For Quick Alerts
ALLOW NOTIFICATIONS  
For Daily Alerts

ಸಂಗೀತಾ ಫೋಗಾಟ್‌ರನ್ನು ವರಿಸಲಿದ್ದಾರಂತೆ ಕುಸ್ತಿಪಟು ಬಜರಂಗ್‌ ಪೂನಿಯಾ

Bajrang Punia May Wed Sangeeta Phogat

ಹೊಸದಿಲ್ಲಿ, ಆಗಸ್ಟ್‌ 08: ಭಾರತದ ಕುಸ್ತಿ ಜಗತ್ತಿನ ಸ್ಟಾರ್‌ಗಳಾದ ಗೀತಾ ಫೋಗಾಟ್‌, ವಿನೇಶ್‌ ಫೋಗಾಟ್‌ ಮತ್ತು ಸಾಕ್ಷಿ ಮಲಿಕ್‌ ಎಲ್ಲರೂ ಕುಸ್ತಿಪಟುಗಳನ್ನೇ ವಿವಾಹವಾಗಿರುವುದು ವಿಶೇಷ. ಈ ಪಟ್ಟಿಗೆ ಹೊಸ ಹೆಸರು ಸೇರ್ಪಡೆಯಾಗಲಿದ್ದು, ಫೋಗಟ್‌ ಸೋದರಿಯರಲ್ಲಿ ಕಿರಿಯರಾದ ಸಂಗೀತಾ ಫೋಗಾಟ್‌ ಅವರನ್ನು 65 ಕೆಜಿ ವಿಭಾಗದಲ್ಲಿ ವಿಶ್ವದ ನಂ.1 ಕುಸ್ತಿಪಟುವಾಗಿರುವ ಬಜರಂಗ್‌ ಪೂನಿಯಾ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.

ವಿಶ್ವದ ಅಗ್ರಮಾನ್ಯ ಕುಸ್ತಿಪಟುವಾಗಿರುವ ಬಜರಂಗ್‌ ಪೂನಿಯಾ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಡುವ ಭರವಸೆಯ ರೆಸ್ಲರ್‌ ಆಗಿದ್ದಾರೆ.

ಮತ್ತೊಂದೆಡೆ 59 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಸಾಧನೆ ಮಾಡಿರುವ ಸಂಗೀತಾ ಫೋಗಾಟ್‌, ಬಜರಂಗ್‌ ಪೂನಿಯಾ ಅವರನ್ನು ವಿವಾಹವಾಗುವ ವಿಚಾರವನ್ನು ಕುಟುಂಬ ಸದಸ್ಯರ ಮುಂದಿಟ್ಟಿದ್ದಾರೆಂದು ಟೈಮ್ಸ್‌ ಇಂಟರ್‌ನೆಟ್‌ ವರದಿ ಮಾಡಿದೆ. ಭಾರತದ ಈ ಇಬ್ಬರು ಕುಸ್ತಿ ಸ್ಟಾರ್‌ಗಳ ವಿವಾಹ ಟೋಕಿಯೊ ಒಲಿಂಪಿಕ್ಸ್‌ ಬಳಿಕ ನಡೆಯಲಿದೆ ಎಂದು ಟೈಮ್ಸ್‌ ಇಂಟರ್‌ನೆಟ್‌ ತನ್ನ ವರದಿಯಲ್ಲಿ ತಿಳಿಸಿದೆ.

ನೂತನ ಕೋಚ್‌ ಶಾಕೊ ಬೆಂಟಿಂಡಿಸ್‌ ಅವರೊಟ್ಟಿಗೆ ಟೋಕಿಯೊ ಒಲಿಂಪಿಕ್ಸ್‌ ಸಲುವಾಗಿ ಬಜರಂಗ್‌ ಕಠಿಣ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದು, ಮತ್ತೊಂದೆಡೆ ಗಾಯದ ಸಮಸ್ಯೆಯಿಂದ ಚೇತರಿಸಿರುವ ಸಂಗೀತಾ ಫೋಗಾಟ್‌, ರಾಷ್ಟ್ರೀಯ ಶಿಬಿರದಲ್ಲಿ ಪುನಶ್ಚೇತನದಲ್ಲಿ ಪಾಲ್ಗೊಂಡಿದ್ದಾರೆ.

ಈ ಸಂಗತಿಯನ್ನು ಖಾತ್ರಿಪಡಿಸಿರುವ ಫೋಗಾಟ್‌ ಸಹೋದರಿಯರ ಕೋಚ್‌ ಹಾಗೂ ತಂದೆ ಮಹಾವೀರ್‌ ಸಿಂಗ್‌, ಇಬ್ಬರ ಮದುವೆ ಟೋಕಿಯೊ ಒಲಿಂಪಿಕ್ಸ್‌ ಬಳಿಕ ಜರುಗಲಿದೆ ಎಂದು ಹೇಳಿದ್ದಾರೆ. "ಎರಡೂ ಕುಟುಂಬದವರು ಮಾತುಕತೆ ನಡೆಸಿದ್ದೇವೆ. ಆದರೂ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಬಾಕಿ ಇದೆ. ಇದು ಮಕ್ಕಳ ನಿರ್ಧಾರವಾಗಿದ್ದು, ಅವರ ಭಾವನೆಗಳನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ," ಎಂದು ಮಹಾವೀರ್‌ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ನನ್ನ ಮಕ್ಕಳಿಗೆ ಅವರ ಜೀವನದ ನಿರ್ಧಾರವನ್ನು ಅವರೇ ನಿರ್ಧರಿಸುವ ಕುರಿತು ನಾನೆಂದೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಅವರ ಬಾಳ ಸಂಗಾತಿಯನ್ನು ಅವರೇ ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದೇನೆ. ಸಂಗೀತಾ ಬಗ್ಗೆ ಸಂತಸವಿದೆ. ಟೋಕಿಯೊ ಒಲಿಂಪಿಕ್ಸ್‌ ಬಳಿಕ ಮದುವೆ ವಿಚಾರವಾಗಿ ನಿರ್ಧರಿಸಲಿದ್ದೇವೆ," ಎಂದಿದ್ದಾರೆ.

Story first published: Thursday, August 8, 2019, 17:12 [IST]
Other articles published on Aug 8, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+