India🇮🇳 created history at WCHoregon22 !
— Anurag Thakur (ianuragthakur) July 22, 2022
✅ For the 1st time two Indian Javelin throwers reach the Final at World Championships Neeraj_chopra1 (88.39m)RohitJavelin (80.42m)
✅️ Eldhose Paul becomes the 1st Indian to reach the Men’s Triple Jump Final (16.68m) pic.twitter.com/DJeGy7GCJg
ರೋಹಿತ್ ಯಾದವ್ ಸಾಧನೆ
ರೋಹಿತ್ ಯಾದವ್ ಅರ್ಹತಾ ಸುತ್ತಿನಲ್ಲಿ ತಮ್ಮ ಅತ್ಯುತ್ತಮ ಸಾಧನೆ 80.42.ಮೀ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ 11ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ಗ್ರೆನೆಡಾದ ಆಂಡರ್ಸನ್ ಪೀಟರ್ 89.91 ಮೀಟರ್ ದೂರಕ್ಕೆ ಎಸೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ನೀರಜ್ ಚೋಪ್ರ ಮೊದಲ ಪ್ರಯತ್ನದಲ್ಲಿಯೇ 88.39 ಮೀಟರ್ ದೂರಕ್ಕೆ ಎಸೆಯುವ ಮೂಲಕ ಫೈನಲ್ ಹಂತಕ್ಕೇರಿ ಸಾಧನೆ ಮಾಡಿದ್ದಾರೆ.

ಎಲ್ದೋಸ್ ಐತಿಹಾಸಿಕ ಸಾಧನೆ
ಇನ್ನು ತ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಎಲ್ದೋಸ್ ಪೌಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ಫೈನಲ್ ಹಂತಕ್ಕೇರಿದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಂಡಿದ್ದಾರೆ ಎಲ್ದೋಸ್. ಗ್ರೂಪ್ ಎ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅವರು 6ನೇ ಸ್ಥಾನ ಗಳಿಸುವ ಮೂಲಕ ಫೈನಲ್ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ. ಒಟ್ಟಾರೆಯಾಗಿ ಎಲ್ದೊಸ್ ಪೌಲ್ 12ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಾನುವಾರ ಫೈನಲ್ ಹಂತದ ಸ್ಪರ್ಧೆ ನಡೆಯಲಿದೆ.
IND vs WI: ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಹಿನ್ನಡೆ; ಜಡೇಜಾ, ಕೆಎಲ್ ರಾಹುಲ್ ತಂಡದಿಂದ ಔಟ್!
India🇮🇳 created history at WCHoregon22 !
— Anurag Thakur (ianuragthakur) July 22, 2022
✅ For the 1st time two Indian Javelin throwers reach the Final at World Championships Neeraj_chopra1 (88.39m)RohitJavelin (80.42m)
✅️ Eldhose Paul becomes the 1st Indian to reach the Men’s Triple Jump Final (16.68m) pic.twitter.com/DJeGy7GCJg
ಮೊದಲ ಪ್ರಯತ್ನದಲ್ಲೇ ನೀರಜ್ ಚೋಪ್ರ ಮಿಂಚು
ಯುಎಸ್‌ಎಯಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಎಸೆತದ ಅರ್ಹತಾ ಸುತ್ತು ಹೇವಾರ್ಡ್ ಫೀಲ್ಡ್‌ನಲ್ಲಿ ನಡೆಯಿತು. ಅರ್ಹತಾ ಸುತ್ತಿನ ಗ್ರೂಪ್ ಎ ವಿಭಾಗದಲ್ಲಿ ಕಣಕ್ಕಿಳಿದ ನೀಜ್ ಚೋಪ್ರ ತಮ್ಮ ಮೊದಲ ಪ್ರಯತ್ನದಲ್ಲಿಯೇ 88.39 ಮೀಟರ್‌ನಷ್ಟು ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾದರು. ಫೈನಲ್ ಹಂತಕ್ಕೆ ನೇರವಾಗಿ ಅರ್ಹತೆಯನ್ನು ಪಡೆಯಲು ಇರುವ 83.50 ಮೀಟರ್‌ಗಳ ಗುರಿಗಿಂತ ಬಹಳ ಮುಂದಿರುವ ಕಾರಣ ನೀರಜ್ ಮೊದಲ ಪ್ರಯತ್ನದಲ್ಲಿಯೇ ಫೈನಲ್ ಹಂತಕ್ಕೆ ಅರ್ಹತೆಯನ್ನು ಸಂಪಾದಿಸಿಕೊಂಡರು.

ದಾಖಲೆ ಮೇಲೆ ನೀರಜ್ ಕಣ್ಣು
ನೀರಜ್ ಚೋಪ್ರ ಈ ಬಾರಿಯ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನದ ಪ್ರತಿಸ್ಪರ್ಧಿಗಿಂತ ಸಾಕಷ್ಟು ಅಂತರವನ್ನು ಪಡೆಯುವಲ್ಲಿ ಯಶಸ್ವಿಯಾಗಿರುವ ನೀರಜ್ ಮತ್ತೊಮ್ಮೆ ಐತಿಹಾಸಿಕ ಸಾಧನೆ ಮಾಡಲು ಸಜ್ಜಾಗಿದ್ದಾರೆ. ಭಾರತ ಈ ಪ್ರತಿಷ್ಠಿತ ಕ್ರೀಡಾ ಕೂಟದಲ್ಲಿ ಈವರೆಗೆ ಕೇವಲ ಒಮದು ಬಾರಿ ಮಾತ್ರವೇ ಪದಕ ಗೆಲ್ಲಲು ಯಶಸ್ವಿಯಾಗಿದೆ. 2003ರಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಭಾರತದ ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್‌ನಲ್ಲಿ ಕಂಚಿನ ಪದಕ ಗೆದ್ದಿರುವುದು ಭಾರತ ಈವರೆಗಿನ ಶ್ರೇಷ್ಠ ಸಾಧನೆಯಾಗಿದೆ.


Click it and Unblock the Notifications












