Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಹವಾ; ವಿದ್ಯಾರ್ಥಿಗಳು, ಪೊಲೀಸರೊಂದಿಗೆ ಪೋಸ್ ಕೊಟ್ಟ ಆರ್‌ಸಿಬಿ ಕಿಂಗ್

ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ತಮ್ಮ ಮುಂದಿನ ಕಠಿಣ ಕ್ರಿಕೆಟ್ ವೇಳಾಪಟ್ಟಿಗಾಗಿ ಅತ್ಯುತ್ತಮ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ.

ಸೆಪ್ಟೆಂಬರ್ 2ರಂದು ಭಾರತ ತಂಡವು ಏಷ್ಯಾ ಕಪ್ ಪಂದ್ಯಾವಳಿಯನ್ನು ಗೆಲ್ಲುವ ಉದ್ದೇಶದಿಂದ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಆ ಬಳಿಕ ಸ್ವದೇಶದಲ್ಲಿ ಏಕದಿನ ವಿಶ್ವಕಪ್‌ ಟ್ರೋಫಿಗಾಗಿ ಅಗ್ರ ತಂಡಗಳನ್ನು ಸೋಲಿಸಲು ಪ್ರಯತ್ನಿಸಲಿದೆ.

Virat Kohli Poses To Camera With Students And Police In Bengaluru

ಭಾರತ ಕ್ರಿಕೆಟ್ ತಂಡದ ಆಟಗಾರರು ಪ್ರಸ್ತುತ ಏಷ್ಯಾ ಕಪ್‌ನ ಪೂರ್ವ ತಯಾರಿಗಾಗಿ ಬೆಂಗಳೂರಿನ ಶಿಬಿರದಲ್ಲಿ ಬೀಡುಬಿಟ್ಟಿದ್ದಾರೆ. ಈ ವೇಳೆ ಕೆಲವು ಆಟಗಾರರು ಹಲವಾರು ಫಿಟ್‌ನೆಸ್ ಮತ್ತು ರಕ್ತ ಪರೀಕ್ಷೆಗಳ ಮೂಲಕ ಸಜ್ಜಾಗುತ್ತಿದ್ದಾರೆ.

ಇನ್ನು ವಿಶ್ವದ ಫಿಟೆಸ್ಟ್ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಯೋ-ಯೋ ಟೆಸ್ಟ್ ಸ್ಕೋರ್ ಗಳಿಸಿದ್ದಾರೆ. ಬಳಿಕ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಫಿಟ್‌ನೆಸ್ ಪರೀಕ್ಷೆಯ ನಂತರ ಮೈದಾನದಲ್ಲಿ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಚಿತ್ರದೊಂದಿಗೆ ವಿರಾಟ್ ಕೊಹ್ಲಿ ತಮ್ಮ ಯೋ-ಯೋ ಟೆಸ್ಟ್ ಸ್ಕೋರ್‌ಗಳನ್ನು 17.2 ಎಂದು ಬಹಿರಂಗಪಡಿಸಿದರು. ವರದಿಗಳ ಪ್ರಕಾರ, ಬಿಸಿಸಿಐ ಯೋ-ಯೋ ಟೆಸ್ಟ್‌ಗಳಲ್ಲಿ ಆಟಗಾರರಿಂದ ಕನಿಷ್ಠ 16.5 ಅಂಕಗಳನ್ನು ಬಯಸುತ್ತದೆ.

ಬಿಡುವಿನ ವೇಳೆಯಲ್ಲಿ ಮೈದಾನದ ಹೊರಗೆ ಕೂಡ ವಿರಾಟ್ ಕೊಹ್ಲಿ ಗಮನ ಸೆಳೆಯುತ್ತಿದ್ದಾರೆ. ಗುರುವಾರದಂದು ವಿರಾಟ್ ಕೊಹ್ಲಿ ಬೆಂಗಳೂರಿನ ಶಾಲಾ ಮಕ್ಕಳೊಂದಿಗೆ ತಮ್ಮ ಸಮಯವನ್ನು ಆನಂದಿಸಿದರು.

ವೈರಲ್ ಆಗಿರುವ ಇತ್ತೀಚಿನ ಫೋಟೋದಲ್ಲಿ ವಿದ್ಯಾರ್ಥಿಗಳೊಂದಿಗೆ ಪೋಸ್ ನೀಡಿದ್ದರೆ, ಇನ್ನೊಂದು ವಿಡಿಯೋದಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಕೊಹ್ಲಿಯನ್ನು ಕಂಡು ಅಭಿಮಾನಿಗಳು ಹುಚ್ಚರಾಗುತ್ತಿದ್ದಾರೆ.

ಇನ್ನು ಭದ್ರತೆಯ ಉಸ್ತುವಾರಿ ವಹಿಸಿದ್ದ ಪೊಲೀಸರು ಅಭಿಮಾನಿಗಳನ್ನು ತಡೆಯಲು ಹರಸಾಹಸಪಟ್ಟರು. ಆದರೆ, ಪೊಲೀಸರು ಕೂಡ ಭಾರತದ ಮಾಜಿ ನಾಯಕನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ವಿಶೇಷವಾಗಿತ್ತು.

ಆಗಸ್ಟ್ 30ರಂದು ಪಾಕಿಸ್ತಾನದ ಮುಲ್ತಾನ್‌ನಲ್ಲಿ ಪಾಕಿಸ್ತಾನ ಮತ್ತು ನೇಪಾಳ ನಡುವಿನ ಪಂದ್ಯದೊಂದಿಗೆ ಏಷ್ಯಾ ಕಪ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ.

ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ನಂತರ, ಇದೇ ಸ್ಥಳದಲ್ಲಿ ಸೆಪ್ಟೆಂಬರ್ 4ರಂದು ನೇಪಾಳ ತಂಡವನ್ನು ಮತ್ತೊಂದು ಗುಂಪು ಹಂತದ ಪಂದ್ಯದಲ್ಲಿ ಸೆಣಸಾಡಲಿದೆ.

ಪಾಕಿಸ್ತಾನದಲ್ಲಿ ಮೂರು ಗುಂಪು ಹಂತದ ಪಂದ್ಯಗಳು ಮತ್ತು ಒಂದು ಸೂಪರ್ ಫೋರ್ ಹಂತದ ಪಂದ್ಯವನ್ನು ಆಯೋಜಿಸಲಿದೆ. ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದ್ದರೆ, ಫೈನಲ್ ಪಂದ್ಯವು ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ನಡೆಯಲಿದೆ.

Story first published: Friday, August 25, 2023, 19:13 [IST]
Other articles published on Aug 25, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+