
ಎಲ್ಲರಲ್ಲೂ ಕುತೂಹಲ ಕೆರಳಿಸಿತು
ಮೊದಲರ್ಧದವರೆಗೂ ತೀವ್ರ ಜಿದ್ದಾಜಿದ್ದಿನಿಂದ ಕೂಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು. ಆದರೆ ಉಭಯ ತಂಡಗಳಿಂದ ಯಾವುದೇ ಗೋಲ್ ಬಾರದ ಕಾರಣ ಮುಂದಿನ ಕ್ಷಣಗಳ ಬಗ್ಗೆ ಎಲ್ಲರಲ್ಲೂ ಕುತೂಹಲ ಕೆರಳಿಸಿತು.

ಆಕ್ರಮಣಕ್ಕೆ ಹೆಚ್ಚು ಒತ್ತು ಕೊಟ್ಟ ಕೋಸ್ಟರಿಕಾ
ವಿರಾಮದ ನಂತರ ಗೇಮ್ ಪ್ಲಾನ್ ಬದಲಿಸಿ ಆಕ್ರಮಣಕ್ಕೆ ಹೆಚ್ಚು ಒತ್ತು ಕೊಟ್ಟು ಕೋಸ್ಟರಿಕ ತಂಡ ಗ್ರೀಸ್ ಡಿಫೆಂಡರ್‌ಗಳನ್ನು ಚಡಪಡಿಸುವಂತೆ ಮಾಡಿದರು. ಈ ವೇಳೆ ನಾಯಕ ರುಯೀಜ್(52ನೇ ನಿಮಿಷ) ಆಕರ್ಷಕ ಗೋಲ್ ಬಾರಿಸುವುದರೊಂದಿಗೆ ಕೋಸ್ಟರಿಕಾಗೆ 1-0 ಅಂತರದ ಮುನ್ನಡೆ ತಂದು ಕೊಟ್ಟರು.

ಗ್ರೀಕರ ಪೌರುಷದ ಪ್ರದರ್ಶನ
90 ನಿಮಿಷಗಳ ಆಟ ಮುಗಿದು ಇನ್ನೇನು ಗ್ರೀಸ್ ಸೋಲು ಖಚಿತ ಎನ್ನುವಷ್ಟರಲ್ಲೇ (ಗಾಯಾಳು ಸಮಯ) ಬಂದಂಥ ಎಕ್ಸ್‌ಟ್ರಾ ಟೈಮ್‌ನಲ್ಲಿ (90+1) ಪಾಪಾಸಾಹೋ ಪೌಲೋ ಆಕರ್ಷಕ ಗೋಲ್ ಬಾರಿಸುವ ಮೂಲಕ ಪ್ರೇಕ್ಷಕರ ನಾಡಿ ಮಿಡಿತವನ್ನು ಇಮ್ಮಡಿಗೊಳಿಸಿದರು. ಆದರೆ, ಪಂದ್ಯ 1-1 ರ ಸಮಬಲದಲ್ಲಿ ನಿಂತಾಗ ಪೆನಾಲ್ಟಿ ಶೂಟೌಟ್ ಗೆ ಮೊರೆ ಹೋಗಬೇಕಾಯಿತು.

ಪೆನಾಲ್ಟಿ : 5 ನಿಮಿಷದಲ್ಲಿ 5 ಗೋಲು
ಆತ್ಮವಿಶ್ವಾಸದಿಂದ ಪೆನಾಲ್ಟಿ ತೆಗೆದುಕೊಂಡ ಕೋಸ್ಟರಿಕಾ ಆಟಗಾರರಾದ ಸೆಲ್ಸೊ ಬೋರ್ಗೆಸ್, ಬ್ರಿಯಾನ್ ರುಯಿಜ್, ಗೊನ್ಜಲೆಜ್, ಜೊಲ್ ಕ್ಯಾಂಪ್ ಬೆಲ್ ಹಾಗೂ ಉಮಾನಾ ಅವರು ಗೋಲು ಬಾರಿಸಿದರು.
ಗ್ರೀಸ್ ಪರ ಕೊಂಸ್ಟಾಟಿನೊ ಮಿತೆರೊಗ್ಲೊ, ಕ್ರಿಶೊಗೌಲೊಪೊಲೊಸ್, ಜೊಸ್ ಹೊಲೆಬಸ್ ಗೋಲು ಹೊಡೆದರೆ, ಕಳೆದ ವಿಶ್ವಕಪ್ ನ ಹೀರೋ ಗೆಕಾಸ್ ಮಿಸ್ ಮಾಡಿದರು.

ಡಾರ್ಕ್ ಹಾರ್ಸ್ ಮುಂದಿನ ಗುರಿ ಡಚ್ಚರು
ಗ್ರೀಸ್ ಟೂರ್ನಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದರೂ ಕೊನೆಯ ಹಂತಗಳಲ್ಲಿ ಎಡವಿದ್ದು ಮಾತ್ರ ಅಪಾರ ಅಭಿಮಾನಿಗಳಿಗೆ ನಿರಾಶೆ ತಂದಿದೆ. ಕೋಸ್ಟರಿಕಾ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿದ್ದು, ಬಲಿಷ್ಠ ನೆದರ್ಲೆಂಡ್ ತಂಡವನ್ನು ಜುಲೈ 5 ರಂದು ಎದುರಿಸಲಿದೆ.


Click it and Unblock the Notifications