ವಿಂಟರ್ ಒಲಿಂಪಿಕ್ಸ್: ಕೆಟ್ಟ ಆಹಾರ, ಅವ್ಯವಸ್ಥೆ ಕಂಡು ಕಣ್ಣೀರಿಟ್ಟ ಕ್ರೀಡಾಪಟು!

ಫೆಬ್ರವರಿ 4ರಿಂದ ಆರಂಭವಾಗಿರುವ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚೀನಾದ ಬೀಜಿಂಗ್ ನಗರದಲ್ಲಿ ಚಾಲನೆ ದೊರೆತಿದೆ. ಇನ್ನು ಬೀಜಿಂಗ್ ನಗರದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ವೈರಸ್ ಹರಡುವ ಭೀತಿಯಲ್ಲಿಯೇ ಕ್ರೀಡಾ ಕೂಟವನ್ನು ಆಯೋಜನೆ ಮಾಡಲಾಗಿದೆ.
ಹೀಗೆ ಬೀಜಿಂಗ್ ನಗರದಲ್ಲಿ ಆರಂಭವಾಗಿರುವ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೂ ಮುನ್ನವೇ ಸಾಕಷ್ಟು ಟೀಕೆ ಹಾಗೂ ವಿವಾದಗಳಿಗೆ ಕಾರಣವಾಗಿತ್ತು. ವಿವಿಧ ದೇಶಗಳ ಭಾಗವಹಿಸುವಿಕೆಯ ವಿಚಾರವಾಗಿ ವಿವಾದಕ್ಕೆ ಕಾರಣವಾಗಿದ್ದ ಈ ಚಳಿಗಾಲದ ಒಲಿಂಪಿಕ್ಸ್ ಇದೀಗ ಆರಂಭವಾದ ನಂತರವೂ ಕೂಡ ಸಾಕಷ್ಟು ವಿವಾದಗಳನ್ನು ಸೃಷ್ಟಿಸುತ್ತಿದೆ. ಹೌದು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ವಿವಿಧ ದೇಶಗಳಿಂದ ಬೀಜಿಂಗ್ ನಗರಕ್ಕೆ ಆಗಮಿಸಿರುವ ಹಲವಾರು ಕ್ರೀಡಾಪಟುಗಳಿಗೆ ಪ್ರತ್ಯೇಕ ಕೋಣೆಗಳನ್ನು ನೀಡಿ ಬಯೋ ಬಬಲ್ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಆಯೋಜಕರು ಉತ್ತಮ ಆಹಾರದ ಸರಬರಾಜನ್ನು ಮಾಡುತ್ತಿಲ್ಲ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.
ರಷ್ಯಾದ ವಲೇರಿಯಾ ವಾಟ್ನೆಟ್ಸೊವಾ ಎಂಬ ಕ್ರೀಡಾಪಟು ಸದ್ಯ ಬೀಜಿಂಗ್ ನಗರದಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ತಾನು ಬಯೋ ಬಬಲ್ ವ್ಯವಸ್ಥೆಯಲ್ಲಿ ಉಳಿದುಕೊಂಡಿರುವ ಕೊಠಡಿ ಹಾಗೂ ತನಗೆ ಸಿಗುತ್ತಿರುವ ಆಹಾರದ ವಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿದ್ದಾಳೆ. ತೀರಾ ಸಣ್ಣ ಜಾಗವಿರುವ ಕೊಠಡಿಗಳನ್ನು ಕ್ರೀಡಾಪಟುಗಳಿಗೆ ನೀಡಲಾಗಿದ್ದು, ಕ್ರೀಡಾಕೂಟಕ್ಕಾಗಿ ಅಗತ್ಯವಿರುವ ವ್ಯಾಯಾಮ ಮಾಡಲು ಕೂಡ ಜಾಗ ಸಾಕಾಗುತ್ತಿಲ್ಲ, ಚಿಕ್ಕ ಕೊಠಡಿಯಲ್ಲಿ ವ್ಯಾಯಾಮ ಮಾಡಲು ಪ್ರಯತ್ನಿಸಿ ಕೈಕಾಲು ನೋವಾಗಿದೆ ಎಂದು ದೊಡ್ಡ ಮಟ್ಟದ ಆರೋಪ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಮುಂದಿನ ಮೂರ್ನಾಲ್ಕು ದಿನಗಳಿಗೆ ಸಾಕಾಗುವಷ್ಟು ಆಹಾರವನ್ನು ಮೊದಲೇ ಒದಗಿಸುತ್ತಿರುವುದರಿಂದ ತಾಜಾ ಆಹಾರ ಸಿಗುತ್ತಿಲ್ಲ ಎಂದು ಇದೇ ವೇಳೆ ಆಕ್ರೋಶ ಹೊರಹಾಕಿದ್ದಾಳೆ ಹಾಗೂ ರಾತ್ರಿಯಿಡೀ ಕಣ್ಣೀರು ಹಾಕಿದ್ದೇನೆ ಎಂದು ಬರೆದುಕೊಂಡಿದ್ದಾಳೆ.
ಪೋಲಿಷ್ ಸ್ಪೀಡ್ ಸ್ಕೇಟರ್ ನಟಾಲಿಯಾ ಮಾಲಿಸ್ಜೆವ್ಸ್ಕಾ ವಿಂಟರ್ ಒಲಿಂಪಿಕ್ಸ್ ಅಧಿಕಾರಿಗಳ ದುರ್ವರ್ತನೆಯನ್ನು ಬಿಚ್ಚಿಟ್ಟಿದ್ದಾರೆ. ಕೊವಿಕ್ ಪರೀಕ್ಷೆ ನಡೆಸುವ ವೇಳೆ ಪದೇ ಪದೇ ತನ್ನ ಕೊಠಡಿಯನ್ನು ಬದಲಾಯಿಸಿದ್ದು ಮಾತ್ರವಲ್ಲದೆ ತನಗೆ ಕೊರೊನಾ ಸೋಂಕು ಇಲ್ಲ ಎಂಬುದು ಪರೀಕ್ಷೆಯಲ್ಲಿ ತಿಳಿದ ಕೂಡಲೇ ಬೆಳಗಿನ ಜಾವ 3 ಗಂಟೆಗೆ ತನ್ನನ್ನು ಹಾಸಿಗೆಯಿಂದ ಎಳೆದು ಒಲಿಂಪಿಕ್ಸ್ ಗ್ರಾಮಕ್ಕೆ ಕೊಂಡೊಯ್ದರು ಎಂದು ಆರೋಪಿಸಿದ್ದಾರೆ. ಹೀಗೆ ಸರಿಯಾದ ನಿದ್ರೆ, ಊಟದ ವ್ಯವಸ್ಥೆ ಮತ್ತು ಕೊಠಡಿ ವ್ಯವಸ್ಥೆ ಇಲ್ಲದೇ ಕ್ರೀಡಾಪಟುಗಳಿಗೆ ಹಿಂಸಾತ್ಮಕ ಪರಿಸ್ಥಿತಿ ಉಂಟಾಗಿದೆ ಎಂದು ಹಲವಾರು ಕ್ರೀಡಾಪಟುಗಳು ಆರೋಪ ಮಾಡುತ್ತಿದ್ದಾರೆ.
ಇನ್ನು ಬೀಜಿಂಗ್‌ನಲ್ಲಿರುವ 'ಬರ್ಡ್ಸ್ ನೆಸ್ಟ್' ಎಂದು ಖ್ಯಾತವಾಗಿರುವ ನ್ಯಾಶನಲ್ ಸ್ಟೇಡಿಯಂನಲ್ಲಿ ಈ ವಿಂಟರ್ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಿತು. ಈ ಕ್ರೀಡಾಂಗಣ 2008ರ ಬೋಹಿಂಗ್ ಒಲಿಂಪಿಕ್ಸ್‌ನ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಕ್ಕೆ ಸಾಕ್ಷಿಯಾಗಿತ್ತು. ಆದರೆ ಈ ಬಾರಿ ಈ ಕ್ರೀಡಾಂಗಣದಲ್ಲಿ ಯಾವುದೇ ಸ್ಪರ್ಧೆಗಳು ಕೂಡ ಈ ಕ್ರೀಡಾಂಗಣದಲ್ಲ ನಡೆಯುವುದಿಲ್ಲ. ಹಾಗೂ ಈ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಓರ್ವ ಕ್ರೀಡಾಪಟು ಮಾತ್ರವೇ ಭಾಗವಹಿಸುತ್ತಿದ್ದಾರೆ ಎಂಬುದು ಗಮನಾರ್ಹ. 31ರ ಹರೆಯದ ಕಾಶ್ಮೀರ ಮೂಲದ ಆರಿಫ್ ಖಾನ್ ಈ ಚಳಿಗಾದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ಕ್ರೀಡಾಪಟುವಾಗಿದ್ದಾರೆ. ಈ ಮೂಲಕ ಕಾಶ್ಮೀರ ಹಾಗೂ ಭಾರತದ ಹೆಮ್ಮೆಗೆ ಕಾರಣವಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications