ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುತ್ತಿರುವ ಭಾರತದ ಏಕೈಕ ಅಥ್ಲೀಟ್ ಆರಿಫ್ ಖಾನ್

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುತ್ತಿರುವ ಭಾರತದ ಏಕೈಕ ಅಥ್ಲೀಟ್ ಆಗಿರುವ ಸ್ಕೀಯಿಂಗ್ ಪಟು ಆರಿಫ್ ಖಾನ್ ನೇತೃತ್ವದ ಭಾರತ ತಂಡವು ಈಗಾಗಲೇ ಬೀಜಿಂಗ್ ತಲುಪಿದೆ. ಶುಕ್ರವಾರದಿಂದ ಆರಂಭಗೊಳ್ಳಲಿರುವ ಕ್ರೀಡಾಕೂಟದಲ್ಲಿ ಆರಿಫ್ ಖಾನ್ ನೇತೃತ್ವದ ಭಾರತ ಭಾಗವಹಿಸಲಿದೆ.
ಸ್ಕೀಯಿಂಗ್ ಕ್ರೀಡೆಯ ಎರಡು ವಿಭಾಗದಲ್ಲಿ ಸ್ಪರ್ಧಿಸಲಿರುವ ಆರಿಫ್ ಖಾನ್ ಅಗ್ರ 30ರೊಳಗೆ ಸ್ಥಾನ ಗಿಟ್ಟಿಸುವ ವಿಶ್ವಾಸ ಹೊಂದಿದ್ದಾರೆ. ಆರಿಫ್ ಖಾನ್‌ರೊಂದಿಗೆ ಚೆಫ್ ಡಿ ಮಿಶನ್ ಹರ್ಜಿಂದರ್ ಸಿಂಗ್ ಮತ್ತು ಇತರೆ ನೆರವು ಸಿಬ್ಬಂದಿ ಕೂಡ ತೆರಳಿದ್ದಾರೆ.
ಫೆಬ್ರವರಿ 4ರಿಂದ ಪ್ರಾರಂಭಗೊಳ್ಳಲಿರುವ ಸ್ಪರ್ಧೆಯು ಫೆಬ್ರವರಿ 20ರವರೆಗೆ ನಡೆಯಲಿದೆ. ಭಾರತ ತಂಡವು ಸ್ಪರ್ಧೆಯ ಮುಗಿಸಿ ಫೆ. 19ರಂದೇ ತವರಿಗೆ ಮರಳಲಿದೆ. ಇದರ ನಡುವೆ ಮೊಹಮ್ಮದ್ ಆರಿಫ್ ಖಾನ್ ಅವರು ಚಳಿಗಾಲದ ಕ್ರೀಡಾಕೂಟದಲ್ಲಿ ಸ್ಥಾನ ಗಳಿಸಿದ ದೇಶದ ಮೊದಲ ಅಥ್ಲೀಟ್ ಆಗಿದ್ದಾರೆ.
ಯಾರಿದು ಮೊಹಮ್ಮದ್ ಆರಿಫ್ ಖಾನ್?
ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನ ಆರಿಫ್ ಅವರು ಆಲ್ಪೈನ್ ಸ್ಕೀಯರ್ ಆಗಿದ್ದು, ಮಾಂಟೆನೆಗ್ರೊದಲ್ಲಿ ಅವರ ತಂದೆ ಯಾಸಿನ್ ಖಾನ್ ಗುಲ್ಮಾರ್ಗ್‌ನಲ್ಲಿ ಸ್ಕೀ ಉಪಕರಣಗಳ ಅಂಗಡಿಯನ್ನು ಹೊಂದಿದ್ದಾರೆ. ಇಲ್ಲಿಂದಲೇ ಆರಿಫ್‌ಗೆ ಸ್ಕೀಯಿಂಗ್ ಕ್ರೀಡೆಯ ಮೇಲಿನ ಪ್ರೀತಿ ಬೆಳೆಯಿತು.
ತನ್ನ ನಾಲ್ಕನೇ ವಯಸ್ಸಿನಲ್ಲೇ ಸ್ಕೀಯಿಂಗ್ ಆಡಲು ಪ್ರಯತ್ನಿಸಿದ ಆರಿಫ್ 10 ವರ್ಷದವರಾಗಿದ್ದಾಗ ಸ್ಪರ್ಧಾತ್ಮಕ ಆಟ ಪ್ರವೇಶಿಸಿದರು. ಕೇವಲ 12ನೇ ವಯಸ್ಸಿನಲ್ಲೇ ಈತ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನ ಗೆದ್ದರು.
ಇದಾದ ಬಳಿಕ 16ನೇ ವಯಸ್ಸಿನಲ್ಲೇ ಜಪಾನ್‌ನ ಯೊಮಾಸ್‌ನಲ್ಲಿ ನಡೆದ ಜೂನಿಯರ್ ಇಂಟರ್‌ನ್ಯಾಷನಲ್ ಸ್ಕೀ ಫೆಡರೇಶರನ್ ಇವೆಂಟ್‌ನಲ್ಲಿ ಭಾರತದ ಪರ ಚೊಚ್ಚಲ ಪ್ರವೇಶ ಮಾಡಿದ ಈತ 23ನೇ ಸ್ಥಾನ ಗಳಿಸಿದರು. 2011ರಲ್ಲಿ ಎರಡು ಚಿನ್ನದ ಪದಕ ಸಹ ಗೆದ್ದರು.
ಆರಿಫ್ ನಂತರ ರಾಷ್ಟ್ರೀಯ ಓಪನ್ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಸ್ಕೀ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು. ಇಲ್ಲಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸ್ಕೀಯರ್ ಆಗಿ ಹೊರಹೊಮ್ಮಿದರು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆಗಿದ್ದರು. ಈಗ ವಿಶ್ವದ ಅತಿದೊಡ್ಡ ಕ್ರೀಡಾ ವೇದಿಕೆಯಾದ ಒಲಿಂಪಿಕ್ಸ್ ಬಗ್ಗೆ ಆರಿಫ್‌ನಿಂದ ಹೆಚ್ಚಿನ ನಿರೀಕ್ಷೆಗಳಿವೆ.
ಸದ್ಯ 31 ವರ್ಷದ ಆರಿಫ್, ಈ ಹಿಂದೆ ಸಪೊರೊದಲ್ಲಿ ನಡೆದ 2017ರ ಏಷ್ಯನ್ ಚಳಿಗಾಲದ ಗೇಮ್ಸ್‌ನಲ್ಲಿ ಕೂಡ ಸ್ಪರ್ಧಿಸಿದ್ದರು. ಈ ಹಿಂದೆ ಮೂರು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿದ್ದರೂ, ಯಾವುದೇ ವಿಶ್ವ ಚಾಂಪಿಯನ್‌ಶಿಪ್ ಈವೆಂಟ್‌ನಲ್ಲಿ ಅವರು ಫೈನಲ್‌ಗೆ ಅರ್ಹತೆ ಗಳಿಸಿದ್ದು ಇದೇ ಮೊದಲು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications