ಹಾಲಿ 100 ಮೀಟರ್ ವಿಶ್ವ ಚಾಂಪಿಯನ್ ಕ್ರಿಶ್ಚಿಯನ್ ಕೋಲ್‌ಮನ್ ಅಮಾನತು

ಅಮೆರಿಕಾದ ಆಥ್ಲಿಟ್ 100 ಮೀಟರ್ ಓಟದ ಹಾಲಿ ಚಾಂಪಿಯನ್ ಕ್ರಿಶ್ವಿಯನ್ ಕೋಲ್‌ಮನ್ ಅವರನ್ನು ಅಮಾನತುಗೊಳಿಸಲಾಗಿದೆ. ಉದ್ದೀಪನ ಪರೀಕ್ಷೆಯಿಂದ ತಪ್ಪಿಸಿಕೊಂಡ ಕಾರಣಕ್ಕೆ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಕ್ರಿಶ್ಚಿಯನ್ ಕೋಲ್‌ಮನ್ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಈ ಪ್ರಕರಣದ ವಿಚಾರಣೆಗಾಗಿ ಎರಡು ವರ್ಷಗಳವರೆಗೆ ಅಮಾನತುಗೊಳ್ಳುವ ಆತಂಕವೂ ಕ್ರಿಶ್ಚಿಯನ್ ಕೋಲ್‌ಮನ್ ಅವರಿಗೆ ಇದೆ. ಹೀಗಾಗಿ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ಅನ್ನು ತಪ್ಪಿಸಿಕೊಳ್ಳುವ ಆತಂಕವನ್ನು ಎದುರಿಸುತ್ತಿದ್ದಾರೆ.
ಭಾರತ-ಶ್ರೀಲಂಕಾ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್- ಲಂಕಾ ಮಾಜಿ ಕ್ರೀಡಾ ಸಚಿವ ಆರೋಪ
ಟೋಕಿಯೊ ಒಲಿಂಪಿಕ್ಸ್ 100 ಮೀಟರ್ ಓಟದ ಸ್ವರ್ಣ ಪದಕ ಆಕಾಂಕ್ಷಿಯಾಗಿರುವ ಅಮೆರಿಕದ ಅಥ್ಲೀಟ್ ಕೋಲ್ವುನ್ ಕಳೆದ 12 ತಿಂಗಳಲ್ಲಿ 3 ಬಾರಿ ಉದ್ದೀಪನ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವ ಅಥ್ಲೆಟಿಕ್ಸ್ನ ಅಥ್ಲೆಟಿಕ್ ಇಂಟೆಗ್ರಿಟಿ ಯುನಿಟ್ನಿಂದ (ಎಐಯು) ಅಮಾನತು ಶಿಕ್ಷೆ ಎದುರಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಸ್ಪರ್ಧೆ ಹೊರತಾದ ಡೋಪಿಂಗ್ ಪರೀಕ್ಷೆಗಾಗಿ ಕೋಲ್ವುನ್ ಮನೆಗೆ ಎಐಯು ಅಧಿಕಾರಿಗಳು ತೆರಳಿದ್ದರು. ಆದರೆ ಆ ಸಮಯದಲ್ಲಿ ಸಮೀಪದ ಮಾಲ್ಗೆ ಕ್ರಿಸ್ಮಸ್ ಶಾಪಿಂಗ್ಗಾಗಿ ತೆರಳಿದ್ದ ಕಾರಣ ಕೋಲ್ವುನ್ ಮನೆಯಲ್ಲಿರಲಿಲ್ಲ. 24 ವರ್ಷದ ಕೋಲ್ವುನ್ ಸರಣಿ ಟ್ವೀಟ್ಗಳ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ.
ಒಂದು ಗಂಟೆ ಕಾಲ ಕೋಲ್ವುನ್ ಮನೆ ಎದುರಿದ್ದ ಎಐಯು ಅಧಿಕಾರಿಗಳು ಪ್ರತಿ 10 ನಿಮಿಷಕ್ಕೊಮ್ಮೆ ಕಾಲಿಂಗ್ ಬೆಲ್ ಒತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಆ ಸಮಯದಲ್ಲಿ ತಮಗೆ ಕರೆ ಯಾಕೆ ಮಾಡಲಿಲ್ಲ ಎಂದು ಕೋಲ್ವುನ್ ಪ್ರಶ್ನಿಸಿದ್ದಾರೆ. ಅವರು ಇದಕ್ಕೆ ಮುನ್ನ 2019ರ ಜನವರಿ 16 ಮತ್ತು ಏಪ್ರಿಲ್ 26ರಂದು ಡೋಪಿಂಗ್ ಟೆಸ್ಟ್ ತಪ್ಪಿಸಿಕೊಂಡಿದ್ದರು. ಆದರೆ ತಾನೆಂದೂ ನಿರ್ವಹಣೆ ಸುಧಾರಿಸಲು ಉದ್ದೀಪನ ಮದ್ದು ಸೇವಿಸಿಲ್ಲ ಎಂದು ಕೋಲ್ವುನ್ ಸ್ಪಷ್ಟಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications