For Quick Alerts
ALLOW NOTIFICATIONS  
For Daily Alerts

Paralympics 2024: ಭಾರತಕ್ಕೆ ಬಂಗಾರ ತಂದು ಕೊಟ್ಟ ನಿತೇಶ್ ಕುಮಾರ್ ಯಾರು?

ಸೋಮವಾರ ನಡೆದ ರೋಚಕ ಪುರುಷರ ಸಿಂಗಲ್ಸ್ ಎಸ್‌ಎಲ್ 3 ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಭಾರತದ ಷಟ್ಲರ್ ನಿತೇಶ್ ಕುಮಾರ್ ಅವರು ದಾಖಲೆ ಬರೆದರು. ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ವಿರುದ್ಧ ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ತಮ್ಮ ಮೊದಲ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಡೇನಿಯಲ್ ಮತ್ತು ನಿತೇಶ್ ಕುಮಾರ್ ನಡುವೆ ಒಂದು ಗಂಟೆ 20 ನಿಮಿಷಗಳ ಕಾಲ ರೋಚಕ ಫೈನಲ್ ಕಾದಾಟ ನಡೆಯಿತು. ಈ ಪಂದ್ಯದಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ಡೇನಿಯಲ್ ಅವರನ್ನು 21-14, 18-21, 23-21 ಸೆಟ್‌ಗಳ ಅಂತರದಿಂದ ನಿತೇಶ್ ಕುಮಾರ್ ಸೋಲಿಸಿದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಚಿಕ್ಕ ತಂದು ಕೊಟ್ಟ ಅವರ ಸಾಹಸಗಾಥೆಯ ವಿಶೇಷ ವರದಿ ಇಲ್ಲಿದೆ.

Who is Nitesh Kumar who won gold medal in Paris Paralympics 2024

ಆರಂಭಿಕ ಜೀವನ

ರಾಜಸ್ಥಾನ ಮೂಲದ 30 ವರ್ಷದ ನಿತೀಶ್ ಕುಮಾರ್ ಕ್ರೀಡಾ ಪ್ರಯಾಣವು ಅವರ ಬಾಲ್ಯದಲ್ಲಿ ಪ್ರಾರಂಭವಾಯಿತು. ಮೊದಲು ಅವರು ಫುಟ್‌ಬಾಲ್ ಕ್ರೀಡೆ ಬಗ್ಗೆ ಉತ್ಸಾಹವನ್ನು ಬೆಳೆಸಿಕೊಂಡಿದ್ದರು. ಆದರೆ 2009ರ ವೇಳೆ ವಿಶಾಖಪಟ್ಟಣಂನಲ್ಲಿ ಜರುಗಿದ ರೈಲು ಅಪಘಾತದಲ್ಲಿ ಅವರ ಜೀವನವನ್ನು ಬದಲಾಯಿಸುವ ಘಟನೆ ಸಂಭವಿಸಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ ಅವರು ಹಲವಾರು ತಿಂಗಳುಗಳ ಕಾಲ ಹಾಸಿಗೆ ಮೇಲೆ ಇದ್ದರು. ಪರಿಣಾಮ ಅವರು ತನ್ನ ಒಂದು ಕಾಲನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಯಿತು.

ಸಾಧನೆ ಕಡೆಗೆ

ಐಐಟಿ ಮುಗಿಸಿದ ನಿತೀಶ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು. ಈ ಸಂದರ್ಭದಲ್ಲಿ ಅವರು ಬ್ಯಾಡ್ಮಿಂಟನ್‌ ಆಡಲು ಪ್ರಾರಂಭಿಸಿದರು. ನಂತರದ ವರ್ಷಗಳಲ್ಲಿ ಅವರು ಬ್ಯಾಡ್ಮಿಂಟನ್ ಅಂಗಳದಲ್ಲಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಕೊಂಡರು. ಆಗಾಗ್ಗೆ ತಮ್ಮ ಅಧ್ಯಯನದ ವಿರಾಮದ ಸಮಯದಲ್ಲಿ ಅಭ್ಯಾಸ ನಡೆಸುತ್ತಿದ್ದರು.

ವಿಕಲಚೇತನರಿಗಾಗಿ ಆಯೋಜಿಸುತ್ತಿದ್ದ ಈವೆಂಟ್‌ಗಳಲ್ಲಿ ನಿತೇಶ್ ಉತ್ತಮ ಪ್ರದರ್ಶನ ನೀಡುವ ಮೂಲಕ ಮೂಲಕ ಪ್ಯಾರಾಸ್ಪೋರ್ಟ್ಸ್‌ಗೆ ಪರಿಚಯ ಮಾಡಿಕೊಂಡರು. ಇದು ಕ್ರೀಡಾ ಜಗತ್ತಿನಲ್ಲಿ ಅವರಿಗೆ ಹೊಸ ಮಾರ್ಗಗಳನ್ನು ತೆರೆದುಕೊಟ್ಟಿತ್ತು.

2016ರಲ್ಲಿ ಫರಿದಾಬಾದ್‌ನಲ್ಲಿ ನಡೆದ ಪ್ಯಾರಾ ನ್ಯಾಷನಲ್ಸ್‌ನಲ್ಲಿ ಹರಿಯಾಣ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ನಿತೀಶ್ ಪಡೆದಿದ್ದರು. ಇದು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅವರ ಮೊದಲ ಹೆಜ್ಜೆಯಾಗಿತ್ತು. ಈ ಈವೆಂಟ್‌ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ನಂತರ 2017ರಲ್ಲಿ ಅವರು ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಮತ್ತು ಬೆಂಗಳೂರಿನಲ್ಲಿ ನಡೆದ ಡಬಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

ಪ್ಯಾರಾಲಿಂಪಿಕ್ಸ್‌ಗೆ ಆರ್ಹತೆ ಪಡೆದಿದ್ದೇಗೆ?

ನಿತೀಶ್ ಅವರು ಯಶಸ್ಸಿನ ಉತ್ತುಂಗವನ್ನು 2020ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಏರಿದರು. ಅಲ್ಲಿ ಅವರು ಟೋಕಿಯೊ ಪ್ಯಾರಾಲಿಂಪಿಕ್ ಪದಕ ವಿಜೇತರಾದ ಪ್ರಮೋದ್ ಮತ್ತು ಮನೋಜ್ ಅವರನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದರು.

ಇದಾದ ಬಳಿಕ ರಾಷ್ಟ್ರೀಯ ಈವೆಂಟ್‌ಗಳನ್ನು ಮೀರಿ ನಿತೀಶ್ ಅಂತರಾಷ್ಟ್ರೀಯ ವೇದಿಕೆಯಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ವಿವಿಧ ಟೂರ್ನಿಗಳಲ್ಲಿ ಹಲವು ಪದಕಗಳನ್ನು ಗೆದ್ದಿರುವ ಅವರು ಇದೀಗ 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ನಿತೇಶ್ ಕುಮಾರ್ ಅವರ ಸಾಧನೆಗಳು

  • ಏಷ್ಯನ್ ಪ್ಯಾರಾ ಗೇಮ್ಸ್ (2022) - ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕ
  • ಏಷ್ಯನ್ ಪ್ಯಾರಾ ಗೇಮ್ಸ್ (2022) - ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ
  • ಏಷ್ಯನ್ ಪ್ಯಾರಾ ಗೇಮ್ಸ್ (2022) - ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ
  • ಏಷ್ಯನ್ ಪ್ಯಾರಾ ಗೇಮ್ಸ್ (2018) - ಪುರುಷರ ಡಬಲ್ಸ್‌ನಲ್ಲಿ ಕಂಚಿನ ಪದಕ
  • ವಿಶ್ವ ಚಾಂಪಿಯನ್‌ಶಿಪ್ (2024) - ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ
  • ವಿಶ್ವ ಚಾಂಪಿಯನ್‌ಶಿಪ್ (2022) - ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ
  • ವಿಶ್ವ ಚಾಂಪಿಯನ್‌ಶಿಪ್ (2019) - ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ ಪದಕ

Story first published: Tuesday, September 3, 2024, 7:01 [IST]
Other articles published on Sep 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+