ವಿಶ್ವಕಪ್ : ಗ್ರೀಕರಿಗೆ ಒಲಿದ ಅದೃಷ್ಟ 16ರ ಹಂತಕ್ಕೆ!
ಮೌಸೋ, ಜೂ.26: ಫೀಫಾ ವಿಶ್ವಕಪ್ ಟೂರ್ನಿಯ ಅದೃಷ್ಟವಂತರೆಂದರೆ ಗ್ರೀಕರು ಎಂದು ಯಾರೂ ಬೇಕಾದರೂ ಹೇಳುತ್ತಾರೆ. ಲೀಗ್ ಹಂತದ ಕೊನೆ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಪೆನಾಲ್ಟಿ ಗಿಟ್ಟಿಸಿಕೊಂಡು ಗೋಲು ಗಳಿಸಿದ್ದಲ್ಲದೆ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಸಿ ಗುಂಪಿನ ಪಂದ್ಯದ ಇಂಜುರಿ -ಟೈಮ್‌ನಲ್ಲಿ ಜಾರ್ಜಿಯಸ್ ಸಾಮರಾಸ್ ದಾಖಲಿಸಿದ ಪೆನಾಲ್ಟಿ ಗೋಲ್ ಗ್ರೀಕ್ ತಂಡವನ್ನು ಮೊದಲ ಬಾರಿ ವಿಶ್ವಕಪ್‌ನಲ್ಲಿ ಎರಡನೇ ಸುತ್ತು ತಲುಪಿಸಿದೆ. ಎಸ್ತಾದಿಯೋ ಕ್ಯಾಸ್ಟೆಲೊ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಐವರಿ ಕೋಸ್ಟ್ ತಂಡವನ್ನು 2-1 ಅಂತರದಿಂದ ಬಗ್ಗು ಬಡಿದ ಗ್ರೀಕ್ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಎರಡನೇ ಹಂತಕ್ಕೆ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದ ಐವರಿ ಕೋಸ್ಟ್ ಅಂತಿಮ ಹಂತದಲ್ಲಿ ತಾಳ್ಮೆ ಕಳೆದುಕೊಂಡು ಆಟವಾಡಿದ್ದು ಮುಳುವಾಯಿತು.[ಸೋಲಿನ ದವಡೆಯಿಂದ ಪಾರಾದ ರೊನಾಲ್ಡೊ ಪಡೆ]
ಪಂದ್ಯದ ಮೊದಲಾರ್ಧದ ಸಮಯ ಇನ್ನೇನು ಮುಗಿಯುತ್ತಿರುವ ಸಂದರ್ಭದಲ್ಲೇ (42ನೇ ನಿಮಿಷ) ಗ್ರೀಸ್‌ನ ಮುಂಚೂಣಿ ಆಟಗಾರ ಆಂಡ್ರಿಯಿಯಸ್ ಚೆಂಡನ್ನು ಗುರಿ ಮುಟ್ಟಿಸಿದರು. ಆಗಲೇ ಐವರಿ ಕೋಸ್ಟ್ ತಂಡಕ್ಕೆ ಆತಂಕ ಶುರುವಾಗಿತ್ತು. ವಿರಾಮದ ನಂತರ ಗೇಮ್‌ಪ್ಲಾನ್ ಪಂದ್ಯ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಆದರೆ, ಅದೃಷ್ಟ ಕೈ ಕೊಟ್ಟಿದ್ದರಿಂದ ಐವರಿ ಕೋಸ್ಟ್ ಟೂರ್ನಿಯಿಂದ ನಿರ್ಗಮಿಸಿದರೆ, ಗ್ರೀಕರು ವಿಜಯೋತ್ಸವ ಆಚರಿಸಿದರು.

ಬೋನಿ ಆಘಾತ ನೀಡಿದರು
32 ನಿಮಿಷದ ತನಕ ಮುನ್ನಡೆ ಕಾಯ್ದುಕೊಂಡ ಗ್ರೀಕ್‌ಗೆ 74ನೆ ನಿಮಿಷದಲ್ಲಿ ಬೋನಿ ಆಘಾತ ನೀಡಿದರು. ಗೆರ್ವಿನೊ ನೀಡಿದ ಅವಕಾಶವನ್ನು ಮಿಸ್ ಮಾಡಿಕೊಳ್ಳದ ವಿಲ್‌ಫ್ರೆಡ್ ಬೋನಿ ಚೆಂಡನ್ನು ಗೋಲ್ ಪೆಟ್ಟಿಗೆಯ ಮಧ್ಯಕ್ಕೆ ತಳ್ಳಿ 1-1 ಸಮಬಲ ಸಾಧಿಸಿದರು.

ಆಕ್ರಮಕಾರಿ ಆಟಕ್ಕೆ ಒತ್ತು ನೀಡಿದರು
ಆಟದ 90 ನಿಮಿಷ ಕೊನೆಗೊಂಡಾಗ ಪಂದ್ಯ ಡ್ರಾದತ್ತ ಮುಖ ಮಾಡಿತು. ಐದು ನಿಮಿಷಗಳ ಇಂಜುರಿ ಸಮಯದಲ್ಲಿ ಗೆಲುವಿಗೆ ಎರಡೂ ತಂಡಗಳೂ ಗೋಲ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. 93ನೆ ನಿಮಿಷದಲ್ಲಿ ಪೆನಾಲ್ಟಿ ಏರಿಯಾದಲ್ಲಿ ಐವರಿ ಕೋಸ್ಟ್‌ನ ಗಿಯೊವಾನಿ ಸಿಯೊ ತಪ್ಪು ಮಾಡಿ ಎಡವಟ್ಟು ಮಾಡಿಕೊಂಡರು. ಇದಕ್ಕಾಗಿ ಗ್ರೀಕ್‌ಗೆ ಪೆನಾಲ್ಟಿ ಅವಕಾಶ ದೊರೆಯಿತು. ಜಾರ್ಜಿಯಸ್ ಸಾಮರಾಸ್ ಚೆಂಡನ್ನು ಗೋಲ್ ಬಾಕ್ಸ್‌ಗೆ ತಲುಪಿಸಿ ಗ್ರೀಕ್‌ಗೆ 2-1 ಮುನ್ನಡೆ ಸಾಧಿಸಲು ನೆರವಾದರು.

ಗ್ರೀಕ್ ಗೆಲುವಿನ ನಗೆ ಬೀರಿತು
ಅಂತಿಮ ನಿಮಿಷದಲ್ಲಿ ಕೊಲೊ ಟೌರೆ ಮತ್ತು ಯಾಯ್ಯ ಟೌರೆ ಗೋಲ್ ಗಳಿಸುವ ಪಯತ್ನ ನಡೆಸಿದರೂ ಅವರ ಪ್ರಯತ್ನ ಫಲ ನೀಡಲಿಲ್ಲ. ಗ್ರೀಕ್ ಗೆಲುವಿನ ನಗೆ ಬೀರಿತು.

ಪಂದ್ಯದ ಅಂಕಿ ಅಂಶ ಎಲ್ಲಾ ಹೇಳುತ್ತದೆ
ಗ್ರೀಸ್ vs ಐವರಿ ಕೋಸ್ಟ್
4 ಶಾಟ್ ಆನ್ ಟಾರ್ಗೆಟ್ 3
45% ಚೆಂಡಿನ ನಿಯಂತ್ರಣ 55%
4 ಕಾರ್ನರ್ಸ್ 7
13 ಫೌಲ್ 23
1 ಆಫ್ ಸೈಡ್ 1
3 ಬದಲಿ ಆಟಗಾರರು 3

ಗೆಲುವಿನ ಆ ಕ್ಷಣ ರೋಮಾಂಚನ
ಗೆಲುವಿನ ಆ ಕ್ಷಣ ರೋಮಾಂಚನ ಗ್ರೀಸ್ ಆಟಗಾರರು ಈ ಗೆಲುವಿನೊಂದಿಗೆ ಸಿ ಗುಂಪಿನ ಎರಡನೇ ತಂಡವಾಗಿ ನಾಕೌಟ್ ಹಂತ ತಲುಪಿದ್ದಾರೆ. ಸಿ ಗುಂಪಿನಲ್ಲಿ ಮೂರು ಪಂದ್ಯ ಗೆದ್ದಿರುವ ಕೊಲಂಬಿಯಾ ಅಗ್ರಸ್ಥಾನಿಯಾಗಿ ಮುಂದಿನ ಹಂತಕ್ಕೇರಿದೆ.
ಮುಂದಿನ ಹಂತದಲ್ಲಿ ಕೋಸ್ಟರಿಕಾ ತಂಡದ ವಿರುದ್ಧ ಗ್ರೀಸ್ ಸೆಣಸಲಿದ್ದರೆ, ಕೊಲಂಬಿಯಾ ತಂಡ ಉರುಗ್ವೆ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications