ಸಂಭಾಷಣೆಯು ಇತ್ತೀಚೆಗೆ ಕ್ರಿಕೆಟ್ ಲೋಕದಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ.
ಶುಭ್ಮನ್ ಗಿಲ್ ಕೆಲವು ದಿನಗಳ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಬ್ರ್ಯಾಂಡ್ ಸೆಷನ್‌ಗಾಗಿ ಅವರು ಫ್ಯಾಶನ್ ದಿರಿಸು ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದರು. ಆ ಪೋಸ್ಟ್‌ನಲ್ಲಿ ಕೈಗಡಿಯಾರ ಕಟ್ಟಿರುವುದನ್ನು ಕಾಣಬಹುದು.
ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಶೀರ್ಷಿಕೆಯಲ್ಲಿ ಛಾಯಾಗ್ರಾಹಕರಿಂದ ಹಿಡಿದು ಅವರ ಮೇಕಪ್ ಕಲಾವಿದರವರೆಗೆ ಪ್ರತಿಯೊಬ್ಬರನ್ನು ಶುಭ್ಮನ್ ಗಿಲ್ ಟ್ಯಾಗ್ ಮಾಡಿದ್ದಾರೆ. ಆದರೆ, 23ರ ಹರೆಯದ ಶುಭ್ಮನ್ ಗಿಲ್ ಅವರ ಎಡಗೈನಲ್ಲಿರುವ ಕೈಗಡಿಯಾರದ ಬಗ್ಗೆ ವಿರಾಟ್ ಕೊಹ್ಲಿ, ವಾಚ್? ಯಾರಿಂದ? ಎಂದು ಅವರು ಕಾಮೆಂಟ್ ಸೆಕ್ಷನ್‌ನಲ್ಲಿ ಪ್ರಶ್ನಿಸಿದ್ದಾರೆ. ಆಗ ಶುಭಮನ್ ಗಿಲ್ "ಕಿಂಗ್ ಕೃಪೆಯಿಂದ' ಎಂದು ಪ್ರತಿಕ್ರಿಯಿಸಿದ್ದಾರೆ.
ಸುಳಿವು ಅಷ್ಟಾಗಿ ಇರಲಿಲ್ಲವಾದರೂ, ಶುಭ್ಮನ್ ಗಿಲ್ 'ಕಿಂಗ್ ಕೊಹ್ಲಿ' ಎಂದೇ ಪ್ರಸಿದ್ಧರಾಗಿರುವ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಬೇರೆ ಯಾರನ್ನೂ ಉಲ್ಲೇಖಿಸಿಲ್ಲ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ. ಈ ಹಿಂದೆ ವಿರಾಟ್ ಕೊಹ್ಲಿಯಿಂದ ಶುಭ್ಮನ್ ಗಿಲ್ ವಿಶಿಷ್ಟ ಉಡುಗೊರೆಯನ್ನು ಪಡೆದಿರಲಿಲ್ಲ.

GQ ಎಂಬ ಜಾಹೀರಾತಿನ ಶಾಟ್‌ಗಾಗಿ ಶುಭ್ಮನ್ ಗಿಲ್ ಸೊಗಸಾದ ಉಡುಪಿನಲ್ಲಿ ಛಾಯಾಚಿತ್ರಕ್ಕೆ ಪೋಸ್ ನೀಡಿದರು. ಆ ಚಿತ್ರದಲ್ಲಿ ಕೈಗಡಿಯಾರವನ್ನು ಸಹ ಕಟ್ಟಿದ್ದಾರೆ. ಅದನ್ನು ವಿರಾಟ್ ಕೊಹ್ಲಿ ಗಮನಿಸಿ ಕಾಮೆಂಟ್ ಮಾಡಿದ್ದಾರೆ, 'ನೈಸ್ ವಾಚ್. ವಾಟ್ಸ್ ಅಪ್, ಕಿತ್ತೋನ್?' ಎಂದು ಕಾಮೆಂಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಶುಭ್ಮನ್ ಗಿಲ್, 'ಕಿಂಗ್ ನನಗೆ ಈ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಪಾಜಿ," ಎಂದು ನಂತರದ ಕಾಮೆಂಟ್‌ನಲ್ಲಿ ದೃಢಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಇಬ್ಬರೂ ಈಗ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡಕ್ಕಾಗಿ ಆಡುತ್ತಿದ್ದಾರೆ. ಮಂಗಳವಾರ, ಜನವರಿ 24ರಂದು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್‌ಸ್ವೀಪ್ ಮಾಡಲು ಎದುರು ನೋಡುತ್ತಿದೆ.
2023ರ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯುವ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯನ್ನು ತವರಿನಲ್ಲಿ ಆಯೋಜಿಸಲು ಸಿದ್ಧವಾಗಿರುವ ಭಾರತ ತಂಡ, ಅದಕ್ಕೂ ಮುನ್ನ ಏಕದಿನ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಕ್ಕೇರುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications