Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Wrestlers Protest: ಸುಪ್ರೀಂ ಕೋರ್ಟ್ ಮೊರೆಹೋದ ರೆಸ್ಲರ್‌ಗಳು: ನೀರಜ್ ಚೋಪ್ರ ಬೆಂಬಲ

WFI ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಭಾರತೀಯ ರೆಸ್ಲರ್‌ಗಳ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧ ಪಟ್ಟಂತೆ ರೆಸ್ಲರ್‌ಗಳು ಸುಪ್ರೀಂ ಕೋರ್ಟ್ ಕದತಟ್ಟಿದ್ದಾರೆ. ಈ ಪ್ರಕಟಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೆಸ್ಲರ್‌ಗಳು ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ.

ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ(WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕಟಣದಲ್ಲಿ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸದ ವಿಚಾರವಾಗಿ ರೆಸ್ಲರ್‌ಗಳು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದ್ದರು. ರೆಸ್ಲರ್‌ಗಳ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ಆಲಿಸಲಿದೆ. ಈ ಪ್ರೆಕಟಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ನೊಟೀಸ್ ನೀಡಿದೆ.

Wrestlers Protest: Request In Supreme Court, Neeraj Chopra Supports Protesting Wrestlers

ಇನ್ನು ರೆಸ್ಲರ್‌ಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಭಾರತೀಯ ಒಲಿಂಪಿಕ್ಸ್ ಅಸೊಸಿಯೇಶನ್‌ನ ಮುಖ್ಯಸ್ಥೆ ಪಿಟಿ ಉಷಾ ಅಸಮಾಧಾನ ವ್ಯಕ್ತಪಡಿಸಿದ್ದು ಈಗ ಚರ್ಚಗೆ ಕಾರಣವಾಗಿದೆ. ರೆಸ್ಲರ್‌ಗಳ ಪ್ರತಿಭಟನೆಗೆ ಕಿಡಿಕಾರಿರುವ ಪಿಟಿ ಉಷಾ ಪ್ರತಿಭಟನೆಯ ಹಾದಿಯನ್ನು ರೆಸ್ಲರ್‌ಗಳು ಹಿಡಿಯಬಾರದಾಗಿತ್ತು ಇದು ದೇಶಕ್ಕೆ ಹಾಗೂ ಕ್ರೀಡೆಗೆ ಉತ್ತಮ ಬೆಳವಣಿಗೆ ಅಲ್ಲ ಎಂದಿದ್ದರು.

ಇನ್ನು ಪಿಟಿ ಉಷಾ ಅವರ ಈ ಹೇಳಿಕೆಗೆ ಪ್ರತಿಭಟನಾನಿರತ ರೆಸ್ಲರ್‌ಗಳು ಬೇಸರ ವ್ಯಕ್ತಪಡಿಸಿದ್ದಾರೆ. "ಪಿಟಿ ಉಷಾ ಅವರ ಹೇಳಿಕೆಯಿಂದ ನಮಗೆ ನೋವಾಗಿದೆ. ಅವರು ಕೂಡ ಓರ್ವ ಮಹಿಳೆಯಾಗಿ ನಮ್ಮ ಬೆಂಬಲಕ್ಕೆ ನಿಂತಿಲ್ಲ. ನಾವು ಮಾಡಿರುವ ಅಶಿಸ್ತು ಏನು? ನಾವಿಲ್ಲಿ ಶಾಂತಿಯಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ನಮಗೆ ನ್ಯಾಯ ದೊರೆತಿದ್ದರೆ ನಾವು ಇದನ್ನು ಮಾಡಬೇಕಾದ ಅಗತ್ಯವಿರಲಿಲ್ಲ" ಎಂದಿದ್ದಾರೆ ರೆಸ್ಲರ್ ಸಾಕ್ಷಿ ಮಲಿಕ್.

ಇನ್ನು ರೆಸ್ಲರ್‌ಗಳ ಪ್ರತಿಭಟನೆಗೆ ಇತರ ಕ್ರೀಡಾಪಟುಗಳಿಂದಲೂ ಬೆಂಬಲಗಳು ವ್ಯಕ್ತವಾಗುತ್ತಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪಕದ ಗೆದ್ದುಕೊಟ್ಟಿರುವ ನೀರಜ್ ಚೋಪ್ರ ಟ್ವೀಟ್‌ ಮೂಲಕ ಪ್ರತಿಭಟನಾ ನಿತರರಿಗೆ ಬೆಂಬಲ ಸೂಚಿಸಿದ್ದಾರೆ. ಈ ಟ್ವೀಟ್‌ನಲ್ಲಿ ಅವರು "ನಮ್ಮ ದೇಶದ ಅಥ್ಲೀಟ್‌ಗಳು ನ್ಯಾಯಕ್ಕಾಗಿ ಬೀದಿಯಲ್ಲಿ ನಿಂತು ಬೇಡಿಕೊಳ್ಳುತ್ತಿರುವುದು ನೋವುಂಟು ಮಾಡಿದೆ" ಎಂದಿದ್ದಾರೆ.

"ನ್ಯಾಯಕ್ಕಾಗಿ ನಮ್ಮ ಅಥ್ಲೀಟ್‌ಗಳು ಬೀದಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವುದು ನೋವುಂಟು ಮಾಡಿದೆ. ದೇಶವನ್ನು ಪ್ರತಿನಿಧಿಸಲು ಅವರು ಸಾಕಷ್ಟು ಪರಿಶ್ರಮ ಪಟ್ಟಿದ್ದು ನಾವೆಲ್ಲಾ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕ್ರೀಡಾಪಟುವೇ ಆಗಿರಲಿ ಅಥವಾ ಯಾರೇ ಆಗಿರಲಿ ರಾಷ್ಟ್ರವಾಗಿ, ಪ್ರತಿಯೊಬ್ಬ ವ್ಯಕ್ತಿಯ ಸಮಗ್ರತೆ ಮತ್ತು ಘನತೆಯನ್ನು ಕಾಪಾಡುವುದು ಎಲ್ಲರ ಜವಾಬ್ಧಾರಿ. ಈಗ ಆಗಿರುವುದು ಇನ್ನು ಯಾವತ್ತಿಗೂ ನಡೆಯಬಾರದು. ಇದೊಂದು ಸೂಕ್ಷ್ಮ ವಿಚಾರವಾಗಿದ್ದು ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ಪ್ರಕರಣವನ್ನು ನಿಭಾಯಿಸಬೇಕು. ಸಂಬಂಧಿಸಿದವರು ನ್ಯಾಯಕ್ಕಾಗಿ ತಕ್ಷಣವೇ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ ನೀರಜ್ ಚೋಪ್ರ.

Story first published: Friday, April 28, 2023, 11:02 [IST]
Other articles published on Apr 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+