Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಟರ್ ಒಲಿಂಪಿಕ್ಸ್: ಕ್ರೀಡಾಕೂಟದಲ್ಲಿ ಭಾಗವಹಿಸಿದ ಪುಟಾಣಿಗಳು? ವಿಡಿಯೋ ವೈರಲ್

Winter Olympics: Babies practising video goes viral on internet

ಸದ್ಯ ಕ್ರೀಡಾ ಜಗತ್ತಿನಲ್ಲಿ ಚೀನಾದ ಬೀಜಿಂಗ್ ನಗರದಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆರಂಭಕ್ಕೂ ಮುನ್ನವೇ ಸಾಕಷ್ಟು ವಿವಾದ ಹಾಗೂ ಟೀಕೆಗಳಿಗೆ ಗುರಿಯಾಗಿದ್ದ ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾದ ನಂತರವೂ ಸಹ ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕುತ್ತಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿರುವ ವಿವಿಧ ದೇಶಗಳ ಕ್ರೀಡಾಪಟುಗಳಿಗೆ ಸರಿಯಾದ ಕೊಠಡಿ ವ್ಯವಸ್ಥೆ, ಊಟದ ವ್ಯವಸ್ಥೆ ಮತ್ತು ಬಯೋ ಬಬಲ್ ವ್ಯವಸ್ಥೆ ಇಲ್ಲ ಎಂಬ ದೊಡ್ಡ ದೊಡ್ಡ ಆರೋಪಗಳು ಕೇಳಿಬರುತ್ತಿದ್ದು, ಕ್ರೀಡಾಕೂಟದ ಆಯೋಜಕರು ಮಾತ್ರ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಇನ್ನು ಕ್ರೀಡಾಕೂಟದ ಕುರಿತಾಗಿ ಸಾಕಷ್ಟು ಟೀಕೆಗಳು ಮತ್ತು ವಿರೋಧಗಳು ಒಂದೆಡೆ ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಆಯೋಜಿಸಲಾಗಿರುವ ಪಂದ್ಯಗಳು ಯಾವುದೇ ಅಡ್ಡಿಗಳಿಲ್ಲದೆ ಸರಾಗವಾಗಿ ನಡೆಯುತ್ತಿವೆ. ಇದರ ನಡುವೆಯೇ ವಿಂಟರ್ ಒಲಿಂಪಿಕ್ಸ್ ತನ್ನ ಪಂದ್ಯಗಳ ಕುರಿತಾದ ಪ್ರಚಾರದ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದರ ಮೂಲಕ ಸದ್ದು ಮಾಡುತ್ತಿದೆ.

ಹೀಗೆ ವಿಂಟರ್ ಒಲಿಂಪಿಕ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಶೇಷ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಪುಟಾಣಿಗಳು ಕೂಡ ಹಿಮದ ನಡುವೆ ವಿವಿಧ ಆಟಗಳನ್ನು ಆಡುತ್ತಿರುವ ತುಣುಕುಗಳಿವೆ. ವಿವಿಧ ಟೂರ್ನಿಗಳ ವಿಡಿಯೋಗಳನ್ನು ಸೇರಿಸಿ 3 ನಿಮಿಷಗಳ ವಿಶೇಷ ಕ್ಲಿಪ್ ಮಾಡಿರುವ ವಿಂಟರ್ ಒಲಿಂಪಿಕ್ಸ್ ಪ್ರಚಾರದ ದೃಷ್ಟಿಯಿಂದ ಈ ರೀತಿಯ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದೆ. ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಕಂದಮ್ಮಗಳಿಗೆ ಅವಕಾಶ ಇಲ್ಲದೇ ಇದ್ದರೂ ಸಹ ಈ ಪುಟ್ಟ ಮಕ್ಕಳು ಆಟಗಳಲ್ಲಿ ಹೇಗೆ ಭಾಗವಹಿಸಿದವು ಎಂದು ಕೆಲ ನೆಟ್ಟಿಗರು ಆಶ್ಚರ್ಯಕ್ಕೊಳಗಾದರು. ಆದರೆ ಸದ್ಯ ನಡೆಯುತ್ತಿರುವ ವಿಂಟರ್ ಒಲಿಂಪಿಕ್ಸ್‌ನ ಕೇವಲ ಒಂದೇ ಒಂದು ದೃಶ್ಯದ ತುಣುಕು ಈ ವಿಡಿಯೋದಲ್ಲಿದ್ದು ಉಳಿದ ಎಲ್ಲಾ ತುಣುಕುಗಳು ಕೂಡ ಬೇರೆ ಬೇರೆ ವಿಂಟರ್ ಆಟಗಳ ದೃಶ್ಯಗಳಾಗಿವೆ.

ಸದ್ಯ ಈ ವಿಡಿಯೋವನ್ನು ಕ್ರೀಡಾಪ್ರೇಮಿಗಳ ಚಿತ್ತವನ್ನು ತನ್ನತ್ತ ಸೆಳೆಯಲು ವಿಂಟರ್ ಒಲಿಂಪಿಕ್ಸ್ ಟ್ವೀಟ್ ಮಾಡಿದ್ದು, ಈ ಉಪಾಯದಲ್ಲಿ ಯಶಸ್ಸನ್ನು ಕೂಡ ಸಾಧಿಸಿದೆ. ವಿಡಿಯೋದಲ್ಲಿ ಪುಟ್ಟ ಮಕ್ಕಳು ಹಿಮದ ನಡುವೆ ವಿವಿಧ ಆಟಗಳಲ್ಲಿ ಅಳುತ್ತಾ, ನಗುತ್ತಾ ಭಾಗವಹಿಸಿರುವ ದೃಶ್ಯಗಳು ಕಾಣಸಿಗುತ್ತಿವೆ.

Story first published: Thursday, February 10, 2022, 9:58 [IST]
Other articles published on Feb 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+