
ಭಿನ್ನ ಚಳಿಗಾಲದ ಕ್ರೀಡೆಯ ಚಾಂಪಿಯನ್ ಎಸ್ಟರ್ ಲಡೆಕಾ ಬೀಜೀಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಮೂರನೇ ಚಿನ್ನದ ಪದಕ ಗೆದ್ದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಫೆಬ್ರವರಿ 4ರಿಂದ ಪ್ರಾರಂಭಗೊಂಡ ಚೀನಾದ ಬೀಜಿಂಗ್ ಒಲಿಂಪಿಕ್ ಸ್ಪರ್ಧೆಯಲ್ಲಿ ಈಗಾಗಲೇ ಎಸ್ತರ್ ಲಡೆಕಾ ಮೂರನೇ ಪದಕ ತನ್ನದಾಗಿಸಿಕೊಂಡಿದ್ದಾರೆ.
26 ವರ್ಷದ ಜೆಕ್ ಮೂಲದ ಸ್ಪರ್ಧಿ ಲಡೆಕಾ ಸ್ಕೀಯಿಂಗ್ ಮತ್ತು ಸ್ನೋಬೋರ್ಡಿಂಗ್ ಎರಡರಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಎರಡು ವಿಭಿನ್ನ ಕ್ರೀಡೆಗಳಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆಯಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಎಸ್ತರ್ ದಕ್ಷಿಣ ಕೊರಿಯಾದ ಪಿಯಾಂಗ್ಚಾಂಗ್‌ನಲ್ಲಿ ನಡೆದ ವಿಂಟರ್ ಒಲಿಂಪಿಕ್ಸ್‌ನಲ್ಲಿ ಸ್ನೋಬೋರ್ಡ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ಆ ವರ್ಷ ಸ್ಕೀಯಿಂಗ್‌ನಲ್ಲೂ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ರು.
ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಎಸ್ತರ್ ಅವರಿಗೆ ಆಸ್ಟ್ರೀಯಾದ ಡ್ಯಾನಿಯೆಲಾ ಉಲ್‌ಬಿಂಗ್ ಅವರಿಂದ ತೀವ್ರ ಸ್ಪರ್ಧೆ ಎದುರಾಯಿತು. ಜೆಂಟಿಂಗ್ ಸ್ನೋ ಪಾರ್ಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಲೊವೇನಿಯಾದ ಗ್ಲೋರಿಯಾ ಕೊಟ್ನಿಕ್ ಕಂಚಿನ ಪದಕ ಗೆದ್ದುಕೊಂಡ್ರು. ತಮಾಷೆಯ ವಿಷಯ ಏನಂದ್ರೆ ಲೆಡೆಕಾ ಚಾಂಪಿಯನ್ ಆಗಿದ್ದರೂ ಸಹ ತಕ್ಷಣಕ್ಕೆ ಅವರಿಗೆ ಅದರ ಬಗ್ಗೆ ತಿಳಿದಿರಲಿಲ್ಲ. ಆದ್ರೆ ಕೊಂಚ ಸಮಯದ ಬಳಿಕ ತಾನು ಚಿನ್ನದ ಪದಕ ಗೆದ್ದವಳು ಎಂದು ತಿಳಿದಿದ್ದೇ ತಡ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ.
'' ಪ್ರತಿ ಬಾರಿಯೂ ಉತ್ತಮ ಪ್ರದರ್ಶನ ತೋರಲು ಪ್ರಯತ್ನಿಸುತ್ತಿದೆ. ಪ್ರತಿ ಓಟದ ನಂತರ ಮುಂದಿನ ಬಾರಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಮನಸ್ಸು ತುಡಿಯುತ್ತಿತ್ತು. ಇದರಿಂದಾಗಿ ಇಷ್ಟು ಪದಕ ಗೆಲ್ಲಲು ಸಾಧ್ಯವಾಯಿತು'' ಎಂದು ಎಸ್ತರ್ ಹೇಳಿದ್ದಾರೆ.
ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್‌ನಲ್ಲೂ ಎಸ್ತರ್ ಲಡೆಕಾ ಎರಡು ವಿಭಾಗದ ಕ್ರೀಡೆಯಲ್ಲಿ ಸ್ಪರ್ಧಿಸಿದ್ದಾರೆ. ಫೆಬ್ರವರಿ 11ರಂದು ನಡೆಯಲಿರುವ ಮಹಿಳೆಯರ ಸೂಪರ್ ಜಿ ಸ್ಕೀಯಿಂಗ್‌ನಲ್ಲಿ ಅವರು ಭಾಗಿಯಾಗಲಿದ್ದಾರೆ.
ಸ್ಲೊವೇನಿಯಾದ ಗ್ಲೋರಿಯಾ ಕೊಟ್ನಿಕ್‌ಗೆ ಕಂಚಿನ ಪದಕ
ಆಸ್ಟ್ರಿಯಾದ ಬೆಂಜಮಿನ್ ಕಾರ್ಲ್ ಅವರು ಪುರುಷರ ವಿಭಾಗದ ಫೈನಲ್‌ನಲ್ಲಿ ಸ್ಲೊವೇನಿಯಾದ ಟಿಮ್ ಮಸ್ತ್ನಾಕ್ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಫೈನಲ್‌ನಲ್ಲಿ ಸ್ಲೋವೇನಿಯಾದ ಗ್ಲೋರಿಯಾ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
"10 ವರ್ಷದ ಮಗುವಾಗಿದ್ದಾಗ ನಾನು ವಿಶ್ವ ಚಾಂಪಿಯನ್ ಆಗುತ್ತೇನೆ ಎಂದು ಬರೆದಿದ್ದೇನೆ, ನಾನು ವಿಶ್ವದ ಅತ್ಯಂತ ವೇಗದ ರೇಸರ್ ಆಗುತ್ತೇನೆ ಮತ್ತು ನಾನು ಒಲಿಂಪಿಕ್ ಚಾಂಪಿಯನ್ ಆಗುತ್ತೇನೆ" ಎಂದು ಕಾರ್ಲ್ ಹೇಳಿದರು.
ಇದೇ ವೇಳೆ 2014ರ ಸೋಚಿ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕ ವಿಜೇತ ಅಮೆರಿಕ ಮೂಲದ ರಷ್ಯಾದ ವಿಕ್ ವೈಲ್ಡ್ ಪುರುಷರ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದರು.