ಜರ್ಮನ್ನರ ಮುಂದೆ 'ಬೆತ್ತಲೆ'ಯಾದ ಬ್ರೆಜಿಲ್
ಬೆಲೊ ಹಾರಿಜಾಂಟೆ, ಜು.9: ವಿಶ್ವಕಪ್ ಇತಿಹಾಸದಲ್ಲೇ ಅತಿಥೇಯ ತಂಡವೊಂದು ಇಷ್ಟು ಹೀನಾಯ ಸೋಲು ಕಂಡಿರಲಿಲ್ಲ. ಜರ್ಮನಿ ತಂಡದ ವೃತ್ತಿ ಪರತೆ, ಕರಾರುವಾಕ್ ದಾಳಿ, ಸೂಕ್ಷ್ಮ ತಂತ್ರಗಾರಿಕೆ ಮುಂದೆ ಬಲಿಷ್ಠ ಬ್ರೆಜಿಲ್ ನೆಲಕಚ್ಚಿದೆ. ಸೆಮಿಫೈನಲ್ ಪಂದ್ಯದಲ್ಲಿ ಬ್ರೆಜಿಲ್ 1-7 ಅಂತರದಿಂದ ಜರ್ಮನ್ನರ ಮುಂದೆ ಮಂಡಿಯೂರುವ ಮೂಲಕ ಅಸಂಖ್ಯ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.
ಐದು ಬಾರಿ ವಿಶ್ವ ಚಾಂಪಿಯನ್ಬ್ರೆಜಿಲ್ಲಿನ ಫುಟ್ಬಾಲ್ ಇತಿಹಾಸದಲ್ಲೇ ಅತ್ಯಂತ ಕರಾಳ ಸೋಲು ಇದಾಗಿದ್ದು, 75 ವರ್ಷಗಳ ಹಿಂದೆ ಅರ್ಜೆಂಟೀನಾಗೆ 0-5ರಿಂದ ಸೋತಿದ್ದೇ ಅದರ ಅತ್ಯಂತ ಹೀನಾಯ ಸೋಲಾಗಿತ್ತು. ಐತಿಹಾಸಿಕ ಗೆಲುವು ದಾಖಲಿಸಿದ ಮೂರು ಬಾರಿ ವಿಶ್ವ ಚಾಂಪಿಯನ್ ಜರ್ಮನಿ ವಿಶ್ವಕಪ್ ನ ಅಂತಿಮ ಹಣಾಹಣಿಗೆ 8ನೇ ಬಾರಿಗೆ ತಲುಪಿ ಹೊಸ ದಾಖಲೆ ಬರೆದಿದೆ.
ಎಲ್ಲರ ನಿರೀಕ್ಷೆ ಹುಸಿ ಮಾಡಿದ ಈ ಪಂದ್ಯ ಹಣೆಬರಹ ಕೇವಲ 29 ನಿಮಿಷಗಳಲ್ಲೇ ನಿರ್ಧಾರವಾಗಿಬಿಟ್ಟಿತ್ತು. ಬ್ರೆಜಿಲ್ ತಂಡದಲ್ಲಿ ಸ್ಟಾರ್ ಆಟಗಾರರಾದ ನೇಮಾರ್(ಮುಂಪಡೆ), ನಾಯಕ ಸಿಲ್ವಾ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಬ್ರೆಜಿಲ್ ತಂಡದ ಡಿಫೆನ್ಸ್, ಕೋಚ್ ಸ್ಕೊಲಾರಿ ರಣತಂತ್ರ ವೈಫಲ್ಯದ ಲಾಭವನ್ನು ಜರ್ಮನ್ನರು ಪಡೆದುಕೊಂಡರು[ಕ್ಲೋಸ್ ಹೊಡೆದ್ರೆ ಗೋಲು, ಜರ್ಮನಿಗಿಲ್ಲ ಸೋಲು]
ಪಂದ್ಯದ ಮೊದಲಾರ್ಧದಲ್ಲೇ ಜರ್ಮನಿ 5-0ಯಿಂದ ಮುನ್ನಡೆ ಗಳಿಸಿದರೂ ಹಸಿವು ಇಂಗಿರಲಿಲ್ಲ. ಪಂದ್ಯದ ಕೊನೆಗೆ 7 ಗೋಲು ಹೊಡೆಸಿಕೊಂಡ ಬ್ರೆಜಿಲ್ ಗೆ ಸಾಮಾಧಾನಕರವಾಗಿ ಆಸ್ಕರ್ 1 ಗೋಲು ಬಾರಿಸಿದ್ದು ಅಭಿಮಾನಿಗಳ ಕಣ್ಣೀರು ತಪ್ಪಿಸಲಾಗಲಿಲ್ಲ.
ಮತ್ತೊಂದು ಸೆಮಿಫೈನಲ್ ನಲ್ಲಿ ಅರ್ಜೆಂಟೀನಾ ಮತ್ತು ನೆದರ್ಲೆಂಡ್ ಮುಖಾಮುಖಿಯಾಗಲಿವೆ. ಫೈನಲ್ ಆಲ್ ಯುರೋಪಿಯನ್ ಫೈನಲ್ ಆಗುವುದೇ ಅಥವಾ ಅರ್ಜೆಂಟಿನಾ ದಕ್ಷಿಣ ಅಮೆರಿಕಾ ಮಾನ ಉಳಿಸುವುದೇ ಕಾದು ನೋಡಬೇಕಿದೆ.

ಮೊದಲಾರ್ಧದಲ್ಲಿ ಜರ್ಮನಿ 5 ಗೋಲುಗಳು
* 11ನೇ ನಿಮಿಷದಲ್ಲಿ ಟೋನಿ ಕ್ರೂಸ್ ನೆರವಿನಿಂದ ಥಾಮಸ್ ಮುಲ್ಲರ್
* 23ನೇ ನಿಮಿಷದಲ್ಲಿ ಮಿರಾಸ್ಲವ್ ಕ್ಲೋಸ್
* 24ನೇ ನಿಮಿಷದಲ್ಲಿ ನಾಯಕ ಫಿಲಿಫೆ ಲಾಮ್ ನೆರವಿನಿಂದ ಟೋನಿ ಕ್ರೂಸ್
* 26ನೇ ನಿಮಿಷದಲ್ಲಿ ಸಮಿ ಖದೀರ ನೆರವಿನಿಂದ ಟೋನಿ ಕ್ರೂಸ್
* 29ನೇ ನಿಮಿಷದಲ್ಲಿ ಮೆಸುಟ್ ಓಜಿಲ್ ನೆರವಿನಿಂದ ಸಮಿ ಖದೀರ

ಅತಿಹೆಚ್ಚು ಗೋಲ್ ಹೊಡೆದ ಮೊದಲ ಆಟಗಾರ
ಅತಿಥೇಯ ಬ್ರೆಜಿಲ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಹಿಗ್ಗಾಮುಗ್ಗಾ ಸೋಲಿಸುವಲ್ಲಿ ಕ್ಲೋಸ್ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ 23ನೇ ನಿಮಿಷದಲ್ಲಿ ಹೊಡೆದ ಗೋಲಿನ ಮೂಲಕ ವಿಶ್ವಕಪ್ ನಲ್ಲಿ ಒಟ್ಟು 16 ಗೋಲ್ ಹೊಡೆಯುವ ಮೂಲಕ ಅತಿಹೆಚ್ಚು ಗೋಲ್ ಹೊಡೆದ ಮೊದಲ ಆಟಗಾರನೆಂಬ ದಾಖಲೆ ಬರೆದರು. [ವಿವರ ಇಲ್ಲಿ ಓದಿ]

ಪಂದ್ಯದ ಕೊನೆಗೆ ಆಸ್ಕರ್ ಗೋಲು
ಪಂದ್ಯದ ಮೊದಲಾರ್ಧದಲ್ಲೇ ಜರ್ಮನಿ 5-0ಯಿಂದ ಮುನ್ನಡೆ ಗಳಿಸಿದರೂ ಹಸಿವು ಇಂಗಿರಲಿಲ್ಲ. ಪಂದ್ಯದ ಕೊನೆಗೆ 7 ಗೋಲು ಹೊಡೆಸಿಕೊಂಡ ಬ್ರೆಜಿಲ್ ಗೆ ಸಾಮಾಧಾನಕರವಾಗಿ ಆಸ್ಕರ್ 1 ಗೋಲು ಬಾರಿಸಿದ್ದು ಅಭಿಮಾನಿಗಳ ಕಣ್ಣೀರು ತಪ್ಪಿಸಲಾಗಲಿಲ್ಲ.
ಆಸ್ಕರ್ ಪಂದ್ಯದ 90ನೇ ನಿಮಿಷದಲ್ಲಿ ಮಾರ್ಸೆಲೊ ನೆರವಿನಿಂದ ಅದ್ಭುತ ಗೋಲು ಗಳಿಸಿದರು.

ದ್ವಿತೀಯಾರ್ಧದಲ್ಲಿ ಶುರೆಲ್ ಆಕ್ರಮಣ
ದ್ವಿತೀಯಾರ್ಧದಲ್ಲಿ ಜರ್ಮನಿಯ ಶುರೆಲ್ ಆಕ್ರಮಣ ನಡೆಸಿ ಪಂದ್ಯದ 69 ಹಾಗೂ 79ನೇ ನಿಮಿಷದಲ್ಲಿ ಮತ್ತೆರಡು ಗೋಲು ಚೆಚ್ಚಿದರು.

ನೇಮಾರ್ ಗಾಗಿ ಪಂದ್ಯ ಗೆಲ್ಲುವ ಮಾತಾಡಿದ್ದರು
ಗಾಯಗೊಂಡು ವಿಶ್ವಕಪ್ ನಿಂದ ಹೊರ ಬಿದ್ದಿರುವ ನೇಮಾರ್ ಗಾಗಿ ಪಂದ್ಯ ಗೆಲ್ಲುವ ಮಾತಾಡಿದ್ದ ಬ್ರೆಜಿಲ್ ಆಟಗಾರರು ಪಂದ್ಯದ ಆರಂಭಕ್ಕೂ ಮುನ್ನ ನೇಮಾರ್ ಜರ್ಸಿ 10 ಹಿಡಿದು ಕೊಂಡು ತೆಗೆಸಿಕೊಂಡ ಫೋಟೋ. ಮೈದಾನದಲ್ಲಿದ್ದ ಬ್ರೆಜಿಲ್ ಅಭಿಮಾನಿಗಳು ಕೂಡಾ ನೇಮಾರ್ ಕ್ಯಾಪ್, ಜರ್ಸಿ ಧರಿಸಿ ನೇಮಾರ್ ನನ್ನು ಸ್ಮರಿಸಿಕೊಂಡರು.

ಜರ್ಮನಿ ತಂಡದ ವಿಜಯೋತ್ಸವ
ಬ್ರೆಜಿಲ್ 94 ವರ್ಷಗಳ ಹಿಂದೆ ಉರುಗ್ವೆ ವಿರುದ್ಧ 0-6 ಅಂತರದಲ್ಲಿ ಸೋತಿತ್ತು. ಜರ್ಮನಿ ವಿಶ್ವಕಪ್ ನಲ್ಲಿ ಈ ಹಿಂದೆ ಸೌದಿ ಅರೇಬಿಯಾ ತಂಡವನ್ನು 8-0 ಅಂತರದಿಂದ ಸೋಲಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications