For Quick Alerts
ALLOW NOTIFICATIONS  
For Daily Alerts

ವಿಶ್ವಕಪ್ :ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನಕ್ಕೆ ಸೋಲು

By Mahesh

ಕ್ಯಾನ್ ಬೆರಾ, ಫೆ.18: ವಿಶ್ವಕಪ್ ಟೂರ್ನಿ 2015ರ ಎ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 267 ಸ್ಕೋರಿಗೆ ಆಫ್ಘಾನಿಸ್ತಾನ ಆಲೌಟ್ ಮಾಡಿದೆ. ಮನುಕಾ ಓವಲ್ ಮೈದಾನದಲ್ಲಿ ನಡೆದಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 267 ಸ್ಕೋರಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಅದರೆ, ಅಫ್ಘಾನ್ ತಂಡ ರನ್ ಚೇಸ್ ನಲ್ಲಿ ಮುಗ್ಗರಿಸಿ 162 ಸ್ಕೋರಿಗೆ ಆಲೌಟ್ ಆಯಿತು.

ಬಾಂಗ್ಲಾದೇಶ ತಂಡ ನೀಡಿದ್ದ 268 ರನ್ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 26 ಓವರ್ ಗಳಲ್ಲಿ 78/5 ಸ್ಕೋರ್ ಮಾಡಿ ದುಃಸ್ತಿತಿಯಲ್ಲಿತ್ತು. ನಂತರ ಚೇತರಿಸಿಕೊಳ್ಳದೆ 42.5 ಓವರ್ ಗಳಲ್ಲಿ 162ರನ್ನಿಗೆ ಆಲೌಟ್ ಆಯಿತು.

ಆರಂಭಿಕ ಬ್ಯಾಟ್ಸ್ ಮನ್ ಗಳಾದ ಜಾವೇದ್ ಅಹ್ಮದಿ ಹಾಗೂ ಅಫ್ಸರ್ ಜಾಜಾಯಿ ತಲಾ 1 ರನ್ ಗಳಿಸಿ ಔಟ್ ಆಗಿದ್ದರೆ, ಅಸ್ಗರ್ ಕೂಡಾ 1 ರನ್ ಗಳಿಸಿ ಪೆವಿಲಿಯನ್ ಸೇರಿದ್ದಾರೆ. ನವ್ರೋಜ್ ಮಂಗ್ಲ್ 27 ಹಾಗೂ ಸಮಿಯುಲ್ಲಾ ಶೆನ್ವಾರಿ 42 ರನ್ ಗಳಿಸಿ ಔಟಾಗಿದ್ದು, ಬಾಂಗ್ಲಾ ಬೌಲಿಂಗ್ ದಾಳಿ ತತ್ತರಿಸಿದರು. ಮಹಮ್ಮದ್ ನಬಿ 44 ರನ್ ಗಳಿಸಿದರು.

WC 2015: Bangladesh crush Afghanistan

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು ಅಫ್ಘಾನಿಸ್ತಾನ 32 ರನ್ ಗಳಿಂದ ಸೋಲಿಸಿತ್ತು. ವಿಶ್ವಕಪ್ ನಲ್ಲೂ ಇದೇ ಪ್ರದರ್ಶನ ನೀಡುವ ನಿರೀಕ್ಷೆ ಹುಟ್ಟಿಸಿತ್ತು. ಅದರೆ, ಬಾಂಗ್ಲಾದೇಶದ ನಾಯಕ ಮುರ್ತಜಾ ಮಾರಕ ಬೌಲಿಂಗ್ ಮಾಡಿ 9 ಓವರ್ ಗಳಲ್ಲಿ 20ರನ್ನಿತ್ತು 3 ವಿಕೆಟ್ ಕಿತ್ತರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಶಕೀಬ್ ಅಲ್ ಹಸನ್ 63,ಮುಷ್ಫಿಕರ್ ರಹೀಮ್ 71 ರನ್ ನೆರವಿನಿಂದ 50 ಓವರ್ ಗಳಲ್ಲಿ 367 ರನ್ ಗಳಿಸಿತ್ತು. ಅಫ್ಘಾನಿಸ್ತಾನ ಪರ ಹಮೀದ್ ಹಸನ್, ಶಾಪೂರ್ ಜರ್ದಾನ್, ಅಫ್ತಾಬ್ ಅಲಂ, ಮಿರ್ವಾಯಿಸ್ ಅಶ್ರಫ್ ತಲಾ 2 ವಿಕೆಟ್ ಪಡೆದರೆ, ಮಹಮ್ಮದ್ ನಬಿ ಒಂದು ವಿಕೆಟ್ ಕಿತ್ತರು.

ಅಫ್ಘಾನಿಸ್ತಾನ:
ಮೊಹಮ್ಮದ್ ನಬಿ(ನಾಯಕ), ನವ್ರೋಜ್ ಮಂಗಲ್, ಅಸ್ಘರ್ ಸ್ಟಾನಿಕ್ಜಾಜಿ, ಸಮಿಯುಲ್ಲಾ ಶೆನ್ವಾರಿ, ಅಫ್ಸಾರ್ ಜಾಜಾಯಿ(ವಿಕೆಟ್ ಕೀಪರ್), ನಾಜಿಬುಲ್ಲಾ ಜಾರ್ದ್ರಾನ್, ನಾಸೀರ್ ಜಮಾಲ್, ಮಿರ್ವಾಯಿಸ್ ಅಶ್ರಾಫ್, ಗುಲ್ಬದಿನ್ ನಯಿಬ್, ಹಮೀದ್ ಹಸನ್, ಶಪೂರ್ ಜದ್ರಾನ್, ದವ್ಲತ್ ಜದ್ರಾನ್, ಆಫ್ತಾಬ್ ಅಲಂ, ಜಾವೇದ್ ಅಹ್ಮದಿ, ಉಸ್ಮನ್ ಘನಿ

ಬಾಂಗ್ಲಾದೇಶ: ಮಶ್ರಾಫೆ ಮೋರ್ತಾಜಾ(ನಾಯಕ), ಶಕೀಬ್ ಅಲ್ ಹಸನ್( ಉಪ ನಾಯಕ, ತನೀನ್ ಇಕ್ಬಾಲ್, ಅನಾಮುಲ್ ಹಕ್, ಮೊಮಿನುಲ್ ಹಕ್, ಮೊಮುದುಲ್ಲಾ ರಿಯಾದ್, ಮುಷಫಿಕರ್ ರಹೀಂ(ವಿಕೆಟ್ ಕೀಪರ್), ನಾಸೀರ್ ಹುಸೇನ್, ರೈಜಾಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಅಲ್ ಅಮೀನ್ ಹುಸೇನ್, ರುಬೇಲ್ ಹುಸೇನ್, ಸೌಮ್ಯ ಸರ್ಕಾರ್, ಸಬ್ಬೀರ್ ರಹ್ಮಾನ್, ಅರಾಫರ್ ಸನ್ನಿ.

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+