ನಮ್ಮನ್ನು ಅಂಡರ್‌ಡಾಗ್ಸ್ ಎಂದು ಕರೆದರೂ ನಾವು ಅಸ್ತಿತ್ವದಲ್ಲಿದ್ದೇವೆ: ಪದಕದ ಭರವಸೆ ಮೂಡಿಸಿದ ರಿಲೇ ತಂಡ
ಹಂಗೇರಿಯ ಬುಡಪೆಸ್ಟ್‌ನಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾರತದ 4*400 ರಿಲೇ ತಂಡ ತಮ್ಮ ಹೀಟ್ ವಿಭಾಗದಲ್ಲಿ ಭಾರತ ಎರಡನೇ ಸ್ಥಾನಿಯಾಗಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆಗೆ ಹತ್ತಿರವಾಗಿದೆ. ಅಲ್ಲದೆ ಭಾರತ ರಿಲೇ ತಂಡ ಈ ಸಂದರ್ಭದಲ್ಲಿ ಎಷ್ಯಾದಲ್ಲಿಯೇ ಹೊಸ ದಾಖಲೆಯೊಂದನ್ನು ಬರೆದಿದೆ.
ಇನ್ನು ಈ ಸಂದರ್ಭದಲ್ಲಿ ರಿಲೇ ತಂಡದ ಸದಸ್ಯ ಅಮೋಜ್ ಜೇಕಬ್ ತಮಡದ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮನ್ನು ಅಂಡರ್‌ಡಾಗ್ಸ್ ಎಂದು ಪರಿಗಣಿಸಿದ್ದಕ್ಕೆ ಬೇಸರವನ್ನು ಕೂಡ ಕೂಡ ಹೊರಹಾಕಿದ್ದಾರೆ. ಸ್ಪೋರ್ಟ್‌ಸ್ಟಾರ್‌ನೊಂದಿಗೆ ಮಾತನಾಡಿದ ಜಾಕೋಬ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಮುಂಚಿತವಾಗಿ ಯಾರೂ ತಮ್ಮತ್ತ ಗಮನ ಹರಿಸದಿರುವುದು ಮತ್ತು ತಮ್ಮನ್ನು ದುರ್ಬಲರು ಎಂದು ಪರಿಗಣಿಸುವುದು ಒಳ್ಳೆಯದೇ ಆಯಿತು ಎಂದಿದ್ದಾರೆ. ಅಲ್ಲದೆ ಭಾನುವಾರ ಪದಕದ ಮೇಲೆ ಚಿತ್ತ ನೆಟ್ಟಿರುವುದಾಗಿಯೂ ಹೇಳಿಕೊಂಡಿದ್ದಾರೆ.

"ಯಾರೂ ನಮ್ಮತ್ತ ಗಮನ ಹರಿಸದಿರುವುದು ಒಳ್ಳೆಯದು. ನೀವು ಬೇಕಾದರೆ ನಮ್ಮನ್ನು ಅಂಡರ್‌ಡಾಗ್ ಎಂದು ಕರೆಯಿರಿ. ಆದರೆ ನಾವು ಇನ್ನು ಕೂಡ ಅಸ್ತಿತ್ವದಲ್ಲಿದ್ದೇವೆ. ಇಂದು ನಾವು 2.59 ಅವಧಿಯಲ್ಲಿ ಓಟ ಮುಗಿಸಿದ್ದೇವೆ. ನಾಳೆ ನಾವು 2.58 ರನ್ ಮಾಡುತ್ತೇವೆ. ಯಾರಿಗೆ ಗೊತ್ತು ಬಹುಶಃ ನಾವು ಪದಕವನ್ನೂ ಗೆಲ್ಲಬಹುದು" ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಇನ್ನು ಶನಿವಾರ ನಡೆದ ಸ್ಪರ್ಧೆಯ ಬಳಿಕ ರಿಲೇ ತಂಡದ ಮತ್ತೋರ್ವ ಸದಸ್ಯ ರಾಜೇಶ್ ರಮೇಶ್ ಅವರನ್ನು ವೀಲ್‌ಚೇರ್‌ನಲ್ಲಿ ಕರೆದುಕೊಂಡು ಹೋಗಬೇಕಾಯಿತು. ಈ ಬಗ್ಗೆ ಮಾತನಾಡಿದ ಜಾಕೋಬ್ ತನ್ನ ಸಹ ಆಟಗಾರ ರಾಜೇಶ್ ರಮೇಶ್ ಫೈನಲ್ ಹಂತಕ್ಕೆ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎನ್ನುವ ವಿಶ್ವಾಸ ಮೂಡಿಸಿದ್ದಾರೆ. ಅಲ್ಲದೆ ಭಾನುವಾರ ಇನ್ನೂ ವೇಗವಾಗಿ ಓಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸ್ಪರ್ಧೆಯಲ್ಲಿ ಭಾರತ ತಂಡದ ಪರವಾಗಿ ಮುಹಮ್ಮದ್ ಅನಾಸ್ ಯಾಹಿಯಾ ಅವರು ಓಟ ಆರಂಭಿಸಿದರು ಮೊದಲ ರನ್‌ನಲ್ಲಿ ಆರನೇ ಸ್ಥಾನದಲ್ಲಿತ್ತು ಭಾರತ. ಆದರೆ ನಂತರ ಅಮೋಜ್ ಜೇಕಬ್ ಅಮೋಘ ಓಟದೊಂದಿಗೆ ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡಿತು. ನಂತರ ಮುಹಮ್ಮದ್ ಅಜ್ಮಲ್ ವರಿಯತ್ತೋಡಿ ಮತ್ತು ರಾಜೇಶ್ ರಮೇಶ್ ಈ ಅದ್ಭುತ ಮುನ್ನಡೆಯನ್ನು ಉಳಿಸಿಕೊಂಡಿದ್ದಲ್ಲದೆ 2:59.05 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಏಷ್ಯನ್ ದಾಖಲೆಯನ್ನು ಧ್ವಂಸಗೊಳಿಸಿದರು. ಇದಕ್ಕೂ ಮುನ್ನ ಈ ವಿಭಾಗದಲ್ಲಿ ಏಷ್ಯಾದ ದಾಖಲೆ ಜಪಾನ್ ಹೆಸರಿನಲ್ಲಿದ್ದು 2:59.51 ಸೆಕೆಂಡ್‌ನಲ್ಲಿ ದಾಖಲೆ ಬರೆದಿತ್ತು.
ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ಈವರೆಗೆ ಕೇವಲ ಎರಡು ಪದಕಗಳನ್ನು ಮಾತ್ರವೇ ಗಳಿಸಿದೆ. 2003ರಲ್ಲಿ ಪ್ಯಾರಿಸ್‌ನಲ್ಲಿ ಈ ಕ್ರೀಡಾಕೂಟ ನಡೆದಿದ್ದಾಗ ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಭಾರತ ಪದಕವನ್ನು ಗೆದ್ದ ಸಾಧನೆಗೆ ಕಾರಣವಾಗಿದ್ದರು. ಅದಾದ ಬಳಿಕ 2022ರಲ್ಲಿ ಒರೆಗಾನ್‌ನಲ್ಲಿ ನಡೆದಿದ್ದಾಗ ನೀರಜ್ ಚೋಪ್ರ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಭಾನುವಾರ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದ ಕೊನೆಯ ದಿನವಾಗಿದ್ದು ಭಾರತ ಒಂದೆರಡು ಪದಕಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಪುರುಷರ 4*400 ರಿಲೇ ತಂಡ ಫೈನಲ್‌ಗೆ ಪ್ರವೇಶಿಸುವುದರ ಜೊತೆಗೆ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರ ಸೇರಿದಂತೆ ಮೂವರು ಪ್ರಶಸ್ತಿ ಸುತ್ತಿನಲ್ಲಿ ಕಾದಾಟ ನಡೆಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications