Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಸಚಿನ್‌ ಯಾದವ್ ಔಟ್

ವಿಶ್ವ ಚಾಂಪಿಯನ್‌ 2025ರ ಫೈನಲಿಸ್ಟ್‌ ಜಾವಲೀನ್ ಕ್ರೀಡಾಪಟು ಸಚಿನ್ ಯಾದವ್ ಅವರು ಈ ಬಾರಿ ನಡೆಯಲಿರುವ ಕಾಮನ್‌ ವೆಲ್ತ್ ಗೇಮ್ಸ್‌ನಿಂದ ಹೊರ ನಡೆದಿದ್ದಾರೆ. ಇವರು ಮೊಣಕೈ ಗಾಯಕ್ಕೆ ತುತ್ತಾಗಿದ್ದು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿಲ್ಲ. ಅಲ್ಲದೆ ಇವರು ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಇಂಟರ್‌ ಸ್ಟೇಟ್ ಅಥ್ಲೇಟಿಕ್ಸ್‌ ಚಾಂಪಿಯನ್‌ ಶಿಪ್‌ಗೂ ಅಲಭ್ಯರಾಗಿದ್ದಾರೆ.

ನವದೆಹಲಿಯಲ್ಲಿ ನಡೆದ ಇಂಡಿಯನ್ ಅಥ್ಲೆಟಿಕ್ಸ್ ಸರಣಿ -3ಯ ವೇಳೆ ಸಚಿನ್ ಮೊಣಕೈ ಗಾಯದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ಮೈಖೇಲ್‌ಗೆ ತಿಳಿಸಿವೆ. ಇವರು ಶೀಘ್ರದಲ್ಲಿ ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಲಿದ್ದಾರೆ. ರೋಮ್ ಡೈಮಂಡ್ ಲೀಗ್‌ನಲ್ಲಿ ಮೈದಾನಕ್ಕೆ ಇಳಿದಿಂದ್ದರಿಂದ ಗಾಯ ಹೆಚ್ಚಾಯಿತು ಎಂದು ವರದಿಯಾಗಿದೆ. ಭುವನೇಶ್ವರ್‌ದಲ್ಲಿ ನಡೆಯಲಿರುವ ಅಂತರ-ರಾಜ್ಯ ಅಥ್ಲೆಟಿಕ್ಸ್ ಕ್ರೀಡಾ ಕೂಟವು 2026 ರ ಏಷ್ಯನ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ನೆರವಾಗಲಿದ್ದು, ಸಚಿನ್ ಅವರ ಅನುಪಸ್ಥಿತಿ ದೊಡ್ಡ ಹಿನ್ನಡೆಯಾಗಿದೆ.

World

ಭಾರತದ ಉದಯೋನ್ಮುಖ ಜಾವೆಲಿನ್ ಕ್ರೀಡಾಪಟು ಸಚಿನ್ ಯಾದವ್ ಕ್ರೀಡೆಯಲ್ಲಿ ಹೆಸರು ಮಾಡುತ್ತಿರುವ ಆಟಗಾರ. ಮೂಲತಃ ಉತ್ತರ ಪ್ರದೇಶದವರಾದ ಇವರು, ಆರಂಭದಲ್ಲಿ ಕ್ರಿಕೆಟ್‌ನಲ್ಲಿ ವೇಗದ ಬೌಲರ್ ಆಗಲು ಬಯಸಿದ್ದರು, ಆದರೆ ನಂತರ ಜಾವೆಲಿನ್ ಕ್ರೀಡೆಯತ್ತ ಒಲವು ತೋರಿ ಅದ್ಭುತ ಯಶಸ್ಸು ಕಂಡರು.2025ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 85.16 ಮೀಟರ್ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದಾರೆ. ಅಷ್ಟೇ ಅಲ್ಲದೆ, 2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

Story first published: Wednesday, June 10, 2026, 16:36 [IST]
Other articles published on Jun 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+