For Quick Alerts
ALLOW NOTIFICATIONS  
For Daily Alerts

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಮಹಿಳಾ ಜಾವೆಲಿನ್ ಸ್ಪರ್ಧೆಯಲ್ಲಿ ಫೈನಲ್‌ಗೇರಿದ ಭಾರತದ ಅನ್ನು ರಾಣಿ

World Athletics Championships:Indian womens javelin thrower Annu Rani reach finals

ಭಾರತದ ಮಹಿಳಾ ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ಅಂತಿಮ ಪ್ರಯತ್ನದಲ್ಲಿ 59.60 ಮೀಟರ್ ದೂರಕಕೆ ಜಾವೆಲಿನ್ ಎಸೆಯುವ ಮೂಲಕ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಇದು ಅವರ ಈ ಆವೃತ್ತಿಯ ವೈಯಕ್ತಿಕ ಅತ್ಯುತ್ತಮ ಸಾಧನೆಯೂ ಹೌದು. ಈ ಮೂಲಕ ಸತತ ಎರಡನೇ ಬಾರಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಪ್ರವೇಶ ಪಡೆದಂತಾಗಿದೆ.

ಮೊದಲ ಪ್ರಯತ್ನದಲ್ಲಿ ಫೌಲ್ ಆದ ಅನ್ನು ರಾಣಿ ಎರಡನೇ ಪ್ರಯತ್ನದಲ್ಲಿ .3 ಮೋಟರ್ ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅಂತಿಮ ಪ್ರಯತ್ನದಲ್ಲಿ 60 ಮೀಟರ್‌ಗಳ ಗುರಿಗೆ 40 ಸೆಂಟಿಮೀಟರ್‌ಗಳಷ್ಟು ಕೊರತೆಯುಂಟಾಗಿದ್ದರೂ ಅದನ್ನು ಪರಿಗಣಿಸಿ ಫೈನಲ್ ಹಂತಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಅನ್ನು ರಾಣಿ ಗ್ರೂಪ್ ಬಿಯ ಅರ್ಹತಾ ಸುತ್ತಿನಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದರು. ಹಾಗಿದ್ದರೂ ಅವರು ಫೈನಲ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು ಎರಡು ಗುಂಪುಗಳಲ್ಲಿ ಒಟ್ಟಾರೆಯಾಗಿ ಅನ್ನು ರಾಣಿ ಅವರನ್ನು 8ನೇ ಅತ್ಯುತ್ತಮ ಸಾಧನೆ ಎನಿಸಿಕೊಂಡಿದೆ. ಆದರೆ 29ರ ಹರೆಯದ ಅನ್ನು ರಾಣಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದು 60 ಮೀಟರ್‌ಗಳ ಗುರಿ ಸಾಧಿಸಲು ಸಾಧ್ಯವಾಗದಿರುವುದು ಬೇಸರ ಮೂಡಿಸಿದೆ.

ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಮೂರನೇ ಬಾರಿಗೆ ಸ್ಪರ್ಧಿಸಿರುವ ಅನ್ನು ರಾಣಿ ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. 2019 ರಲ್ಲಿ ದೋಹಾದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಅವರು 61.12 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಫೈನಲ್‌ನಲ್ಲಿ ಎಂಟನೇ ಸ್ಥಾನ ಗಳಿಸಿದ್ದರು. ಅದಕ್ಕೂ ಹಿಂದೆ 2017 ರಲ್ಲಿ ಲಂಡನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅರ್ಹತಾ ಗುಂಪಿನಲ್ಲಿ 10 ನೇ ಸ್ಥಾನ ಗಳಿಸಿದ ಕಾರಣ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ.

Story first published: Thursday, July 21, 2022, 9:46 [IST]
Other articles published on Jul 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+