For Quick Alerts
ALLOW NOTIFICATIONS  
For Daily Alerts

ಹೆಣ್ಣುಮಗುವಿಗೆ ಜನ್ಮ ನೀಡಿದ ವಿಶ್ವಕಪ್ ವಿಜೇತ ಯುವರಾಜ್ ಸಿಂಗ್ ಪತ್ನಿ; ಫೋಟೋ ವೈರಲ್

ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಮತ್ತು ವಿಶ್ವಕಪ್ ವಿಜೇತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಪತ್ನಿ ಹೇಜೆಲ್ ಕೀಚ್ ಶುಕ್ರವಾರ, ಆಗಸ್ಟ್ 25ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಯುವರಾಜ್ ಸಿಂಗ್ ತಮ್ಮ ಮಗಳ ಹೆಸರನ್ನು ಕೂಡಾ ಬಹಿರಂಗಪಡಿಸಿದ್ದು, "ಔರಾ' ಎಂದು ನಾಮಕರಣ ಮಾಡಿದ್ದಾರೆ. ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ನಿದ್ದೆಯಿಲ್ಲದ ರಾತ್ರಿಗಳು ಹೆಚ್ಚು ಸಂತೋಷದಾಯಕವಾಗಿವೆ ಎಂದು ಹೇಳಿದ್ದಾರೆ.

World Cup Winner Yuvraj Singh And His Wife Blessed A Baby Girl; Photo Goes Viral

ಯುವರಾಜ್ ಸಿಂಗ್ ಮತ್ತು ಹೇಜೆಲ್ ಕೀಚ್ 2016ರಲ್ಲಿ ವಿವಾಹವಾಗಿದ್ದರು ಮತ್ತು ಕಳೆದ ವರ್ಷ ತಮ್ಮ ಮೊದಲ ಗಂಡುಮಗು ಓರಿಯನ್‌ಗೆ ಜನ್ಮ ನೀಡಿದ್ದರು.

"ನಮ್ಮ ಪುಟ್ಟ ರಾಜಕುಮಾರಿ ಔರಾಳನ್ನು ಸ್ವಾಗತಿಸಿದ್ದೇವೆ ಮತ್ತು ಇದು ನಮ್ಮ ಕುಟುಂಬವನ್ನು ಪೂರ್ಣಗೊಳಿಸುವುದರಿಂದ ನಿದ್ದೆಯಿಲ್ಲದ ರಾತ್ರಿಗಳು ಹೆಚ್ಚು ಸಂತೋಷದಾಯಕವಾಗಿವೆ," ಎಂದು ಯುವರಾಜ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿರುವ ಯುವರಾಜ್ ಸಿಂಗ್ ಭಾರತ ತಂಡಕ್ಕಾಗಿ ಎಲ್ಲಾ ಸ್ವರೂಪಗಳಲ್ಲಿ 402 ಪಂದ್ಯಗಳನ್ನು ಆಡಿದ್ದಾರೆ. ಇನ್ನು 40 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅಲ್ಲಿ 33.92ರ ಸರಾಸರಿಯಲ್ಲಿ 1900 ರನ್ ಗಳಿಸಿದ್ದಾರೆ.

ಇನ್ನು ಯುವರಾಜ್ ಸಿಂಗ್ ನಿಜವಾಗಿಯೂ ಪ್ರವರ್ಧಮಾನಕ್ಕೆ ಬಂದಿದ್ದು ಏಕದಿನ ಕ್ರಿಕೆಟ್ ಸ್ವರೂಪದಲ್ಲಿ. ಅವರು ಆಡಿದ 304 ಪಂದ್ಯಗಳಲ್ಲಿ 36.ರ ಸರಾಸರಿಯಲ್ಲಿ 8701 ರನ್ ಬಾರಿಸಿದ್ದಾರೆ.

ಗಮನಾರ್ಹವಾಗಿ, ಯುವರಾಜ್ ಸಿಂಗ್ 14 ಶತಕಗಳು ಮತ್ತು 52 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇದು ಅವರ ಸ್ಥಿರ ಪ್ರದರ್ಶನವನ್ನು ಎತ್ತಿ ತೋರಿಸುತ್ತದೆ.

ಇದೇ ವೇಳೆ 58 ಟಿ20 ಪಂದ್ಯಗಳಲ್ಲಿ 28.02ರ ಸರಾಸರಿಯಲ್ಲಿ 1177 ರನ್‌ಗಳನ್ನು ದಾಖಲಿಸಿರುವ ಯುವರಾಜ್ ಸಿಂಗ್ ಚುಟಕು ಸ್ವರೂಪದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ.

ಅಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲೂ ಯುವರಾಜ್ ಸಿಂಗ್ ದೊಡ್ಡ ಸದ್ದು ಮಾಡಿದರು. 12 ವರ್ಷಗಳ ಅವಧಿಯಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸುವ ಎಡಗೈ ಆಲ್‌ರೌಂಡರ್, ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 13 ಅರ್ಧಶತಕಗಳನ್ನು ಒಳಗೊಂಡಂತೆ 2750 ರನ್ ಬಾರಿಸಿದ್ದಾರೆ.

ಆಟದಲ್ಲಿನ ಅಂಕಿಅಂಶಗಳನ್ನು ಮೀರಿ, ಯುವರಾಜ್ ಸಿಂಗ್ ಅವರ ಸಾಧನೆಗಳು ಅವರ ಮೌಲ್ಯವನ್ನು ತಿಳಿಸುತ್ತವೆ. 2007ರ ಐಸಿಸಿ ಚೊಚ್ಚಲ ಟಿ20 ವಿಶ್ವಕಪ್ ಮತ್ತು 2011ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಅವಿಸ್ಮರಣೀಯ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು ಮತ್ತು 2011ರ ಏಕದಿನ ವಿಶ್ವಕಪ್‌ನಲ್ಲಿ ಅವರ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನವು ಅವರನ್ನು ಕ್ರಿಕೆಟ್ ಲೆಜೆಂಡ್ ಆಗಿ ಮಾಡಿತು.

ಯುವರಾಜ್ ಸಿಂಗ್ 2011ರ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಪಡೆದರು ಮತ್ತು ಆಲ್‌ರೌಂಡರ್ ಆಗಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದರು.

ಇದೇ ವೇಳೆ ಕ್ಯಾನ್ಸರ್ ವಿರುದ್ಧದ ಅವರ ಹೋರಾಟ ಮತ್ತು ಶೀಘ್ರದಲ್ಲೇ ಗುಣಮುಖರಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಪುನರಾಗಮನ ಮಾಡಿದ್ದು, ಅವರಿಗೆ ಅಪಾರ ಗೌರವ ಮತ್ತು ಮೆಚ್ಚುಗೆಯನ್ನು ಗಳಿಸುವಂತೆ ಮಾಡಿತು.

ಯುವರಾಜ್ ಸಿಂಗ್ ಜೂನ್ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು, ಭಾರತೀಯ ಕ್ರಿಕೆಟ್‌ನ ಲೆಜೆಂಡ್ ಆಟಗಾರನಾಗಿ ಉಳಿದುಕೊಂಡರು.

Story first published: Friday, August 25, 2023, 22:04 [IST]
Other articles published on Aug 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+