Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 82 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಗ್ಲೌಸ್ ಭಾರೀ ಮೊತ್ತಕ್ಕೆ ಹರಾಜು!

ಕಳೆದ ತಿಂಗಳು ಸೆಪ್ಟೆಂಬರ್ 13ರಂದು ಸಿಡ್ನಿಯಲ್ಲಿ ನಡೆದ ಚಾಪೆಲ್ ಫೌಂಡೇಶನ್‌ನ ಆರನೇ ವಾರ್ಷಿಕ ಭೋಜನಕೂಟದಲ್ಲಿ ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಕೈಗವಸು (ಗ್ಲೌಸ್)ಗಳನ್ನು ಹರಾಜು ಮಾಡಲಾಯಿತು.

ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಮತ್ತು ಆಸ್ಟ್ರೇಲಿಯಾದ ಉದ್ಯಮಿ ದರ್ಶಕ್ ಮೆಹ್ತಾ ಅವರು ಚಾಪೆಲ್ ಫೌಂಡೇಶನ್ ಅನ್ನು ಸಹ-ಸ್ಥಾಪಿಸಿದ್ದಾರೆ.

ಚಾಪೆಲ್ ಪ್ರತಿಷ್ಠಾನವು ಆಸ್ಟ್ರೇಲಿಯಾದಲ್ಲಿ ನಿರಾಶ್ರಿತ ಯುವಕರಿಗೆ ಹಣವನ್ನು ಸಂಗ್ರಹಿಸುತ್ತದೆ. ಆಸ್ಟ್ರೇಲಿಯಾದಲ್ಲಿ ನಿರಾಶ್ರಿತ ಯುವಕರಿಗೆ ಆಶ್ರಯ, ಆರೈಕೆ, ಶಿಕ್ಷಣ, ತರಬೇತಿ ಮತ್ತು ಉತ್ತಮ ಭವಿಷ್ಯವನ್ನು ಒದಗಿಸುವುದು ಇದರ ಗುರಿಯಾಗಿದೆ.

virat-kohlis-t20-world-cup-gloves

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ 2022ರ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವೀರೋಚಿತ 82 ರನ್ ಗಳಿಸಿದ ನಂತರ, ವಿರಾಟ್ ಕೊಹ್ಲಿ ತಮ್ಮ ತಮ್ಮ ಕೈಗವಸುಗಳನ್ನು ಫೌಂಡೇಶನ್‌ಗೆ ದಾನ ಮಾಡಿದರು.

ಇದೀಗ ಹರಾಜಿನಲ್ಲಿ ವಿರಾಟ್ ಕೊಹ್ಲಿಯ ಕೈಗವಸುಗಳಿಗೆ ಹೆಚ್ಚಿನ ಆಸಕ್ತಿ ಇತ್ತು. ಹಾರ್ವ್ ಕ್ಲೆರ್ ಅಂತಿಮವಾಗಿ 5,750 ಯುಎಸ್ ಡಾಲರ್ (3.2 ಲಕ್ಷ ರೂಪಾಯಿ) ಮೌಲ್ಯದ ಬಿಡ್ ಅನ್ನು ಸಲ್ಲಿಸುವ ಮೂಲಕ ಗೆದ್ದರು.

"ಹಾರ್ವ್ ಕ್ಲೆರ್ ಅವರು ಇತರ ಇಬ್ಬರು ಭಾರತೀಯ-ಆಸ್ಟ್ರೇಲಿಯನ್ ಉದ್ಯಮಿಗಳೊಂದಿಗೆ ಉತ್ಸಾಹಭರಿತ ಬಿಡ್ಡಿಂಗ್ ಸ್ಪರ್ಧೆಯನ್ನು ಗೆದ್ದರು. ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಎಮ್‌ಸಿಜಿ ಇನ್ನಿಂಗ್ಸ್‌ನ ನಂತರ ಫೌಂಡೇಶನ್‌ಗೆ ದಾನ ಮಾಡಿದ್ದರು," ಎಂದು ದಿ ಚಾಪೆಲ್ ಫೌಂಡೇಶನ್‌ ಪ್ರಕಟಣೆ ತಿಳಿಸಿದೆ.

virat-kohlis-t20-world-cup-gloves

ಈವರೆಗೆ ಸಂಗ್ರಹಿಸಿದ ನಿಧಿಯ ದೃಷ್ಟಿಯಿಂದ ದಿ ಚಾಪೆಲ್ ಫೌಂಡೇಶನ್ ಆಯೋಜಿಸಿದ ವಾರ್ಷಿಕ ಭೋಜನವು ಅತ್ಯುತ್ತಮವಾದದ್ದು ಎಂದು ದರ್ಶಕ್ ಮೆಹ್ತಾ ಹೇಳಿದ್ದಾರೆ.

ದಿ ಚಾಪೆಲ್ ಫೌಂಡೇಶನ್ 2017ರಿಂದ 5 ಮಿಲಿಯನ್‌ ಡಾಲರ್‌ಗಿಂತಲೂ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ. ಮಾಜಿ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಬ್ರೆಟ್ ಲೀ, ಮೈಕೆಲ್ ಬೆವನ್, ಪೀಟರ್ ನೆವಿಲ್, ಫಿಲ್ ಎಮೆರಿ, ಜಿಯೋಫ್ ಲಾಸನ್, ಗ್ರೆಗ್ ಡೈಯರ್, ಟ್ರೆವರ್ ಮತ್ತು ಇಯಾನ್ ಚಾಪೆಲ್ ಅವರು ವಾರ್ಷಿಕ ಡಿನ್ನರ್‌ಗಾಗಿ ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್‌ಸಿಜಿ) ನಲ್ಲಿ ಉಪಸ್ಥಿತರಿದ್ದರು.

ಪಾಕಿಸ್ತಾನ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಲು ಭಾರತ ತಂಡಕ್ಕೆ ನೆರವಾದ ವಿರಾಟ್ ಕೊಹ್ಲಿ

ಕಳೆದ ವರ್ಷ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಸೂಪರ್ 12 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೀವಮಾನದ ಶ್ರೇಷ್ಠ ಇನ್ನಿಂಗ್ಸ್ ಆಡಿದ್ದರು.

160 ರನ್ ಚೇಸ್‌ನಲ್ಲಿ ಭಾರತ ತಂಡದ ಸ್ಕೋರ್ 7 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದಾಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದರು. ಭಾರತ ತಂಡ ಏಳನೇ ಓವರ್‌ ಅಂತ್ಯಕ್ಕೆ 31 ರನ್‌ಗಳಿಗೆ 4 ವಿಕೆಟ್‌ಗೆ ಕುಸಿಯಿತು.

ನಂತರ, ಹಾರ್ದಿಕ್ ಪಾಂಡ್ಯ ಅವರೊಂದಿಗೆ ವಿರಾಟ್ ಕೊಹ್ಲಿ ಕೈಜೋಡಿಸಿ ಭಾರತವನ್ನು ಮತ್ತೆ ಸ್ಪರ್ಧೆಗೆ ಮರಳಿ ತಂದರು. ಅಂತಿಮವಾಗಿ, ರವಿಚಂದ್ರನ್ ಅಶ್ವಿನ್ ಅವರು ಕೊನೆಯ ಬಾಲ್‌ನಲ್ಲಿ ಭಾರತ ತಂಡಕ್ಕೆ ಗೆಲುವಿನ ರನ್ ಗಳಿಸಿದರು.

Story first published: Tuesday, October 31, 2023, 11:36 [IST]
Other articles published on Oct 31, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+